Home Entertainment Jio- Airtel : ಗ್ರಾಹಕರಿಗೆ ಬಂಪರ್ ಆಫರ್ | ದಿನಕ್ಕೆ 2GB ಡೇಟಾ | ಹೊಸ...

Jio- Airtel : ಗ್ರಾಹಕರಿಗೆ ಬಂಪರ್ ಆಫರ್ | ದಿನಕ್ಕೆ 2GB ಡೇಟಾ | ಹೊಸ ಆಫರ್ ಗ್ರಾಹಕ ದಿಲ್ ಖುಷ್

Hindu neighbor gifts plot of land

Hindu neighbour gifts land to Muslim journalist

ಟೆಲಿಕಾಮ್ ದೈತ್ಯ ಕಂಪನಿಗಳಾದ ಜಿಯೋ, ಏರ್ಟೆಲ್ ಜಿದ್ದಿಗೆ ಬಿದ್ದಂತೆ ಹೊಸ ಹೊಸ ಆಫರ್ ಮೂಲಕ ಗ್ರಾಹಕರ ಮನ ಸೆಳೆಯಲು ಹರಸಾಹಸ ಪಡುತ್ತಿದೆ. ಈ ನಡುವೆ ದಿನಕ್ಕೆ 2ಜಿಬಿ ಡೇಟಾ ಆಫರ್ ನೀಡಲು ಜಿಯೋ-ಏರ್​ಟೆಲ್​ ಮುಂದಾಗಿದೆ. ಇತ್ತಿಚಿನ ದಿನಗಳಲ್ಲಿ ಬಹಳಷ್ಟು ಪ್ರಸಿದ್ಧಿ ಪಡೆದಿರುವ 2ಜಿಬಿಯ ಡೇಟಾ ಪ್ಲಾನ್ ಎಂದರೆ ತಪ್ಪಾಗದು.

ಜಿಯೋ, ಏರ್ಟೆಲ್​ನ 2GB ಡೇಟಾದ ಅತ್ಯುತ್ತಮ ಯೋಜನೆಗಳು ಯಾವುದೆಲ್ಲ ಇವೆ ಎಂಬ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ: ಜಿಯೋ-ಏರ್​ಟೆಲ್​ನಿಂದ ಗ್ರಾಹಕರಿಗೆ ಹೊಸ ಆಫರ್ ಸಿದ್ದವಾಗಿದ್ದು, ಈ ಆಫರ್ ನಲ್ಲಿ ಮುಖ್ಯವಾಗಿ ದಿನಕ್ಕೆ 2GB ಡೇಟಾ ಪ್ಲಾನ್ ಒಳಗೊಂಡಿದ್ದು, ಅನಿಯಮಿತ ಕರೆ, ಉಚಿತ ಎಸ್​ಎಮ್​ಎಸ್, ಓಟಿಟಿ ಆಫರ್ ಅನ್ನು ಕೂಡ ನೀಡಲಾಗಿದೆ.

ಇದೀಗ 5G (5G Network) ಸೇವೆ ಆರಂಭಿಸಿದ ಬೆನ್ನಲ್ಲೇ ಜಿಯೋ ಟೆಲಿಕಾಂ ಕಂಪನಿಗಳ ಸೇವೆಯಲ್ಲಿ ಮುನ್ನಡೆ ಕಾಯ್ದಕೊಂಡಿರುವುದರಿಂದ ಇದನ್ನು ಹಿಂದಿಕ್ಕಲು ಏರ್ಟೆಲ್ ಹೊಸ ಆಫರ್​ಗಳನ್ನು ಬಿಡುಗಡೆ ಮಾಡಿ ಗ್ರಾಹಕರನ್ನೂ ಸೆಳೆಯಲು ಮುಂದಾಗಿದೆ. ಇದರ ಜೊತೆಗೆ ಈ ಟೆಲಿಕಾಂ ಕಂಪನಿಗಳು ಆಕರ್ಷಕವಾದ ಪ್ರಿಪೇಯ್ಡ್ ಯೋಜನೆಗಳನ್ನು (Prepaid Plans) ಕೂಡ ನೀಡುತ್ತಿದೆ.

ಟೆಲಿಕಾಂ ದೈತ್ಯ ಕಂಪನಿಗಳಾದ (Telecom Company) ಜಿಯೋ (Jio) ಮತ್ತು ಏರ್ಟೆಲ್​ (Airtel) ಜಿದ್ದಿಗೆ ಬಿದ್ದಂತೆ ಗ್ರಾಹಕರಿಗೆ ಹೊಸ ಆಫರ್​ಗಳನ್ನು ನೀಡುತ್ತಿದ್ದು , ಈ ಹೊಸ ಆಫರ್ ಗಳು ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ದೊರೆಯಲಿದೆ. ಕೆಲ ದಿನಗಳ ಹಿಂದಷ್ಟೇ ಏರ್ಟೆಲ್​ ತನ್ನ ಕಂಪನಿಯಿಂದ ಪ್ರಿಪೇಯ್ಡ್​ ಪ್ಲಾನ್​ನ ಯೋಜನೆಯ ದರವನ್ನು ಏರಿಕೆ ಮಾಡಿದ ಬೆನ್ನಲ್ಲೇ, ಈಗ ಮತ್ತೆ ಗ್ರಾಹಕರಿಗೆ ಹೊಸ ಆಫರ್​ಅನ್ನು (Offers) ನೀಡಲು ಅಣಿಯಾಗಿದೆ.

ಜಿಯೋ 2GB ಡೇಟಾ ಪ್ಲಾನ್:

249 ರೂಪಾಯಿಯ ಪ್ಲಾನ್:

ಈ ಪ್ಲಾನ್​ನಲ್ಲಿ ದಿನಕ್ಕೆ 2GB ಡೇಟಾವನ್ನು ಗ್ರಾಹಕರು ಉಚಿತವಾಗಿ ಪಡೆಯಬಹುದಾಗಿದ್ದು, ಒಟ್ಟು ತಿಂಗಳಿಗೆ 46GB ಡೇಟಾ ದೊರೆಯಲಿದೆ. ಇದರ ಜೊತೆಗೆ, ಅನಿಯಮಿತ ಕರೆ, ದಿನಕ್ಕೆ 100 ಎಸ್​ಎಮ್​ಎಸ್​ ಫ್ರೀ ಯಾಗಿ ಪಡೆಯಬಹುದಾಗಿದೆ. ಈ ಆಫರ್ 23 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಇದಷ್ಟೇ ಅಲ್ಲದೇ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸೆಕ್ಯುರಿಟಿ, ಜಿಯೋ ಕ್ಲೌಡ್ ಚಂದಾದಾರಿಕೆ ಕೂಡ ಉಚಿತವಾಗಿ ಪಡೆಯಬಹುದು.

719 ರೂಪಾಯಿಯ ಪ್ಲಾನ್:

ಈ ಪ್ಲಾನ್​ನಲ್ಲಿ ದಿನಕ್ಕೆ 2GB ಡೇಟಾ ಉಚಿತವಾಗಿ ದೊರೆಯಲಿದ್ದು, ಒಟ್ಟಾರೆಯಾಗಿ 168GB ಡೇಟಾ ಸಿಗಲಿದೆ. ಅನಿಯಮಿತ ಕರೆ ಆಫರ್ ಕೂಡ ಇದ್ದು ದಿನಕ್ಕೆ 100 ಎಸ್​ಎಮ್​ಎಸ್​ ಫ್ರೀ ಇದೆ. ಇಷ್ಟೇ ಅಲ್ಲದೆ, 84 ದಿನಗಳ ವ್ಯಾಲಿಡಿಯನ್ನು ಹೊಂದಿದ್ದು ಜೊತೆಗೆ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸೆಕ್ಯುರಿಟಿ, ಜಿಯೋ ಕ್ಲೌಡ್ ಚಂದಾದಾರಿಕೆ ಉಚಿತವಾಗಿ ದೊರೆಯಲಿದೆ.

299 ರೂಪಾಯಿಯ ಪ್ಲಾನ್ :

ಈ ಪ್ಲಾನ್​ನಲ್ಲಿ ದಿನಕ್ಕೆ 2GB ಡೇಟಾ ಉಚಿತವಾಗಿ ದೊರೆಯಲಿದ್ದು, ಒಟ್ಟು ತಿಂಗಳಿಗೆ 56GB ಡೇಟಾದ ಜೊತೆಗೆ ಅನಿಯಮಿತ ಕರೆ , ದಿನಕ್ಕೆ 100 ಎಸ್​ಎಮ್​ಎಸ್​ ಫ್ರೀಯಾಗಿ ಮಾಡಬಹುದಾಗಿದೆ. ಈ ಯೋಜನೆ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಜೊತೆಗೆ ಈ ಯೋಜನೆ ಮೂಲಕ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸೆಕ್ಯುರಿಟಿ, ಜಿಯೋ ಕ್ಲೌಡ್ ಚಂದಾದಾರಿಕೆ ಉಚಿತವಾಗಿ ದೊರೆಯಲಿದೆ.

533 ರೂಪಾಯಿಯ ಪ್ಲಾನ್:

ಈ ಪ್ಲಾನ್​ ದಿನಕ್ಕೆ 2GB ಡೇಟಾ ಉಚಿತವಾಗಿ ಪಡೆಯಬಹುದಾಗಿದೆ. ಒಟ್ಟಾರೆಯಾಗಿ 112GB ಡೇಟಾದ ಜೊತೆಗೆ ಅನಿಯಮಿತ ಕರೆ , ದಿನಕ್ಕೆ 100 ಎಸ್​ಎಮ್​ಎಸ್​ ಫ್ರೀ ಪಡೆಯ ಬಹುದಾಗಿದೆ. ಇದು 56 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಜೊತೆಗೆ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸೆಕ್ಯುರಿಟಿ, ಜಿಯೋ ಕ್ಲೌಡ್ ಚಂದಾದಾರಿಕೆ ಉಚಿತವಾಗಿ ದೊರೆಯಲಿದೆ.

2879 ರೂಪಾಯಿಯ ಪ್ಲಾನ್:

ಈ ಪ್ಲಾನ್​ನಲ್ಲಿ ದಿನಕ್ಕೆ 2GB ಡೇಟಾ ಉಚಿತವಾಗಿ ದೊರೆಯಲಿದ್ದು, ಒಟ್ಟಾರೆಯಾಗಿ 730GB ಡೇಟಾ ಸಿಗಲಿದ್ದು, ಅನಿಯಮಿತ ಕರೆ ಆಫರ್ ಕೂಡ ಇದ್ದು ದಿನಕ್ಕೆ 100 ಎಸ್​ಎಮ್​ಎಸ್​ ಪಡೆಯ ಬಹುದಾಗಿದೆ. ಇದು 365 ದಿನಗಳ ವ್ಯಾಲಿಡಿಯ ಜೊತೆಗೆ ಜಿಯೋ ಆ್ಯಪ್ ಚಂದಾದಾರಿಕೆ ಉಚಿತವಾಗಿ ಪಡೆಯಬಹುದಾಗಿದೆ.

ಇನ್ನು ಏರ್​ಟೆಲ್​ನ ಡೇಟಾ ಪ್ಲಾನ್ ನೋಡುವುದಾದರೆ:

319 ರೂಪಾಯಿಯ ಪ್ಲಾನ್: ಈ ಪ್ಲಾನ್​ನಲ್ಲಿ ದಿನಕ್ಕೆ 2GB ಡೇಟಾ ಉಚಿತವಾಗಿ ಪಡೆಯಬಹುದಾಗಿದ್ದು, ಅನಿಯಮಿತ ಕರೆಯ ಜೊತೆಗೆ ಒಟ್ಟು 100 ಎಸ್​ಎಮ್​ಎಸ್​ ಫ್ರೀಯಾಗಿ ಪಡೆಯಬಹುದಾಗಿದೆ. ಇದಲ್ಲದೆ, ಒಂದು ತಿಂಗಳ ವ್ಯಾಲಿಡಿಟಿಯನ್ನು ಹೊಂದಿದ್ದು ಜೊತೆಗೆ ಹೆಲೋ ಟ್ಯೂನ್ಸ್ ಮತ್ತು ಉಚಿತ ವಿಂಗ್ ಮ್ಯೂಸಿಕ್ ಚಂದಾದಾರಿಕೆ ಹೊಂದಬಹುದಾಗಿದೆ.

359 ರೂಪಾಯಿಯ ಪ್ಲಾನ್:

ಈ ಪ್ಲಾನ್​ನಲ್ಲಿ ದಿನಕ್ಕೆ 2GB ಡೇಟಾ ಉಚಿತವಾಗಿ ದೊರೆಯಲಿದ್ದು, ಅನಿಯಮಿತ ಕರೆ ಆಫರ್ ಜೊತೆಗೆ ಒಟ್ಟು 100 ಎಸ್​ಎಮ್​ಎಸ್​ ಫ್ರೀಯಾಗಿ ಪಡೆಯಬಹುದಾಗಿದೆ. ಇದು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಹೆಲೋ ಟ್ಯೂನ್ಸ್ ಮತ್ತು ಉಚಿತ ವಿಂಗ್ ಮ್ಯೂಸಿಕ್ ಚಂದಾದಾರಿಕೆ ಪಡೆಯಬಹುದಾಗಿದೆ.

399 ರೂಪಾಯಿಯ ಪ್ಲಾನ್:

ಈ ಪ್ಲಾನ್​ನಲ್ಲಿ ದಿನಕ್ಕೆ 2.5GB ಡೇಟಾ ಉಚಿತವಾಗಿ ದೊರೆಯಲಿದ್ದು,ಅನಿಯಮಿತ ಕರೆ ಆಫರ್ ಜೊತೆಗೆ ಒಟ್ಟು 100 ಎಸ್​ಎಮ್​ಎಸ್​ ಫ್ರೀ ಯಾಗಿ ದ್ದು, ಇದು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

499 ರೂಪಾಯಿಯ ಪ್ಲಾನ್:

ಈ ಪ್ಲಾನ್​ನಲ್ಲಿ ದಿನಕ್ಕೆ 2GB ಡೇಟಾ ಉಚಿತವಾಗಿ ಸಿಗುತ್ತದೆ. ಅನಿಯಮಿತ ಕರೆ ಆಫರ್ ಜೊತೆಗೆ, ಒಟ್ಟು 100 ಎಸ್​ಎಮ್​ಎಸ್​ ಫ್ರೀ ಪಡೆಯ ಬಹುದಾಗಿದೆ. ಇಷ್ಟೇ ಅಲ್ಲದೆ, ಇದು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಒಂದು ವರ್ಷದ ಡಿಸ್ನಿ+ ಹಾಟ್​ಸ್ಟಾರ್ ಚಂದಾದಾರಿಕೆಯನ್ನೂ ಪಡೆಯಬಹುದಾಗಿದೆ.