Browsing Category

ಉಡುಪಿ

ಉಡುಪಿ:ಜಿಲ್ಲೆಯಲ್ಲೇ ಮೊದಲು ಸಂಪೂರ್ಣ ಹವಾನಿಯಂತ್ರಿತ ಅಂಗನವಾಡಿ ಕೇಂದ್ರ ಉದ್ಘಾಟನೆಗೆ ಸಜ್ಜು!!ತಂಪಾದ ಕೊಠಡಿಯಲ್ಲಿ…

ಉಡುಪಿ: ಗ್ರಾಮ ಪಂಚಾಯತ್ ಅಧ್ಯಕ್ಷರೊಬ್ಬರ ಸತತ ಪ್ರಯತ್ನದ ಫಲವಾಗಿ ಜಿಲ್ಲೆಯಲ್ಲೇ ಮೊದಲ ಬಾರಿಗೆ ಹವಾನಿಯಂತ್ರಿತ ಅಂಗನವಾಡಿ ಕೇಂದ್ರವೊಂದು ಉದ್ಘಾಟನೆಗೆ ಸಜ್ಜಾಗಿ ನಿಂತಿದೆ. ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಶಿರ್ವ ಗ್ರಾಂ.ಪಂ ವ್ಯಾಪ್ತಿಯ ಬಂಟಕಲ್ಲು ಎಂಬಲ್ಲಿ ದಾನಿಗಳ, ಸಂಘ ಸಂಸ್ಥೆಗಳ

ಉಡುಪಿ: ಮಗುವನ್ನು ಮನೆಯಲ್ಲಿ ಬಿಟ್ಟು ಹೊರಹೋದ ಮಹಿಳೆ ಮನೆಗೆ ಬಾರದೆ ನಾಪತ್ತೆ!! ಠಾಣೆಯಲ್ಲಿ ಪ್ರಕರಣ ದಾಖಲು-ಪತ್ತೆಗೆ…

ಎರಡೂವರೆ ವರ್ಷದ ಮಗುವನ್ನು ಮನೆಯಲ್ಲಿ ಬಿಟ್ಟು ಹೊರ ಹೋಗಿದ್ದ ಮಹಿಳೆಯೋರ್ವರು ವಾಪಸ್ಸು ಮನೆಗೆ ಬಾರದೆ ನಾಪತ್ತೆಯಾದ ಘಟನೆಯೊಂದು ಉಡುಪಿಯಲ್ಲಿ ನಡೆದಿದೆ. ನಾಪತ್ತೆಯಾದ ಮಹಿಳೆಯನ್ನು ಕೊರಂಗ್ರಪಾಡಿ ಸಮೀಪ ಬಾಡಿಗೆ ಮನೆಯಲ್ಲಿ ವಾಸವಿದ್ದ ಅಕ್ಷತಾ(27)ಎಂದು ಗುರುತಿಸಲಾಗಿದೆ. ಮಾರ್ಚ್ ಹತ್ತರಂದು

ಉಡುಪಿ : ಅಣ್ಣ – ತಮ್ಮಂದಿರ ಗಲಾಟೆ | ಸಿಟ್ಟಿನ ಭರದಲ್ಲಿ ಅಣ್ಣನನ್ನೇ ಕತ್ತಿಯಿಂದ ಕಡಿದು ಕೊಂದ ತಮ್ಮ

ತಮ್ಮನೇ ಅಣ್ಣನನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿರುವ ಘಟನೆ ಉಡುಪಿ ತಾಲೂಕಿನ 80 ಬಡಗುಬೆಟ್ಟು ಗ್ರಾಮದ ಕಬ್ಯಾಡಿ ಕಂಬಳಕಟ್ಟ ಎಂಬಲ್ಲಿ ನಡೆದಿದೆ. ಮನೆಯಲ್ಲಿ ವಾಸ್ತವ್ಯ ವಿಚಾರದಲ್ಲಿ ಈ ಕೊಲೆ ನಡೆದಿದೆ. ಕಬ್ಯಾಡಿ ಕಂಬಳಕಟ್ಟ ನಿವಾಸಿ 43 ವರ್ಷದ ಬಾಲಕೃಷ್ಣ ನಾಯ್ಕ ಕೊಲೆಯಾದ ವ್ಯಕ್ತಿ.

ಸ್ಕ್ರಾಪ್ ಆಗಿ ಗುಜಿರಿ ಸೇರಬೇಕಿದ್ದ ಬಸ್ ನಲ್ಲಿ ಸ್ಮಾರ್ಟ್ ತರಗತಿ!! ಉಡುಪಿಯಲ್ಲೊಂದು ವಿಭಿನ್ನ ಪ್ರಯತ್ನ-ರಾಜ್ಯದಲ್ಲೇ…

ಇಂದಿನ ಕಾಲಘಟ್ಟದಲ್ಲಿ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯು ಕ್ಷೀಣಿಸುತ್ತಿರುವ ಬೆನ್ನಲ್ಲೇ ವಿದ್ಯಾರ್ಥಿಗಳನ್ನು ಮರು ಆಕರ್ಷಿಸಲು ಉಡುಪಿ ಜಿಲ್ಲೆಯಲ್ಲೊಂದು ಶಾಲೆ ಹೊಸ ಮಾದರಿಯನ್ನು ಪ್ರಯೋಗಿಸಿದ್ದು, ಸದ್ಯ ಇಡೀ ರಾಜ್ಯದಲ್ಲೇ ಹೆಚ್ಚು ಸುದ್ದಿಯಾಗಿದೆ. ಉಡುಪಿ ಜಿಲ್ಲೆಯ ಕುಂದಾಪುರ

ಉಡುಪಿ: ಕೆಮ್ಮುವಿನ ಸಿರಪ್ ಎಂದು ಭಾವಿಸಿ ಇಲಿ ಪಾಷಾಣ ಕುಡಿದ ಮಹಿಳೆ ಸಾವು

ಕೆಮ್ಮುವಿನ ಸಿರಪ್ ಅಂದುಕೊಂಡು ಬಾಟಲಿಯಲ್ಲಿದ್ದ ಇಲಿ ಪಾಷಾಣವನ್ನು ಕುಡಿದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಬ್ರಹ್ಮಾವರದ ಪೆಜಮಂಗೂರು ಗ್ರಾಮದ ಗುಂಡಾಲು ಎಂಬಲ್ಲಿ ನಡೆದಿದೆ. ಶೀನ ನಾಯ್ಕ ಎಂಬವರ ಪತ್ನಿ ದೇವಕಿ(47) ಮೃತ ಮಹಿಳೆ. ದೇವಕಿ ಅವರಿಗೆ ಕೆಮ್ಮು ಇದ್ದ ಕಾರಣ ಸಿರಪ್

ಮಲ್ಪೆ ಬಂದರಿನಲ್ಲಿ ಮೀನುಗಾರರ ಬಲೆಗೆ ಬಿದ್ದ 250 ಕೆಜಿ ತೂಕದ ಗರಗಸ ಶಾರ್ಕ್ ಮೀನು!!!

ಉಡುಪಿ : ಇಲ್ಲಿ ಮಲ್ಪೆ ಬಂದರಿನಲ್ಲಿ 250 ಕೆಜಿ ತೂಕದ ಅಪರೂಪದ ಮೀನು ಪತ್ತೆಯಾಗಿದೆ. ತನ್ನ ಗಾತ್ರ ಮಾತ್ರವಲ್ಲ ನೋಡಲು ಕೂಡಾ ಭಯಾನಕವಾಗಿ ತೋರುವ ಈ ಮೀನು ಬಂದರಿನಲ್ಲಿ ನೆರೆದಿದ್ದ ಮೀನುಗಾರರ ಅಚ್ಚರಿಗೆ ಕಾರಣವಾಗಿದೆ. ಮೀನು ಹಿಡಿಯಲು ತೆರಳಿದ್ದ ಸೀ ಕ್ಯಾಪ್ಟನ್ ಎಂಬ ಲೈಲ್ಯಾಂಡ್ ಬೋಟಿನವರು

ಉಡುಪಿ : ಕ್ಷುಲ್ಲಕ ಕಾರಣಕ್ಕೆ ಲಾರಿ ಚಾಲಕನಿಗೆ ಹಲ್ಲೆ

ಉಡುಪಿ : ಕ್ಷುಲ್ಲಕ ಕಾರಣಕ್ಕೆ ಲಾರಿ ಚಾಲಕನಿಗೆ ರಸ್ತೆಯಲ್ಲಿಯೇ ಕಾರು ಚಾಲಕನೊಬ್ಬ ಹಲ್ಲೆಗೈದು, ಅವಾಚ್ಯವಾಗಿ ನಿಂದಿಸಿದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ಕಾಳಾವರ ಸಮೀಪದ ಅಸೋಡಿನಲ್ಲಿ ನಡೆದಿದೆ. ತಲ್ಲೂರು ಗೋದಾಮಿನಿಂದ ನ್ಯಾಯಬೆಲೆ ಅಂಗಡಿಗಳಿಗೆ ಅಕ್ಕಿ ಸಾಗಾಟ ಮಾಡುತ್ತಿದ್ದ ಅನ್ನಭಾಗ್ಯ

ಕಾರ್ಕಳ: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಒಡಹುಟ್ಟಿದ ಅಣ್ಣನನ್ನೇ‌ ಚಾಕುವಿನಿಂದ ತಿವಿದು ಕೊಂದ ತಮ್ಮ !!

ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ತನ್ನ ಸ್ವಂತ ಅಣ್ಣನನ್ನೇ ತಮ್ಮ ಚಾಕುವಿನಿಂದ ಇರಿದು ಕೊಂದ ಅಮಾನವೀಯ ಘಟನೆ ಕಾರ್ಕಳ ತಾಲೂಕಿನ ನಿಟ್ಟೆ ಬಜಕಳದಲ್ಲಿ ಭಾನುವಾರ ನಡೆದಿದೆ. ನಿಟ್ಟೆ ಬಜಕಳದ ಶೇಖರ್ (50) ಕೊಲೆಯಾದ ದುರ್ದೈವಿ ಹಾಗೂ ಅವರ ಕಿರಿಯ ಸಹೋದರ ರಾಜು (35) ಕೊಲೆ ಮಾಡಿದ ಆರೋಪಿ.