ರಾಮಮಂದಿರ ನಿರ್ಮಾಣಕ್ಕೆ ಮಹೂರ್ತ ಫಿಕ್ಸ್ ‘ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ‘ ಟ್ರಸ್ಟ್ ನ ಹೊಸ ಹೆಸರು : ಲೋಕಸಭೆಯಲ್ಲಿ ನರೇಂದ್ರ ಮೋದಿ ಘೋಷಣೆ
ರಾಮಮಂದಿರ ನಿರ್ಮಾಣಕ್ಕೆ ಮುಹೂರ್ತವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿ ಘೋಷಿಸುವುದರ ಬೆನ್ನಲ್ಲೇ “ಜೈ ಶ್ರೀರಾಮ್”,” ಜೈ ಶ್ರೀರಾಮ್” ಎಂಬ ಘೋಷವಾಕ್ಯ ಸಂಸತ್ತಿನಲ್ಲಿ ಅನುರಣನಗೊಂಡವು.
ಶ್ರೀರಾಮ ಜನ್ಮಭೂಮಿ ಗೆ ಸಂಬಂಧಿಸಿದ ಟ್ರಸ್ಟ್ ಅನ್ನು ‘ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ‘ ಎಂದು ಹೆಸರಿಡಲಾಗಿದೆ. ನಿನ್ನೆ ಬೆಳಿಗ್ಗೆ ನಡೆದ ಕ್ಯಾಬಿನೆಟ್ ಮೀಟಿಂಗಿನಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
“ನಾವು ಶ್ರೀರಾಮ ಭಕ್ತರಿಗೆ ಬೇಕಾದ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ರಾಮಜನ್ಮಭೂಮಿ ಗೆ ಕೋರ್ಟ್ ನೀಡಿದ ಜಾಗವಲ್ಲದೆ ಇನ್ನೂ ಅರವತ್ತೇಳು ಹೆಕ್ಟೇರ್ ಜಾಗವನ್ನು ನಾವು ಶ್ರೀರಾಮ ಜನ್ಮಭೂಮಿ ಟ್ರಸ್ಟ್ ಗೆ ವಹಿಸಿಕೊಡಲಿದ್ದೇವೆ. ಧರ್ಮಾತೀತವಾಗಿ ಸುತ್ತಮುತ್ತಲ ಜನರು ಅಭಿವೃದ್ಧಿ ಕಾಣಲಿ” ಎಂದು ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಹೇಳಿದರು.
ಕಳೆದ ನವೆಂಬರ್ 9ರಂದು ಸುಪ್ರೀಂಕೋರ್ಟ್ ನೀಡಿದ ಮಹತ್ವದ ಐತಿಹಾಸಿಕ ತೀರ್ಪಿನ ಭಾಗವಾಗಿ ರಾಮಮಂದಿರ ನಿರ್ಮಾಣಕ್ಕೆ ಟ್ರಸ್ಟ್ ಒಂದನ್ನು ಕೇಂದ್ರ ಸರಕಾರ ಸ್ಥಾಪಿಸಬೇಕು ಮತ್ತು ಅದಕ್ಕೆ ಅಗತ್ಯವಿರುವ ಎಲ್ಲ ಸಹಕಾರವನ್ನು ಕೇಂದ್ರ ಸರ್ಕಾರ ನೀಡಬೇಕು ಎಂದು ಸುಪ್ರೀಂ ಕೋರ್ಟು ನಿರ್ದೇಶಿಸಿತ್ತು.