Electrocuted: ಹೊಸ ಮನೆ ನಿರ್ಮಾಣಕ್ಕೆ ನೀರು ಹಾಕಲೆಂದು ಪಂಪ್‌ಸೆಟ್‌ ಆನ್‌ ಮಾಡುವ ವೇಳೆ ವಿದ್ಯುತ್‌ ಶಾಕ್‌: ಬಾಲಕಿ ಸಾವು

Share the Article

Electrocuted: ಹುಲಸೂರ: ಹೊಸ ಮನೆಯ ನಿರ್ಮಾಣ ಮಾಡುತ್ತಿರುವಾಗ ಮನೆಗೆ ನೀರು ಹಾಕಲೆಂದು ಪಂಪ್‌ ಸೆಟ್‌ ಆನ್‌ ಮಾಡಲೆಂದು ಹೋದಾಗ ವಿದ್ಯುತ್‌ ಶಾಕ್‌ ಆಗಿ ಸ್ಥಳದಲ್ಲಿಯೇ 8 ನೇ ತರಗತಿಯ ಬಾಲಕಿ ಸಾವಿಗೀಡಾಗಿರುವ ಘಟನೆ ಹುಲಸೂರು ತಾಲ್ಲೂಕಿನ ತೋಗಲೂರ ಗ್ರಾಮದಲ್ಲಿ ನಡೆದಿದೆ.

ಈ ಘಟನೆ ಸೋಮವಾರ ನಡೆದಿದೆ. ಬೆಳಗ್ಗೆ ಹೊಸ ಮನೆಗೆ ನೀರು ಹಾಕಲು ನೀರಿನ ಮೋಟರ್‌ ಆನ್‌ ಮಾಡಲೆಂದು ಹೋದ ಸಂದರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್‌ ತಗುಲಿದೆ ಎಂದು ಪೊಲೀಸರು ಹೇಳಿದ್ದಾರೆ ಎಂದು ವರದಿಯಾಗಿದೆ.

ಹುಲಸೂರ್‌ ಪೊಲೀಸ್‌ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಿದೆ.

Comments are closed.