Comedy Kiladi Family : ರಾಕೇಶ್ ಪೂಜಾರಿ ತಂಗಿಗಾಗಿ ಕಾಮಿಡಿ ಕಿಲಾಡಿ ತಂಡದಿಂದ ಮಹತ್ವದ ನಿರ್ಧಾರ!!

Comedy Kiladi Family: ಇಡೀ ಕನ್ನಡ ನಾಡಿನ ಜನತೆಯನ್ನು ಕಾಮಿಡಿ ಮೂಲಕ ನಕ್ಕು ನಲಸಿದ ಕಾಮಿಡಿ ಕಿಲಾಡಿ ಖ್ಯಾತಿಯ ರಾಕೇಶ್ ಪೂಜಾರಿ ನೆನ್ನೆ ತಾನೇ ಹೃದಯಘಾತದಿಂದ ನಮ್ಮೆಲ್ಲರನ್ನು ಅಗಲಿದ್ದಾರೆ. ಈ ವೇಳೆ ಕಾಮಿಡಿ ಕಿಲಾಡಿ ಕುಟುಂಬ ಹಾಗೂ ನಾಡಿನ ಹಿರಿಯ ಕಲಾವಿದರು ಸಂತಾಪಸೂಚಿಸಿದ್ದಾರೆ.
ಇನ್ನು ರಾಕೇಶ್ ಪೂಜಾರಿ ಅವರಿಗೆ ತನ್ನ ತಂಗಿಯನ್ನು ಅದ್ದೂರಿಯಾಗಿ ಮದುವೆ ಮಾಡಿಕೊಡಬೇಕೆಂಬುದು ಬಹುದೊಡ್ಡ ಕನಸಾಗಿತ್ತು. ಆದರೆ ಈ ಕನಸು ನನಸಾಗುವ ವೇಳೆಗೆ ರಾಕೇಶ್ ಪೂಜಾರಿ ಎಲ್ಲರನ್ನು ಅಗಲಿದ್ದಾರೆ. ಅವರ ಕನಸು ನನಸಾಗದೆ ಉಳಿಯಿತಲ್ಲ ಎಂಬ ನೋವು ಇಡೀ ಕಾಮಿಡಿ ಕಿಲಾಡಿಗಳ ಕುಟುಂಬದ್ದಾಗಿದೆ. ಹೀಗಾಗಿ ಕಾಮಿಡಿ ಕಿಲಾಡಿ ಕುಟುಂಬದ ಎಲ್ಲ ಸದಸ್ಯರು ರಾಕೇಶ್ ತಂಗಿ ಮದುವೆ ವಿಚಾರವಾಗಿ ಒಂದು ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರೆ.
ಹೌದು, ಇದೀಗ ರಾಕೇಶ್ ತಂಗಿ ಮದುವೆ ಜವಾಬ್ಧಾರಿಯನ್ನು ಕಾಮಿಡಿ ಕಿಲಾಡಿಗಳು ಟೀಂ ತೆಗೆದುಕೊಂಡಿದೆ. ಇದನ್ನು ಶೋ ನಡೆಸಿಕೊಡುತ್ತಿದ್ದ ನಿರೂಪಕ ಮಾಸ್ಟರ್ ಆನಂದ್ ಬಹಿರಂಗಪಡಿಸಿದ್ದಾರೆ. ಕೈಲಾಸವೇ ತಂದಿಟ್ಟರೂ ರಾಕೇಶ್ ಸಹೋದರಿಯ ದುಃಖ ಭರಿಸಲು ನಮಗೆ ಸಾಧ್ಯವಿಲ್ಲ. ಆದರೆ ಅವಳ ಮದುವೆ ಮಾಡಬೇಕು ಎನ್ನುವುದು ರಾಕೇಶ್ ಕನಸಾಗಿತ್ತು. ಹೀಗಾಗಿ ಅದನ್ನು ಕಾಮಿಡಿ ಕಿಲಾಡಿಗಳು ಟೀಂ ಮಾಡಲಿದೆ. ಅವಳ ಮದುವೆ ಜವಾಬ್ಧಾರಿ ನಮ್ಮದು ಎಂದಿದೆ.
Comments are closed.