Virat Kohli: ‘ನೀವು ನಿಜಕ್ಕೂ ಸಂತೋಷವಾಗಿದ್ದೀರಾ’? ಎಂದ ಸ್ವಾಮೀಜಿ – ಇಷ್ಟೆಲ್ಲಾ ಖ್ಯಾತಿ, ಆಸ್ತಿ ಇದ್ರೂ ಕೊಹ್ಲಿ ಉತ್ತರ ಹೀಗಿತ್ತು

Virat Kohli: ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾದ ಬಳಿಕ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ತಾವು ಆರಾಧಿಸುವಂತಹ ಪ್ರೇಮಾನಂದ ಮಹಾರಾಜ್ ಅವರ ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಪ್ರೇಮಾನಂದ ಮಹಾರಾಜರು ವಿರಾಟ್ ಕೊಹ್ಲಿಗೆ ನೀವು ಸಂತೋಷವಾಗಿದ್ದೀರಾ ಎಂದು ಕೇಳಿದ್ದಾರೆ. ಇದಕ್ಕೆ ವಿರಾಟ್ ಕೊಹ್ಲಿ ಅಚ್ಚರಿಯ ಉತ್ತರವನ್ನು ನೀಡಿದ್ದಾರೆ.
ಹೌದು, ಕೊಹ್ಲಿ ಪ್ರೇಮಾನಂದ ಮಹಾರಾಜ್ ಅವರನ್ನು ಭೇಟಿಯಾದಾಗ, ಮಹಾರಾಜ್ ಜಿ ಅವರನ್ನು ನೀವು ಸಂತೋಷವಾಗಿದ್ದೀರಾ ಎಂದು ಕೇಳಿದರು. ಅದಕ್ಕೆ ಸಕಾರಾತ್ಮಕವಾಗಿ ಉತ್ತರಿಸಿದ್ದಾರೆ ಕೊಹ್ಲಿ. ಮಹಾರಾಜ್ ಕೊಹ್ಲಿ ಮತ್ತು ಅನುಷ್ಕಾ ಅವರೊಂದಿಗೆ ಬಹಳ ಹೊತ್ತು ಮಾತನಾಡಿದ್ದಾರೆ. ಇನ್ನು ಮಹಾರಾಜ್ ಜೀ ಹೇಳುತ್ತಿರುವುದನ್ನು ಕೊಹ್ಲಿ ಗಮನವಿಟ್ಟು ಕೇಳುತ್ತಿದ್ದರು. ಪ್ರೇಮಾನಂದ ಮಹಾರಾಜ್ ಅವರನ್ನು ಭೇಟಿಯಾದ ನಂತರ ಕೊಹ್ಲಿ ಮತ್ತು ಅನುಷ್ಕಾ ತುಂಬಾ ಸಂತೋಷದಿಂದ ಕಾಣುತ್ತಿದ್ದರು. ಇಬ್ಬರ ಮುಖದಲ್ಲೂ ತೃಪ್ತಿಯ ಭಾವ ಸ್ಪಷ್ಟವಾಗಿ ಕಾಣುತ್ತಿತ್ತು
Comments are closed.