Mangaluru : ರೈಲಿನಲ್ಲಿ ಸೀಟಿಗಾಗಿ ಜಗಳ ಮಾಡಿಕೊಂಡು ಚೈನ್ ಎಳೆದ ಪ್ರಯಾಣಿಕ – ಬಿತ್ತು ಭಾರಿ ಮೊತ್ತದ ದಂಡ!!

Share the Article

Mangaluru : ರೈಲಿನಲ್ಲಿ ಪ್ರಯಾಣಿಸುವಾಗ ಸೀಟಿನ ವಿಚಾರಕ್ಕಾಗಿ ಪ್ರಯಾಣಿಕರ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ಸಿಟ್ಟುಕೊಂಡ ಪ್ರಯಾಣಿಕನೊಬ್ಬ ಚೈನ್ ಎಳೆದು ರೈಲನ್ನು ನಿಲ್ಲಿಸಿದ್ದಾನೆ. ಹೀಗೆ ಚೈನ್‌ ಎಳೆದು ರೈಲು ನಿಲ್ಲಿಸಿದ ಕಾರಣಕ್ಕೆ ಪ್ರಯಾಣಿಕನಿಗೆ 1,500 ರೂ. ದಂಡ ಹಾಕಲಾಗಿದೆ.

ಹೌದು, ಸುಬ್ರಹ್ಮಣ್ಯದಿಂದ ಬೆಳಗ್ಗೆ ಹೊರಟ ಪ್ಯಾಸೆಂಜರ್‌ ರೈಲಿ ನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿತ್ತು. ಬಂಟ್ವಾಳದಲ್ಲಿ ಸೀಟಿನ ವಿಚಾರವಾಗಿ ಇಬ್ಬರು ಪ್ರಯಾಣಿಕರ ನಡುವೆ ಜಗಳ ಉಂಟಾಗಿ, ಪ್ರಯಾಣಿಕ ತುರ್ತು ಚೈನ್‌ ಎಳೆದಿದ್ದಾನೆ. ತತ್‌ಕ್ಷಣ ರೈಲು ನಿಂತಿದ್ದು, ಅಧಿಕಾರಿಗಳು ಬಂದು ಮಾಹಿತಿ ಪಡೆದರು. ರೈಲು ಮಂಗಳೂರು ಜಂಕ್ಷನ್‌ ನಿಲ್ದಾಣಕ್ಕೆ ತಲುಪಿದಾಗ ಚೈನ್‌ ಎಳೆದ ವ್ಯಕ್ತಿಯನ್ನು ಆರ್‌ಪಿಎಫ್‌ ಆಧಿಕಾರಿಗಳು ವಿಚಾರಣೆ ನಡೆಸಿ, ದಂಡ ವಿಧಿಸಿ ಎಚ್ಚರಿಸಿದ್ದಾರೆ.

Comments are closed.