ಬೆಳ್ತಂಗಡಿಯ ಕಡಿರುದ್ಯಾವರದಲ್ಲಿ ದೇವಸ್ಥಾನದ ಪಕ್ಕ ದನದ ರುಂಡ ಎಸೆದು ಹೋದ ದುಷ್ಕರ್ಮಿಗಳು | ಇದು ಗಲಭೆ ನಡೆಸುವ ಸಂಚಾ ?!

Share the Article

ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರದ ಹೇಡ್ಯ ಎಂಬಲ್ಲಿ ಮಾರಿಯಮ್ಮ ಗುಡಿಯ ಬಳಿ ದನದ ತಲೆಯೊಂದು ಪತ್ತೆಯಾಗಿ ಅಲ್ಲಿನ ಗ್ರಾಮಸ್ಥರು ಬೆಚ್ಚಿ ಬೀಳುವಂತಾಗಿದೆ.

ಅಪರಿಚಿತ ವ್ಯಕ್ತಿಗಳು ಅಲ್ಲಿ ಅದ್ಯಾವ ಕಾರಣಕ್ಕೆ ದನದ ತಲೆ ಕಡಿದು ಅಲ್ಲಿ ತಲೆ ಎಸೆದು ಹೋಗಿದ್ದಾರೆ ಎಂಬ ಬಗ್ಗೆ ಈಗ ಅನುಮಾನ ಮೂಡಿದೆ.

ದುಷ್ಕರ್ಮಿಗಳು ಬಹುಶಃ ಮೊನ್ನೆ, ಅಂದರೆ ಬುಧವಾರ ರಾತ್ರಿ ದನದ ತಲೆಯನ್ನು ಅಲ್ಲಿ ಎಸೆದು ಹೋದ ಎಲ್ಲಾ ಸಂಭವವಿದೆ. ನಿನ್ನೆ ರಾತ್ರಿ ಅಲ್ಲಿನ ಕೆಲವರ ಗಮನಕ್ಕೆ ಬಂದಿತ್ತು. ಇಂದು ಅಲ್ಲಿನ ಕೆಲ ಮುಖಂಡರುಗಳು ಆ ದನದ ತಲೆಯನ್ನು ಗುಂಡಿ ತೆಗೆದು ಸಂಸ್ಕಾರ ಮಾಡಿದ್ದಾರೆ.

ಒಂದೋ ಸುತ್ತ ಮುತ್ತಲ ಪ್ರದೇಶದಲ್ಲಿ ಅಕ್ರಮ ಕಸಾಯಿಖಾನೆ ಚಾಲ್ತಿಯಲ್ಲಿರುವ ಶಂಕೆ ಮೂಡಿದೆ. ಅಥವಾ ಇದು ಬೇರೆ ಯಾವುದೋ ದುಷ್ಕೃತ್ಯ ಮತ್ತು ಗಲಭೆ ನಡೆಸುವ ಹುನ್ನಾರದ ಹಿಂದಿನ ಸಂಚಾ ಎಂಬುದು ತನಿಖೆಯಿಂದ ಪತ್ತೆಯಾಗಬೇಕಿದೆ. ಒಟ್ಟಾರೆ ಶಾಂತಿ ಕದಡುವ ಉದ್ದೇಶದಿಂದ ಮಾಡುವ ಇಂತಹ ಕೃತ್ಯಗಳ ಬಗ್ಗೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.