Crime News: ಹೈದರಾಬಾದ್ ಮಹಿಳೆಯ ಶವ ಆಸ್ಟ್ರೇಲಿಯಾದ ಕಸದ ತೊಟ್ಟಿಯಲ್ಲಿ ಪತ್ತೆ, ಪತಿ ಮೇಲೆ ಕೊಲೆ ಆರೋಪ

Share the Article

Australia: ಆಸ್ಟ್ರೇಲಿಯಾದಲ್ಲಿ ಭಾರತೀಯ ಮೂಲದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಮಹಿಳೆಯ ಪತಿಯೇ ಆಕೆಯನ್ನು ಕೊಲೆ ಮಾಡಿದ್ದಾನೆ ಎಂಬುದು ಆರೋಪವಿದೆ. ಭಾರತೀಯ ಮೂಲದ ಚೈತನ್ಯ ಮದಗಣಿ (36) ಅವರ ಶವ ಶನಿವಾರ ಬಕ್ಲಿಯಲ್ಲಿ ರಸ್ತೆ ಬದಿಯ ವೀಲಿ ಬಿನ್‌ನಲ್ಲಿ ಪತ್ತೆಯಾಗಿದೆ. ಮಹಿಳೆ ತನ್ನ ಪತಿ ಮತ್ತು ಮಗನೊಂದಿಗೆ ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿದ್ದರು.

ಇದನ್ನೂ ಓದಿ: Mangaluru: ಕುಂಪಲದಲ್ಲಿ ವಿವಾಹಿತ ವ್ಯಕ್ತಿ ಆತ್ಮಹತ್ಯೆ, ಕಾರಣ ನಿಗೂಢ

ಚೈತನ್ಯ ಅವರು ತಮ್ಮ ಪತಿ ಅಶೋಕ್‌ ಅವರೊಂದಿಗೆ ಆಸ್ಟ್ರೇಲಿಯಾದ ಪಾಯಿಂಟ್‌ ಕುಕ್ಕ್‌ ಎಂಬಲ್ಲಿ ವಾಸವಾಗಿದ್ದರು. ಈ ದಂಪತಿಗಳಿಗೆ ಒಂದು ಗಂಡು ಮಗು ಕೂಡಾ ಇದೆ. ಪೋಷಕರ ಪ್ರಕಾರ ಪತಿಯೇ ಮಗಳನ್ನು ಹತ್ಯೆಗೈದು ಕಸದ ತೊಟ್ಟಿಗೆ ಎಸೆದು ಭಾರತಕ್ಕೆ ಪರಾರಿಯಾಗಿರುವ ಶಂಕೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

 

ಹೈದರಾಬಾದ್‌ನ ಉಪ್ಪಲ್ ಶಾಸಕ ಬಂಡಾರಿ ಲಕ್ಷ್ಮ ರೆಡ್ಡಿ ಅವರು ಮಾಹಿತಿ ಪಡೆದಿದ್ದು, ತಕ್ಷಣ ಮಹಿಳೆಯ ಪೋಷಕರನ್ನು ಭೇಟಿ ಮಾಡಿದ್ದಾರೆ. ಪೋಷಕರ ಕೋರಿಕೆಯ ಮೇರೆಗೆ ಮಹಿಳೆಯ ಶವವನ್ನು ಹೈದರಾಬಾದ್‌ಗೆ ತರಲು ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದಿದ್ದೇನೆ ಎಂದು ಹೇಳಿದ್ದಾರೆ. ಮಹಿಳೆಯ ಪೋಷಕರ ಪ್ರಕಾರ, ಅವರ ಅಳಿಯ ತಮ್ಮ ಮಗಳನ್ನು ಕೊಂದಿರುವುದಾಗಿ ಆರೋಪ ಮಾಡಿದ್ದಾರೆ. ವಿಕ್ಟೋರಿಯಾ ಪೊಲೀಸರು ಮಾರ್ಚ್ 9 ರಂದು ಹೇಳಿಕೆಯಲ್ಲಿ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.

Leave A Reply