Mangaluru: ಕುಂಪಲದಲ್ಲಿ ವಿವಾಹಿತ ವ್ಯಕ್ತಿ ಆತ್ಮಹತ್ಯೆ, ಕಾರಣ ನಿಗೂಢ

Mangaluru (Ullala): ಕುಂಪಲ ಕುಜುಮಗದ್ದೆ ಬಳಿ ಮನೆಯೊಂದರಲ್ಲಿ ವಿವಾಹಿತ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೃತದೇಹ ಸಂಪೂರ್ಣ ಕೊಳೆತು ಹೋಗಿದೆ. ಈ ಘಟನೆ ಕುರಿತು ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Chakravarti sulibele: ಚಕ್ರವರ್ತಿ ಸೂಲಿಬೆಲೆಯೂ ಬಿಜೆಪಿ ಟಿಕೆಟ್ ?! ಕ್ಷೇತ್ರ ಯಾವುದು ?!

ಕುಂಪಲ, ಕುಜುಮಗದ್ದೆ ನಿವಾಸಿ ಕಿರಣ್‌ ಕುಮಾರ್‌ (48) ಮೃತರು.

ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಹೌಸ್‌ಕೀಪಿಂಗ್‌ ಕೆಲಸ ಮಾಡುತ್ತಿದ್ದ ಇವರು, ಮಾ.7 ರಂದು ಮನೆ ಸೇರಿದ್ದವರು ಆಮೇಲೆ ಮನೆಯಿಂದ ಹೊರ ಬಂದಿರಲಿಲ್ಲ. ರವಿವಾರದಂದು ಬೆಳಗ್ಗೆ ಪರಿಸರದ ಜನರಿಗೆ ದುರ್ನಾತ ಬಂದಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಘಟನಾ ಸ್ಥಳಕ್ಕೆ ಬಂದಿದ್ದು ಹಾಗೂ ಸೋಮೇಶ್ವರ ಪುರಸಭಾ ಸದಸ್ಯ ದೀಪಕ್‌ ಪಿಲಾರ್‌ ಅವರು ಮನೆ ಬಾಗಿಲು ಮುರಿದಿದ್ದು, ನೇಣು ಬಿಗಿದ ಸ್ಥಿತಿಯಲ್ಲಿ ಕಿರಣ್‌ ಅವರ ಕೊಳೆತ ಶವ ಕಂಡಿದೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಉಳ್ಳಾಲ ಪೊಲೀಸರು ರವಾನೆ ಮಾಡಿದ್ದಾರೆ.

Leave A Reply

Your email address will not be published.