Rameshwaram Cafe: ಸಿಸಿಬಿಯಿಂದ ರಾಮೇಶ್ವರಂ ಕೆಫೆ ಬಾಂಬರ್ ರೇಖಾಚಿತ್ರ ಬಿಡುಗಡೆ
Bengaluru Rameshwaram Cafe: ರಾಮೇಶ್ವರಂ ಕೆಫೆ ಬ್ಲಾಸ್ಟ್ನ ಶಂಕಿತ ಉಗ್ರನ ರೇಖಾಚಿತ್ರವನ್ನು ಸಿಸಿಬಿ ಪೊಲೀಸರು ಬಿಡುಗಡೆ ಮಾಡಿದ್ದಾರೆ. ನಿನ್ನೆಯಷ್ಟೇ ಶಂಕಿತ ಉಗ್ರನ ಸುಳಿವು ನೀಡಿದರೆ 10ಲಕ್ಷ ನಗದು ಬಹುಮಾನ ಕೊಡುವುದಾಗಿ ಸಿಸಿಟಿವಿ ಫೋಟೋವೊಂದನ್ನು ಎನ್ಐಎ ಬಿಡುಗಡೆ ಮಾಡಿತ್ತು.
ಇದನ್ನೂ ಓದಿ: Vitla Bank Theft Case: ಕರ್ನಾಟಕ ಬ್ಯಾಂಕ್ ಕಳ್ಳತನ ಪ್ರಕರಣ; ಮಹತ್ವದ ಮಾಹಿತಿ ಬಹಿರಂಗ
ಖ್ಯಾತ ಸ್ಕೆಚ್ ಆರ್ಟಿಸ್ಟ್ನಿಂದ ಬಾಂಬರ್ನ ಇಮ್ಯಾಜಿನರಿ ಸ್ಕೆಚ್ ಬಿಡಿಸಲಾಗಿದ್ದು, ಎನ್ಐಎ ಬಿಡುಗಡೆ ಮಾಡಿದ ಸಿಸಿಟಿವಿ ಫೋಟೋವನ್ನು ಆಧರಿಸಿ ಮುಖದ ಇಮ್ಯಾಜಿನರಿ ಸ್ಕೆಚ್ ಮಾಡಲಾಗಿದೆ.
ಆರ್ಟಿಸ್ಟ್ ಹರ್ಷ ಈ ರೇಖಾಚಿತ್ರವನ್ನು ಬಿಡಿಸಿರುವುದಾಗಿ ವರದಿಯಾಗಿದೆ.