ಉಜಿರೆ : ರಿಕ್ಷಾ ಬೊಲೆರೋ ತೀವ್ರ ಅಪಘಾತ | ರಿಕ್ಷಾದಲ್ಲಿದ್ದ ನಾಲ್ಕು ಮಂದಿಗೆ ಗಂಭೀರ ಗಾಯ

ಉಜಿರೆ : ಇಲ್ಲಿನ ಓಡಲ ನಿನ್ನಿಕಲ್ ಬಳಿ ಡಿ.28 ರಂದು ಸಂಜೆ ರಿಕ್ಷಾ ಮತ್ತು ಬೊಲೆರೋ ನಡುವೆ ಡಿಕ್ಕಿ ಸಂಭವಿಸಿದ್ದು, ನಾಲ್ಕು ಜನ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.

ಮಾಚಾರು ಕಡೆಯಿಂದ ಬರುತ್ತಿದ್ದ ರಿಕ್ಷಾ ಮತ್ತು ಮಾಚಾರು ಕಡೆ ಹೋಗುತ್ತಿದ್ದ ಬೊಲೆರೋ ಎರಡೂ ವಾಹನಗಳು ಕೂಡ ಮುಖಾಮುಖಿಯಾಗಿ ಡಿಕ್ಕಿಯಾಗಿದೆ.

ಅಪಘಾತದ ಪರಿಣಾಮ ರಿಕ್ಷಾ ನುಜ್ಜುಗುಜ್ಜಾಗಿದ್ದು, ರಿಕ್ಷಾ ಚಾಲಕ ಗಂಭೀರ ಗಾಯಗೊಂಡಿದ್ದಾರೆ. ಹಾಗೂ ಇನ್ನುಳಿದ ಮೂರು ಮಂದಿ ಕೂಡ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಚಿಕಿತ್ಸೆ ನಡೆಯುತ್ತಿದೆ.

Leave A Reply

Your email address will not be published.