ವಿವೋದ ಜನಪ್ರಿಯ ಬಣ್ಣ ಬದಲಾಯಿಸುವ ಸ್ಮಾರ್ಟ್ಫೋನ್ ಮೇಲೆ ಬಂಪರ್ ಆಫರ್ |ಏನಿದು ಆಫರ್? ಇದರ ಲಾಭವನ್ನು ಪಡೆಯುವುದು ಹೇಗೆ?
ಮೊಬೈಲ್ ಎಂಬ ಮಾಯಾವಿಯ ಬಳಕೆಯಿಂದ ದಿನಂಪ್ರತಿ ಒಂದಲ್ಲ ಒಂದು ಹೊಸ ಮಾದರಿಯ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಕಡಿಮೆ ಬೆಲೆಯಲ್ಲಿ ಉತ್ತಮ ಸ್ಮಾರ್ಟ್ಫೋನ್ ಖರೀದಿಸಲು ಯೋಜನೆ ಹಾಕುತ್ತಿದ್ದರೆ, ನಿಮಗಾಗಿ ಸುವರ್ಣ ಅವಕಾಶವೊಂದು ಕಾದಿದೆ. ಇನ್ನೇನು ಕೆಲವೇ ದಿನಗಳಲ್ಲಿ ಕ್ರಿಸ್ಮಸ್ ಹಬ್ಬದ ಸಂಭ್ರಮ ಶುರುವಾಗಲಿದ್ದು, ಈ ಹಬ್ಬದ ಸಂಭ್ರಮದಲ್ಲಿ ಗ್ರಾಹಕರಿಗೆ ವಿವೋದ ಜನಪ್ರಿಯ ಬಣ್ಣ ಬದಲಾಯಿಸುವ ಸ್ಮಾರ್ಟ್ಫೋನ್ ಮೇಲೆ ಬಂಪರ್ ಆಫರ್ಗಳು ಲಭ್ಯವಾಗಲಿವೆ.
ಡಿಸೆಂಬರ್ 31 ರವರೆಗೆ ಈ ಸೇಲ್ ನಡೆಯಲಿದ್ದು ಇದರಲ್ಲಿ ಏನೆಲ್ಲಾ ಕೊಡುಗೆಗಳು ಲಭ್ಯವಾಗಲಿವೆ ಎಂಬ ಮಾಹಿತಿ ಇಲ್ಲಿದೆ.
ಎಲ್ಲೆಡೆ ಹೊಸ ವರ್ಷದ ಸಡಗರಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಇದರೊಂದಿಗೆ ಇಯರ್ ಎಂಡಿಂಗ್ ಸೇಲ್ ಕೂಡ ಆರಂಭವಾಗಿದ್ದು, ಜನಪ್ರಿಯ ಸ್ಮಾರ್ಟ್ಫೋನ್ ತಯಾರಕ ವಿವೋ ಕೂಡ ನಿನ್ನೆಯಿಂದ ಅಂದರೆ ಡಿಸೆಂಬರ್ 19 ರಿಂದ ವರ್ಷಾಂತ್ಯದ ಸೇಲ್ ಅನ್ನು ಪ್ರಾರಂಭಿಸಿದೆ.
ಈ ಸೇಲ್ನಲ್ಲಿ, ವಿವೋ ತನ್ನ ಜನಪ್ರಿಯ ಸ್ಮಾರ್ಟ್ಫೋನ್ಗಳಾದ Vivo V25 ಸರಣಿ, Vivo Y75 ಲೈನ್ಅಪ್ ಮತ್ತು Vivo Y35 ನಲ್ಲಿ ಭರ್ಜರಿ ಕೊಡುಗೆಗಳನ್ನು ಕೂಡ ನೀಡುತ್ತಿದೆ. ಈ ವರ್ಷಾಂತ್ಯದವರೆಗೂ ಅಂದರೆ ಡಿಸೆಂಬರ್ 31 ರವರೆಗೆ ಈ ಸೇಲ್ ನಡೆಯಲಿದ್ದು ಭರ್ಜರಿ ಕೊಡುಗೆಗಳು ಲಭ್ಯವಾಗಲಿವೆ.
ವಿವೋ ತನ್ನ ಜನಪ್ರಿಯ ಬಣ್ಣ ಬದಲಿಸುವ ಸ್ಮಾರ್ಟ್ಫೋನ್ ಮೇಲೆ ಕೂಡ ಕ್ಯಾಶ್ಬ್ಯಾಕ್ ಆಫರ್ ಅನ್ನು ಪರಿಚಯಿಸಿದ್ದು, ಎರಡು ರೂಪಾಂತರಗಳಲ್ಲಿ ಲಭ್ಯವಿರುವ ವಿವೋ ಕಂಪನಿಯ ಬಣ್ಣ ಬದಲಾಯಿಸುವ ಸ್ಮಾರ್ಟ್ಫೋನ್ Vivo V25 Pro 8 GB RAM + 128 GB ಸ್ಟೋರೇಜ್ನ ಬೆಲೆ 35,990 ರೂಪಾಯಿಗಳಾಗಿದ್ದರೆ, ಇದರ 12 GB RAM + 256 GB ಸ್ಟೋರೇಜ್ನ ಬೆಲೆ 39,990 ರೂಪಾಯಿಗಳು ಆಗಿವೆ.
ಆದರೆ, ಈ ಸೇಲ್ನಲ್ಲಿ ನೀವು ಸ್ಮಾರ್ಟ್ಫೋನ್ ಅನ್ನು ಐಸಿಐಸಿಐ ಬ್ಯಾಂಕ್ ಕಾರ್ಡ್ ಗಳನ್ನು ಬಳಸಿ ಖರೀದಿಸಿದರೆ 2,500 ರೂ.ವರೆಗಿನ ಕ್ಯಾಶ್ಬ್ಯಾಕ್ ಕೂಡ ಪಡೆಯಬಹುದು. Vivo Y75, Vivo Y35 ಖರೀದಿಯಲ್ಲಿ ಕೂಡ ನೀವು ಕ್ಯಾಶ್ಬ್ಯಾಕ್ ಕೊಡುಗೆ ಪಡೆಯಬಹುದು.
ಈ ವರ್ಷಾಂತ್ಯದ ಸೇಲ್ನಲ್ಲಿ ವಿವೋ Vivo Y75, Vivo Y35 ಖರೀದಿಯಲ್ಲೂ ಉತ್ತಮ ಕೊಡುಗೆಗಳನ್ನು ಪರಿಚಯಿಸಿದೆ. Vivo Y75 4G ಬೆಲೆ 20,990 ರೂ.ಗಳಾಗಿದ್ದರೆ, Vivo Y75 5G ಬೆಲೆ 21,990ರೂ. ಆಗಿದೆ. ಆದರೆ, ವಿವೋ ಕಂಪನಿಯ ವರ್ಷಾಂತ್ಯದ ಸೇಲ್ನಲ್ಲಿ ನೀವು ಐಸಿಐಸಿಐ ಬ್ಯಾಂಕ್ ಕಾರ್ಡ್ ಮೂಲಕ ಈ ಸ್ಮಾರ್ಟ್ಫೋನ್ಗಳನ್ನು ಖರೀದಿಸಿದರೆ 1500 ರೂ.ಗಳವರೆಗೆ ಭರ್ಜರಿ ಆಫರ್ ಜೊತೆಗೆ ಡಿಸ್ಕೌಂಟ್ ಕೂಡ ಪಡೆಯಬಹುದು.
Vivo V25 Pro ಮಾತ್ರವಲ್ಲದೆ, Vivo V25 ನ ಹಿಂದಿನ ಪ್ಯಾನೆಲ್ ಕೂಡ ಬಣ್ಣವನ್ನು ಬದಲಾವಣೆ ಯಾಗಲಿದೆ. ಇದರ 8 GB RAM + 128 GB ಸ್ಟೋರೇಜ್ ರೂಪಾಂತರದ ಬೆಲೆ 27,999 ರೂ. ಮತ್ತು 12 GB RAM + 128 GB ಸ್ಟೋರೇಜ್ ರೂಪಾಂತರದ ಬೆಲೆ 31,999 ರೂ. ಆಗಿದೆ. ಆದರೆ, ಈ ಸ್ಮಾರ್ಟ್ಫೋನ್ ಅನ್ನು ಐಸಿಐಸಿಐ, ಎಸ್ಬಿಐ ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸಿದರೆ ಇದರಲ್ಲಿಯೂ 2,000 ರೂ.ಗಳವರೆಗೆ ಕ್ಯಾಶ್ಬ್ಯಾಕ್ ಆಫರ್ ಪಡೆದುಕೊಳ್ಳಬಹುದು.
ಮೊಬೈಲ್ ಕೊಂಡು ಕೊಳ್ಳುವ ಯೋಜನೆ ಹಾಕಿಕೊಂಡವರು ಈ ಕೊಡುಗೆಯ ಸದುಪಯೋಗ ಪಡಿಸಿಕೊಂಡು ನಿಮ್ಮ ನೆಚ್ಚಿನ ಮೊಬೈಲ್ ಆಫರ್ ಬೆಲೆಯಲ್ಲಿ ಕೈಗೆ ಎಟಕುವ ದರದಲ್ಲಿ ಪಡೆಯಬಹುದಾಗಿದೆ.