Ola Uber : ಓಲಾ ಊಬರ್ ಸಂಸ್ಥೆಗಳಿಗೆ ಬಿಗ್ ಶಾಕ್ ನೀಡಿದ ಆಟೋ ಚಾಲಕರು |

ಸಾರಿಗೆ ಇಲಾಖೆಯ ಖಡಕ್‌ ಸೂಚನೆ ನಂತರವೂ ನಗರದಲ್ಲಿ ಓಲಾ, ಉಬರ್‌ ಸೇರಿದಂತೆ ಆ್ಯಪ್‌ ಆಧಾರಿತ ಆಟೋ ಗಳ ಸೇವೆ ಬುಧವಾರ ರಾಜಾರೋಷವಾಗಿ ಮುಂದುವರಿದಿದೆ.

ದಿನನಿತ್ಯದ ದಿನಚರಿ ಯಂತೆ ಜನ ಆಟೋಗಳನ್ನು ಆ್ಯಪ್‌ ಗಳ ಮೂಲಕವೇ ಬುಕಿಂಗ್‌ ಮಾಡುತ್ತಿದ್ದು, ಚಾಲಕರು ಕೂಡ ನಿರ್ಭೀತಿಯಿಂದ ಗ್ರಾಹಕರಿದ್ದಲ್ಲಿಗೆ ಬಂದು, ಕರೆದೊಯ್ಯುವ ಮೂಲಕ ಸೇವೆ ಒದಗಿಸುತ್ತಿದ್ದಾರೆ.

ಕಂಪನಿಗಳು ಅಥವಾ ಅವುಗಳಡಿ ಸೇವೆ ಒದಗಿಸುತ್ತಿರುವ ಆಟೋಗಳ ವಿರುದ್ಧ ಸಾರಿಗೆ ಇಲಾಖೆ ಅಧಿಕಾರಿಗಳು ಯಾವುದೇ ಕಾರ್ಯಾಚರಣೆಗೂ ಮುಂದಾಗಿಲ್ಲ ಆದರೆ, ಓಲಾ ಹಾಗೂ ಊಬರ್ ಸಂಸ್ಥೆಗಳು ಕೋರ್ಟ್ ಸೂಚನೆಗೂ ಕ್ಯಾರೇ ಮಾಡಿಲ್ಲ .

ಆದರೆ ಇದೀಗ ಆ​ ಸಂಸ್ಥೆಗಳಿಗೆ ಆಟೋ ಚಾಲಕರೇ ತಿರುಗು ಬಾಣ ಪ್ರಯೋಗ ಮಾಡಲು ಮುಂದಾಗಿದ್ದು, ಈ ಮೂಲಕ ಪಾಠ ಕಲಿಸಲು ತಯಾರಾಗಿದ್ದಾರೆ .

ಆ್ಯಪ್ ಗಳನ್ನೇ ಡಿಲೀಟ್ ಮಾಡುವ ಮೂಲಕ ಹೊಸ ಶಾಕ್ ನೀಡಲು ಸಜ್ಜಾಗಿದ್ದಾರೆ. ನಿನ್ನೆಯವರೆಗೂ ಜನರ ಬಳಿ ಓಲಾ, ಊಬರ್ ದುಬಾರಿ ದರವನ್ನೇ ವಸೂಲಿ ಮಾಡಿದ್ದರೆ, ಆದರೆ ಇಂದಿನಿಂದ ದರ ಕಡಿಮೆ ಮಾಡಿದರೂ ಕೂಡ ಆಟೋ ಚಾಲಕರು ಓಲಾ, ಊಬರ್ ಆ್ಯಪ್ಗಳನ್ನು ಡಿಲೀಟ್ ಮಾಡಿದ್ದಾರೆ.

ಈ ಎರಡೂ ಸಂಸ್ಥೆಗಳ ಆ್ಯಪ್ ಗಳನ್ನು ಡಿಲೀಟ್ ಮಾಡುವ ಮೂಲಕ 30 ಸಾವಿರ ಆಟೋ ಚಾಲಕರು ಗುಡ್​ ಬೈ ಹೇಳಿದ್ದು, ಅಷ್ಟೇ ಅಲ್ಲದೇ ಇನ್ನು ಮುಂದೆ ಗ್ರಾಹಕರಿಗೆ ಮೀಟರ್ ಸೇವೆ ಒದಗಿಸಲು ಮುಂದಾಗಿದ್ದಾರೆ..

Leave A Reply

Your email address will not be published.