Home Food Breakfast Recipe : ಬೆಲ್ಲ ಮತ್ತು ಗಸೆಗಸೆ ಬೀಜದ ಪಂಜಿರಿ ರೆಸಿಪಿ ಡಿಟೇಲ್ಸ್ ಇಲ್ಲಿದೆ!

Breakfast Recipe : ಬೆಲ್ಲ ಮತ್ತು ಗಸೆಗಸೆ ಬೀಜದ ಪಂಜಿರಿ ರೆಸಿಪಿ ಡಿಟೇಲ್ಸ್ ಇಲ್ಲಿದೆ!

Hindu neighbor gifts plot of land

Hindu neighbour gifts land to Muslim journalist

ಹಬ್ಬವೆಂದಾಗ ಅದರದ್ದೇ ಆದ ಆಚಾರ ವಿಚಾರ ರೂಢಿ ಸಂಪ್ರದಾಯಗಳು ಇರುತ್ತದೆ. ಹಾಗೆಯೇ ಈ ಬಾರಿಯ ಕರ್ವಾ ಚೌತ್ ಹಬ್ಬವನ್ನು ಅಕ್ಟೋಬರ್ 13 ರಂದು ಮಹಿಳೆಯರು ತುಂಬಾ ಭಕ್ತಿ ಮತ್ತು ಉತ್ಸಾಹದಿಂದ ಆಚರಿಸುವ ತಯಾರಿಯಲ್ಲಿ ನಿರತರಾಗಿದ್ದಾರೆ. ಅದರಲ್ಲೂ ಕರ್ವಾಚೌತ್ ದಿನದಂದು ಇಡೀ ದಿನ ಉಪವಾಸ ಮಾಡಲಾಗುತ್ತದೆ. ಕರ್ವಾ ಚೌತ್ ಹಬ್ಬದ ದಿನದಂದು ಬೆಳಗ್ಗೆ ಬೇಗ ಎದ್ದು ಉಪಾಹಾರ ಸೇವನೆ ಮಾಡಲಾಗುತ್ತದೆ.

ಇಲ್ಲಿ ಉಪವಾಸದ ಸಮಯ ಹಾಗೂ ಉಳಿದ ದಿನವೂ ನೀವು ಬೆಳಗಿನ ತಿಂಡಿಯಾಗಿ ಸೇವಿಸುವ ರೆಸಿಪಿ ಬಗ್ಗೆ ತಿಳಿಸಲಾಗಿದೆ. ಜೀರ್ಣಿಸಿಕೊಳ್ಳಲು ಸುಲಭ ಆಗಿರುತ್ತದೆ ಮತ್ತು ದಿನವಿಡೀ ನಿಮಗೆ ಶಕ್ತಿ ನೀಡುವಂತಿರುತ್ತದೆ. ಹಾಗಾಗಿ ಬೆಲ್ಲ ಮತ್ತು ಗಸಗಸೆ ಬೀಜದಿಂದ ತಯಾರಿಸಲಾಗುವ ಪಂಜಿರಿ ರೆಸಿಪಿಯನ್ನು ಈ ರೀತಿ ಮಾಡಿ ನೋಡಿ.

ಬೆಲ್ಲ ಮತ್ತು ಗಸಗಸೆ ಬೀಜದ ಪಂಜಿರಿ ರೆಸಿಪಿ:

ಬೆಲ್ಲ ಮತ್ತು ಗಸಗಸೆ ಬೀಜದಿಂದ ತಯಾರಿಸಲಾಗುವ ಪಂಜಿರಿ ರೆಸಿಪಿ ಮಾಡುವುದು ಸುಲಭವಲ್ಲ. ಅದಕ್ಕೆ ಅದರದ್ದೇ ಆದ ಕ್ರಮಗಳು ಇವೆ. ಆದರೆ ಇದು ಆರೋಗ್ಯಕರವಾಗಿದೆ.

ಬೆಲ್ಲ ಮತ್ತು ಗಸಗಸೆ ಬೀಜದಿಂದ ತಯಾರಿಸಲಾಗುವ ಪಂಜಿರಿ ರೆಸಿಪಿ ಮಾಡುವ ವಿಧಾನ:

ಗಸಗಸೆಯನ್ನು ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಮಾತ್ರವಲ್ಲದೆ ಕಾಸ್ಮೆಟಿಕ್ ಸಂಬಂಧಿತ ಉತ್ಪನ್ನಗಳಲ್ಲಿಯೂ ಬಳಸುತ್ತಾರೆ. ಬೇಳೆ ಕಾಳು, ಅಕ್ಕಿ, ಹಾಲು, ಮೊಸರು ಹೊರತುಪಡಿಸಿ ಇತರೆ ಕೆಲವು ಪೌಷ್ಟಿಕ ಆಹಾರ ಹುಡುಕುತ್ತಿದ್ದರೆ ನಿಮಗೆ ಗಸಗಸೆ ಉತ್ತಮ ಆಯ್ಕೆಯಾಗಿದೆ. ಪ್ರಮುಖ ಪೋಷಕಾಂಶಗಳಲ್ಲಿ ಗಸಗಸೆ ಸಮೃದ್ಧವಾಗಿದೆ. ರುಚಿಯ ಜೊತೆಗೆ ಆರೋಗ್ಯಕರವಾಗಿದೆ.

ಹಬ್ಬಗಳಲ್ಲಿ ತೂಕ ಇಳಿಕೆ ಸುಲಭವಾಗಬೇಕಾದಲ್ಲಿ ಈ ಟಿಪ್ಸ್ ಫಾಲೋ ಮಾಡಿ.

ಗಸಗಸೆ ಬೀಜದ ಬೆಲ್ಲವು ಆರೋಗ್ಯಕರ ಸಿಹಿತಿಂಡಿ : ಸಾಮಾನ್ಯವಾಗಿ ಜನರು ಸಿಹಿತಿಂಡಿಗಳ ಹೆಸರಿನಲ್ಲಿ ಸಕ್ಕರೆ ಸೇವಿಸುತ್ತಾರೆ. ಆದರೆ ಇದು ಅನಾರೋಗ್ಯಕರ. ಆದರೆ ಸುವಾಸನೆ ಮತ್ತು ಪೋಷಕಾಂಶಗಳಿಂದ ತುಂಬಿರುವ ಗಸಗಸೆ ಬೀಜದ ಪಂಜಿರಿ ರುಚಿಕರ ರೆಸಿಪಿ ಆರೋಗ್ಯಕ್ಕೆ ಉತ್ತಮ ಆಗಿದೆ.

ಬೆಲ್ಲದ ವಿಶೇಷತೆ :ಬೆಲ್ಲ ಸೀಮಿತ ಪ್ರಮಾಣದ ಪ್ರೋಟೀನ್, ಕಾರ್ಬೋಹೈಡ್ರೇಟ್ ಮತ್ತು ಫೈಬರ್ ಹೊಂದಿದೆ. ಕ್ಯಾಲ್ಸಿಯಂ, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ರಂಜಕವಿದೆ. ಇದು ಕಬ್ಬಿಣದ ಉತ್ತಮ ಮೂಲ. ರಕ್ತಹೀನತೆ ತಡೆಯುತ್ತದೆ.

ಗಸೆಗಸೆಯ ಪ್ರಾಮುಖ್ಯ:ಗಸಗಸೆ ಬೀಜಗಳು ಫೈಬರ್ನಲ್ಲಿ ಸಮೃದ್ಧವಾಗಿದೆ. ಜೀರ್ಣಾಂಗ ವ್ಯವಸ್ಥೆ ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗೆ ಪ್ರಯೋಜನಕಾರಿ. ತಾಮ್ರ, ರಂಜಕ, ಮೆಗ್ನೀಸಿಯಮ್, ಕ್ಯಾಲ್ಸಿಯಂ, ಕಬ್ಬಿಣ, ಸತು, ಪ್ರೋಟೀನ್, ಕಾರ್ಬೋಹೈಡ್ರೇಟ್, ಥಯಾಮಿನ್ ಮತ್ತು ಮ್ಯಾಂಗನೀಸ್‌ನ ಉತ್ತಮ ಮೂಲವಾಗಿದೆ.

ಎಳ್ಳು ಆರೋಗ್ಯಕ್ಕೆ ಪ್ರಯೋಜನಕಾರಿ :

ಎಳ್ಳು ಬೀಜಗಳಲ್ಲಿ ವಿಟಮಿನ್, ಪ್ರೋಟೀನ್, ಖನಿಜಗಳು ಮತ್ತು ಆಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿವೆ. ಫೈಟೊಸ್ಟೆರಾಲ್ ಸಂಯುಕ್ತವು ಕೊಲೆಸ್ಟ್ರಾಲ್ ಮಟ್ಟ ನಿರ್ವಹಿಸುತ್ತದೆ. ಸೋಂಕುಗಳ ವಿರುದ್ಧ ಹೋರಾಡುತ್ತದೆ. ಬಾಯಿಯ ನೈರ್ಮಲ್ಯ ಕಾಪಾಡುತ್ತದೆ.

ಗಸಗಸೆ ಮತ್ತು ಬೆಲ್ಲದ ರುಚಿಕರ ಪಂಜಿರಿ ರೆಸಿಪಿಗೆ ಬೇಕಾಗುವ ಪದಾರ್ಥಗಳು :

ಬಿಳಿ ಎಳ್ಳು ಒಂದೂವರೆ ಕಪ್, ಗಸಗಸೆ ಬೀಜಗಳು ಒಂದೂವರೆ ಕಪ್, ಬೆಲ್ಲ ಒಂದು ಕಪ್, ಒಂದು ಕಪ್ ಬಾದಾಮಿ, ಗೋಡಂಬಿ ಒಂದು ಕಪ್, ಒಣದ್ರಾಕ್ಷಿ ಒಂದು ಕಪ್, ತುಪ್ಪ 250 ಗ್ರಾಂ, ಸಣ್ಣ ಏಲಕ್ಕಿ ಪುಡಿ ಎರಡು ಟೀ ಚಮಚ.

ಗಸಗಸೆ ಮತ್ತು ಬೆಲ್ಲದ ರುಚಿಕರ ಪಂಜಿರಿ ರೆಸಿಪಿಗೆ ತಯಾರಿಸುವ ವಿಧಾನ:

ಮೊದಲು ಪ್ಯಾನ್ ತೆಗೆದುಕೊಂಡು ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಇದಕ್ಕೆ ಬಿಳಿ ಎಳ್ಳು ಸೇರಿಸಿ ಹುರಿಯಿರಿ. ನಂತರ ಅದೇ ಬಾಣಲೆಯಲ್ಲಿ ಗಸಗಸೆ ಹಾಕಿ ಚೆನ್ನಾಗಿ ಹುರಿಯಿರಿ. ಈಗ ಗಸಗಸೆ ಬೀಜಗಳನ್ನು ತೆಗೆದು ಪಕ್ಕಕ್ಕೆ ಇರಿಸಿ. ನಂತರ ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ ಹಿಟ್ಟನ್ನು ಕಂದು ಬಣ್ಣ ಬರುವವರೆಗೆ ಹುರಿಯಿರಿ.

ಗೋಡಂಬಿ, ಒಣದ್ರಾಕ್ಷಿ ಮತ್ತು ಬಾದಾಮಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ಉಳಿದ ಎಲ್ಲಾ ತುಪ್ಪವನ್ನು ಬಾಣಲೆಗೆ ಹಾಕಿ. ತುಪ್ಪ ಬಿಸಿಯಾದಾಗ ಎಲ್ಲಾ ಒಣ ಹಣ್ಣುಗಳನ್ನು ಸೇರಿಸಿ. ಮತ್ತು 1 ನಿಮಿಷ ಫ್ರೈ ಮಾಡಿ. ಈಗ ಏಲಕ್ಕಿ ಪುಡಿ, ಹುರಿದ ಹಿಟ್ಟು, ಎಳ್ಳು ಮತ್ತು ಗಸಗಸೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಒಟ್ಟಿಗೆ ಸೇರಿಸಿ ಫ್ರೈ ಮಾಡಿ.ಈಗ ಅದಕ್ಕೆ ಬೆಲ್ಲ ಸೇರಿಸಿ ನಂತರ ಚೆನ್ನಾಗಿ ಮಿಶ್ರಣ ಮಾಡಿ. ಗ್ಯಾಸ್ ಅನ್ನು ಆಫ್ ಮಾಡಿ. ಮಿಶ್ರಣ ಮಾಡಿ. ಈಗ ರುಚಿಕರ ಮತ್ತು ಆರೋಗ್ಯಕರ ಪಂಜಿರಿ ಸಿದ್ಧವಾಗಿದೆ.

ಈ ರೀತಿಯಾಗಿ ಪಂಜಿರಿ ಸಿದ್ಧಪಡಿಸಿ ಸೇವಿಸುವುದು ಆರೋಗ್ಯಕ್ಕೂ ಉತ್ತಮವಾಗಿದೆ.