Home Entertainment ಶೀಘ್ರದಲ್ಲೇ ತೆರೆಗೆ ಬರಲಿದೆ ಸೋನು ಶ್ರೀನಿವಾಸ ಗೌಡ ಲೈಫ್ ಸ್ಟೋರಿ ಸಿನಿಮಾ| ಏನ್ ಗುರೂ ಇದೆಲ್ಲಾ…

ಶೀಘ್ರದಲ್ಲೇ ತೆರೆಗೆ ಬರಲಿದೆ ಸೋನು ಶ್ರೀನಿವಾಸ ಗೌಡ ಲೈಫ್ ಸ್ಟೋರಿ ಸಿನಿಮಾ| ಏನ್ ಗುರೂ ಇದೆಲ್ಲಾ…

Hindu neighbor gifts plot of land

Hindu neighbour gifts land to Muslim journalist

ಸೋಶಿಯಲ್ ಮೀಡಿಯಾ ಸ್ಟಾರ್ ಸೋನು ಶ್ರೀನಿವಾಸ್ ಗೌಡ ಅವರು ಹೇಗೆ ಹೊರಗಡೆ ಮಿಂಚಿಂಗ್ ಆಗಿದ್ದರೋ ಈಗ ಬಿಗ್ ಬಾಸ್ ಮನೆಯಲ್ಲೂ ಫುಲ್ ಶೈನಿಂಗ್. ಇದೀಗ ಬಿಗ್ ಬಾಸ್ ಮನೆಗೆ ಬಂದಿರೋ ಸೋನು ಗೌಡಗೆ ಮತ್ತಷ್ಟು ಅಭಿಮಾನಿ ಬಳಗ ಹೆಚ್ಚಿದೆ. ಈಗ ಬಂದಿರೋ‌ ಹೊಸ ಮಾಹಿತಿ ಏನೆಂದರೆ ಸೋನು ಅವರ ಜೀವನಾಧಾರಿತ ಸಿನಿಮಾ ತೆರೆ ಮೇಲೆ ಬರಲಿದ್ದು, ಖ್ಯಾತ ನಿರ್ಮಾಪಕರು ಈ ಸಿನಿಮಾ ನಿರ್ಮಾಣ ಮಾಡುತ್ತದೆ ಎಂದು ಖ್ಯಾತ ಖಾಸಗಿ ವಾಹಿನಿಯೊಂದು ವರದಿ ಮಾಡಿದೆ.

ಟಿಕ್ ಟಾಕ್ ವಿಡಿಯೋಗಳ ಮೂಲಕ ಸೋಶಿಯಲ್ ಮೀಡಿಯಾಗೆ ಎಂಟ್ರಿ ಕೊಟ್ಟ ಸೋನು ಗೌಡ ತಮ್ಮ ವಿಡಿಯೋ ಗಳಿಗಿಂತ ಹೆಚ್ಚಾಗಿ ಟ್ರೋಲ್ ಮೂಲಕವೇ ಫೇಮಸ್ ಆಗಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್ ಮಾಡುವ ಮೂಲಕ ಸೋನು ಅವರು ಸಾಕಷ್ಟು ಹಿಂಬಾಲಕರನ್ನು ಹೊಂದಿದ್ದಾರೆ.

ಸೋನು ಕೆಲ ಕಿರುಚಿತ್ರ, ಮ್ಯೂಸಿಕ್ ವಿಡಿಯೋದಲ್ಲಿ ಈಗಾಗಲೇ ನಟಿಸಿದ್ದಾರೆ. ಸೋನು ಅವರ ಜೀವನದಲ್ಲಿ ನಡೆದ ಘಟನೆಗಳ ಬಗ್ಗೆ ಜನರಿಗೆ ತಿಳಿಸಲು ಸಿನಿಮಾ ರೆಡಿಯಾಗುತ್ತಿದ್ದು, ಖ್ಯಾತ ನಿರ್ಮಾಪಕರು ಈ ಸಿನಿಮಾ ನಿಮಾರ್ಣ ಮಾಡುತ್ತಿದ್ದರೆ, ಆ ಸಿನಿಮಾದಲ್ಲಿ ಸೋನುನೇ ನಟಿಯಾಗುತ್ತಾರೋ, ಇಲ್ಲ ಬೇರೆಯವರು ನಟಿಯಾಗಬಹುದು ಎಂಬ ಬಗ್ಗೆ ಇನ್ನೂ ಮಾಹಿತಿ ದೊರಕಿಲ್ಲ

ಮೊದಲ ಬಾರಿಗೆ ಬಿಗ್‌ಬಾಸ್ ಟಿವಿಗೆ ಬರದೇ ಒಟಿಟಿಗೆ ಎಂಟ್ರಿ ನೀಡಿದೆ. ಇದು ಜನರಿಗೆ ಇಷ್ಟ ಕೂಡಾ ಆಗಿದೆ. ಅಷ್ಟು ಮಾತ್ರವಲ್ಲದೇ, ಸಾಕಷ್ಟು ಮನರಂಜನೆಯನ್ನು ನೀಡುತ್ತಿದೆ. ಇದ್ರಲ್ಲಿ ಸೋನು ಇರುವ ಕಾರಣದಿಂದ ಹೆಚ್ಚು ಜನ ನೋಡುತ್ತಿದ್ದಾರೆ. ಸೋನು ಬಗ್ಗೆ ನೆಗೆಟಿವ್ ಆಗಿದ್ರು ಅವರನ್ನೆ ಹೆಚ್ಚು ಜನ ಮೆಚ್ಚಿಕೊಂಡಿದ್ದಾರೆ. ಅವರೇ ಬಿಗ್ ಬಾಸ್ ಟಾಪ್ 3 ನಲ್ಲಿ ಉಳಿದುಕೊಳ್ಳುತ್ತಾರೆ ಅನ್ನೋ ಮಾತುಗಳ ಸಹ ಕೇಳಿ ಬರ್ತಿದೆ.

ಸೋನು ಶ್ರೀನಿವಾಸ್ ಗೌಡ ಹುಡುಗನೊಬ್ಬನ ಪ್ರೀತಿಗೆ ಬಿದ್ದಿದ್ದು, ಇಬ್ಬರು ಲವ್ ಮಾಡುತ್ತಿದ್ದು, ಮೆಸೇಜ್, ಕಾಲ್, ವಿಡಿಯೋ ಕಾಲ್ ಮಾಡುತ್ತಿದ್ದ, ಈ ಪ್ರೀತಿ ಕೊನೆಗೆ ಹಾದಿ ತಪ್ಪಿದೆ. ಹೀಗಿರುವಾಗ ಒಂದು ದಿನ ಪ್ರಿಯಕರ ವಿಡಿಯೋ ಕರೆ ಮಾಡು ಎಂದು ಸೋನು ಶ್ರೀನಿವಾಸ್ ಗೌಡ ಅವರನ್ನು ಕೇಳಿಕೊಂಡಿದ್ದಾನೆ. ಆಕೆ ಕೂಡ ಆತನಿಗೆ ವಿಡಿಯೋ ಫೋನ್ ಕರೆ ಮಾಡಿದ್ದಾರೆ. ಹೇಗೂ ಮದುವೆ ಆಗುತ್ತೇವೆ ಎಂದು ಸೋನು ಶ್ರೀನಿವಾಸ್ ಗೌಡ ದುಡುಕುತ್ತಾರೆ. ಅತ್ತ ಕಡೆಯಿಂದ ಪ್ರಿಯಕರ ವಿಡಿಯೋ ಕರೆಯನ್ನು ರೆಕಾರ್ಡ್ ಮಾಡತ್ತಾನೆ.

ಆ ಬಾಯ್ ಫ್ರೆಂಡ್‌ನಿಂದಾಗಿ ಸೋನು ಶ್ರೀನಿವಾಸ್ ಗೌಡ ಅವರ ಖಾಸಗಿ ವೀಡಿಯೋ ವೈರಲ್ ಆಗಿದೆ. ಈ ಹಳೆಯ ಘಟನೆಯನ್ನು ಹೇಳುವ ಮೂಲಕ ಬಿಗ್ ಬಾಸ್ ಮನೆಯಲ್ಲಿ ತನ್ನ ನೋವನ್ನು ಹೇಳಿಕೊಂಡಿದ್ದಾರೆ ಸೋನು ಶ್ರೀನಿವಾಸ್ ಗೌಡ.