ಕೆಯ್ಯೂರು: ಮನೆಗೆ ಆಧಾರವಾಗಿದ್ದ ಯುವಕನಿಗೆ ಕಿಡ್ನಿ ವೈಫಲ್ಯ, ನೆರವಿಗಾಗಿ ಕುಟುಂಬದ ಮೊರೆ |ಆಸ್ಪತ್ರೆಯಲ್ಲಿ ದಾಖಲಾಗಿರುವ ಯುವಕ, ಚಿಕಿತ್ಸೆಗೆ ಹಣವಿಲ್ಲದೆ ಪರದಾಡುತ್ತಿರುವ ಹೆತ್ತಮ್ಮ |
ಪುತ್ತೂರು: ಮನೆಗೆ ಆಧಾರವಾಗಿದ್ದ ಯುವಕನಿಗೆ ಕಿಡ್ನಿ ವೈಫಲ್ಯ ಉಂಟಾಗಿರುವುದರಿಂದ ಮನೆಯೇ ಕಣ್ಣೀರಲ್ಲಿ ಕೈತೊಳೆಯುತ್ತಿರುವ ಕರುಣಾಜನಕ ಘಟನೆ ಕೆಯ್ಯೂರು ಗ್ರಾಮದ ಶಾಲಾ ಬಳಿಯಿಂದ ವರದಿಯಾಗಿದೆ. ಇದೀಗ ಯುವಕ ಮಂಗಳೂರಿನ ಇಂಡಿಯನಾ ಆಸ್ಪತ್ರೆಯಲ್ಲಿ ಕೋಮ ಸ್ಥಿತಿಯಲ್ಲಿದ್ದು ಚಿಕಿತ್ಸೆಗೂ ಹಣವಿಲ್ಲದೆ ಕುಟುಂಬ ದಾನಿಗಳ ನೆರವು ಯಾಚಿಸಿದೆ. ಮನೆಗೆ ಆಧಾರವಾಗಬೇಕಾಗಿದ್ದ ಮಗನಿಗೆ ಎರಡೂ ಕಿಡ್ನಿಗಳು ಫೇಲ್ ಆಗಿರುವುದರಿಂದ ತಾಯಿ ದಿಕ್ಕುತೋಚದೆ ಕಣ್ಣೀರು ಹಾಕುತ್ತಿದ್ದಾರೆ.
ಒಬ್ಬನೇ ಮಗ
ಕೆಯ್ಯೂರು ಗ್ರಾಮದ ಕೆಯ್ಯೂರು ಶಾಲಾ ಬಳಿ ನಿವಾಸಿಯಾಗಿದ್ದ ದಿ.ಮುದರ ಎಂಬ ಪುತ್ರ ತಾರಾನಾಥ ಎಂಬವರೇ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಯುವಕ. ತಾಯಿ ಅಕ್ಕಮ್ಮ ಮತ್ತು ತಂಗಿಯೊಂದಿಗೆ ಜೀವನ ನಡೆಸುತ್ತಿದ್ದ ತಾರಾನಾಥರವರು ಅವಿವಾಹಿತರಾಗಿದ್ದಾರೆ.
ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಇವರಿಗೆ ಸಿಗುತ್ತಿದ್ದ ಅಲ್ಪ ಆದಾಯವೇ ಕುಟುಂಬದ ಜೀವನೋಪಾಯಕ್ಕೆ ದಾರಿಯಾಗಿತ್ತು. ಇದೀಗ ಬೇರೆ ಯಾವುದೇ ಆದಾಯವಿಲ್ಲದೆ ಇತ್ತ ಹೊತ್ತಿನ ಊಟಕ್ಕೂ ಕಷ್ಟ ಪಡುವ ಪರಿಸ್ಥಿತಿ ಒಂದಡೆಯಾದರೆ ಅತ್ತ ಆಸ್ಪತ್ರೆಯಲ್ಲಿರುವ ಮಗನ ಚಿಕಿತ್ಸೆಗೂ ಹಣವಿಲ್ಲದೆ ಸಂಕಷ್ಟ ಪಡುವಂತಾಗಿದೆ. ತನಗಿರುವ ಒಬ್ಬನೇ ಮಗನನ್ನು ಉಳಿಸಿಕೊಡು ಎಂದು ತಾಯಿ ಅಕ್ಕಮ್ಮ ಪ್ರತಿದಿನ ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ.
ದಾನಿಗಳ ನೆರವಿಗೆ ಮನವಿ ೪೦ ಸೆಂಟ್ಸ್ ಜಾಗದಲ್ಲಿ ವಾಸವಾಗಿರುವ ಅಕ್ಕಮ್ಮರವರಿಗೆ ಬೇರೆ ಯಾವುದೇ ಆದಾಯವಿಲ್ಲ. ಅಲ್ಲಿ ಇಲ್ಲಿ ಕೂಲಿ ಕೆಲಸ ಮಾಡಿ ಸಿಗುವ ಒಂದಷ್ಟು ಹಣದಲ್ಲೇ ಇವರ ಜೀವನ ಸಾಗಬೇಕಾಗಿದೆ. ಕಳೆದ ಒಂದು ವರ್ಷದಿಂದ ಮಗನ ಚಿಕಿತ್ಸೆಗಾಗಿ ಸಾಲ ಮಾಡಿದ್ದಾರೆ.
ಕಳೆದ ಒಂದು ವರ್ಷದಿಂದ ಅಲ್ಲಿ ಇಲ್ಲಿ ಸಾಲ ಮಾಡಿ ಮಗನಿಗೆ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಮೊದಲಿಗೆ ಡಯಾಲಿಸ್ಗಾಗಿ ಮಂಗಳೂರಿನ ಇಂಡಿಯಾನ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಕಳೆದ ಕೆಲವು ತಿಂಗಳಿನಿಂದ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮಾಡಿಸಲಾಗುತ್ತಿತ್ತು. ಅದರಂತೆ ಮಾ.30 ರಂದು ಡಯಾಲಿಸಿಸ್ ಚಿಕಿತ್ಸೆ ಮಾಡಿದ ಬಳಿಕ ಅಧಿಕ ರಕ್ತದ ಒತ್ತಡ ಸಮಸ್ಯೆಯಿಂದಾ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ತಾರಾನಾಥರವರನ್ನು ಮಂಗಳೂರಿನ ಇಂಡಿಯಾನ ಆಸ್ಪತ್ರೆಯ ಐಸಿಯುನಲ್ಲಿ ದಾಖಲು ಮಾಡಲಾಗಿದೆ. ಚಿಕಿತ್ಸೆ ವೆಚ್ಚ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಕುಟುಂಬಕ್ಕೆ ದಿಕ್ಕೇ ತೋಚದಂತಾಗಿದೆ.
ಒಂದು ಬಡಕುಟುಂಬದ ಕಣ್ಣೊರೆಸುವ ಕೆಲಸ ಇಂದಿನ ಅಗತ್ಯತೆಯಾಗಿದೆ. ಯಾರಾದರೂ ದಾನಿಗಳು ನೆರವು ನೀಡಲು ಮುಂದೆ ಬರುವುದಾದರೆ ತಾರಾನಾಥರವರ ತಂಗಿ ಅಥವಾ ತಾಯಿಯನ್ನು ಸಂಪರ್ಕಿಸಬಹುದು. ಮೊ: 7760229961, 9591176853 ಗೆ ಕರೆ ಮಾಡಿ ವಿಷಯ ತಿಳಿದುಕೊಳ್ಳಬಹುದು.
ಅಕ್ಕಮ್ಮರವರ ಅಕೌಂಟ್ ನಂಬರ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, 64192211051 , ಐಎಫ್ಸಿ ಕೋಡ್ ಎಸ್ಬಿಐಎನ್0040152 ಗೆ ನೆರವು ನೀಡಬಹುದು. ಇದು ಕುಟುಂಬದ ಕಳಕಳಿಯ ಮನವಿಯಾಗಿದೆ.