Home International ಗುಪ್ತಾಂಗಗಳ ಕೂದಲು ಮಾರಿ ತಿಂಗಳಿಗೆ 2 ಲಕ್ಷ ಗಳಿಸುವ ಯುವತಿ

ಗುಪ್ತಾಂಗಗಳ ಕೂದಲು ಮಾರಿ ತಿಂಗಳಿಗೆ 2 ಲಕ್ಷ ಗಳಿಸುವ ಯುವತಿ

Hindu neighbor gifts plot of land

Hindu neighbour gifts land to Muslim journalist

ಈ ಕಾಲದಲ್ಲಿ ಏನನ್ನು ಬೇಕಾದರೂ ಮಾರಬಹುದು. ಅಲ್ಲೊಬ್ಬ ಮಹಿಳೆ ತನ್ನ ವಾಸನಾಭರಿತ ಹೂಸು ಜಾಡಿಗೆ ತುಂಬಿಸಿ ಜೇಬು ತುಂಬಿಸಿ ಕೊಳ್ಳುವ ಸುದ್ದಿ ನಾವೆಲ್ಲ ಓದಿದ್ದೇವೆ. ಮುಖ ಸಿಂಡರಿಸಿಕೊಂಡಿದ್ದೇವೆ ಕೂಡ.

ಈಕೆ ಕೂಡಾ ಅಂತಹುದೇ ಮಹಾನ್ sales professional. ಆಕೆಗೆ ತನ್ನ ದೇಹದ ಬೇಡದ ಕೂದಲುಗಳನ್ನು ‘ಬೇಕಾ ‘ದವರಿಗೆ ಮಾರುವ ಕೆಲಸ. ಆಕೆಯ ದೇಹದಲ್ಲಿ ಹುಟ್ಟುವ ಅನಾವಶ್ಯಕ ಕೂದಳುಗಳೆ ಆಕೆಯ ರಾ ಮೆಟೀರಿಯಲ್ !
ಕಾಲಿನಲ್ಲಿ ಮೂಡುವ ಸಣ್ಣ ಕೂದಲು, ಕಂಕುಳ ಕೆಳಗಿನ ಜೊಂಪು ಜೊಂಪು ಕೂದಲು, ಕೊನೆಗೆ ಗುಪ್ರಾಂಗಗಳ ಮೇಲೆ ಬೆಳೆಯುವ ಕೂದಲ ಕಚ್ಚಾವಸ್ತುಗಳಿಂದ ಆಕೆಯ ಬಿಸಿನೆಸ್ ರೂಪುಗೊಂಡಿದೆ. ಇದೀಗ ಭರ್ಜರಿಯಾಗಿ ಓಡುತ್ತಿದೆ.

ಈಕೆಯ ಹೆಸರು ಕ್ಯಾಮಿಲ್ಲೆ ಅಲೆಕ್ಸಾಂಡರ್. ಲಂಡನ್ ಮೂಲದ ಈಕೆ ಸಂಗೀತಗಾರ್ತಿ ಮತ್ತು ರೂಪದರ್ಶಿಯಾಗಿಯೂ ಗುರುತಿಸಿಕೊಂಡಿದ್ದಾಳೆ. ಆದರೆ ಅದಕ್ಕಿಂತಲೂ ಹೆಚ್ಚಾಗಿ ಕೂದಲು ಮಾರಿ ಹೆಸರು ಮತ್ತು ದುಡ್ಡು ಗಳಿಸಿದ್ದಾಳೆ.

ಹೌದು. ಅಚ್ಚರಿಯಾದರು ಸತ್ಯ. ಈಕೆಯ ಹೆಸರು ಕ್ಯಾಮಿಲ್ಲೆ ಅಲೆಕ್ಸಾಂಡರ್. ಲಂಡನ್ ಮೂಲದ ಈಕೆ ಸಂಗೀತಗಾರ್ತಿ ಮತ್ತು ರೂಪದರ್ಶಿಯಾಗಿಯೂ ಕೂಡಾ ಗುರುತಿಸಿಕೊಂಡಿದ್ದಾಳೆ. ಆದರೆ ಅದಕ್ಕಿಂತಲೂ ಹೆಚ್ಚಾಗಿ ಈಗ ಕೂದಲು ಮಾರಿ ಹೆಸರುಗಳಿಸಿದ್ದಾಳೆ. ಅಂದಹಾಗೆಯೇ ಈಕೆಯ ದೇಹದ ಕೂದಲಿಗೆ ಅಷ್ಟೇನು ಬೇಡಿಕೆ? ಇದನ್ನು ಖರೀದಿಸುವವರೂ ಇದ್ದಾರಾ ಎಂಬ ಪ್ರಶ್ನೆ ಮನದಲ್ಲಿ ಮೂಡಿರಬಹುದು. ಆದರೆ ದೇಹದ ಕೂದಲನ್ನು ಹಣ ನೀಡಿ ಖರೀದಿಸುವ ವಿಕ್ಷಿಪ್ತ ಜನರಿದ್ದಾರೆ ಎಂದರೆ ನಂಬಲೇಬೇಕು.

ಡೈಲಿ ಸ್ಟಾರ್ ವರದಿಯ ಪ್ರಕಾರ, 4 ವರ್ಷಗಳ ಹಿಂದೆ ಕ್ಯಾಮಿಲ್ಲೆ ಅಲೆಕ್ಸಾಂಡರ್ ವ್ಯಾಕ್ಸಿಂಗ್ ಮತ್ತು ಶೇವಿಂಗ್ ಮಾಡುವುದನ್ನು ಪೂರ್ತಿಯಾಗಿ ನಿಲ್ಲಿಸಿದಳು  ಮತ್ತು ತನ್ನ ದೇಹದ ಮೇಲೆ ನೈಸರ್ಗಿಕ ಕೂದಲನ್ನು ಬೆಳೆಸಲು ಶುರುಮಾಡಿದಳು. ದೇಹದಲ್ಲಿ ವಿಫುಲ ಕೂದಲು ಬೆಳೀತು. ಕ್ಯಾಮಿಲ್ಲೆ ತನ್ನ ದೇಹದ ಕೂದಲನ್ನು ಎಂದಿಗೂ ಕತ್ತರಿಸುವುದಿಲ್ಲ. ಕತ್ತರಿ ಹಾಕುವುದು ಕೂದಲಿಗೆ ಆರ್ಡರ್ ಬಂದರೆ ಮಾತ್ರ.!

ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಎಲ್ಲರೂ ಬಿಸಿನೆಸ್ ಕಲ್ಕೊಂಡಾಗ ಆಕೆ ಕೂದಲನ್ನು ಮಾರಾಟ ಮಾಡಲು ಪ್ರಾರಂಭಿಸಿದಳು.
ಬ್ಯಾಂಡ್ ಅನ್ನು ಹೊಂದಿರುವ ಆಕೆ ಗಾಯಕಿ ಮತ್ತು ಗಿಟಾರ್ ವಾದಕಳಾಗಿದ್ದಾಳೆ. ಕೊರೋನಾ ಸಾಂಕ್ರಾಮಿಕ ಸಮಯದಲ್ಲಿ, ಆಕೆಯ ಗಳಿಕೆಯು ಗಮನಾರ್ಹವಾಗಿ ಕಡಿಮೆಯಾಯಿತು ಮತ್ತು ಅವಳು ಹೇಗಾದರೂ ಹಣವನ್ನು ಗಳಿಸಲು ಪ್ರಯತ್ನಿಸುತ್ತಿದ್ದಳು. ಅಂದಿನಿಂದ ಅವಳು ವಯಸ್ಕ ಚಂದಾದಾರಿಕೆ ಸೈಟ್ ಓನ್ಲಿ ಫ್ಯಾನ್ಸ್‌ನಲ್ಲಿ ತನ್ನ ಸ್ವಂತ ಖಾತೆಯನ್ನು ತೆರೆದಳು. ತನ್ನ ಅಭಿಮಾನಿಗಳಿಗಾಗಿ ಕೂದಲು ಮಾರಾಟದ ವ್ಯಾಪಾರವನ್ನು ಪ್ರಾರಂಭಿಸಿದಳು. ಜನರು ಆಕೆಯ ಕೂದಲಿನ ಬೇಡಿಕೆ ಇಟ್ಟರು ಮತ್ತು ಕೂದಲಿನ ಫೋಟೋದೊಂದಿಗೆ ಆಕೆಯನ್ನು ನೋಡಲು ಇಷ್ಟಪಡುತ್ತಾರೆ. ಎಲ್ಲದಕ್ಕೂ ಇಂತಿಷ್ಟು ಅಂತ ರೇಟ್ ನಿಗದಿ ಮಾಡಿದಳು ಕ್ಯಾಮಿಲ್ಲೆ. ಉದುರಿ ಬಿದ್ದು ವೇಸ್ಟ್ ಆಗುವ ಕೂದಲನ್ನು ಕೊಳ್ಳುವ ಜನರು ಸಿಕ್ಕರೆ, ಯಾರ್ ತಾನೇ ಮಾರಲ್ಲ ಹೇಳಿ. ಅದೂ ದುಬಾರಿ ಬೆಲೆಗೆ !! ಈಗ ಕ್ಯಾಮಿಲ್ 2 ಲಕ್ಷಕ್ಕೂ ಹೆಚ್ಚು ಆದಾಯ ಗಳಿಸುತ್ತಾರೆ

ಅಚ್ಚರಿಯ ವಿಚಾರವೆಂದರೆ ಗ್ರಾಹಕರು ಒಮ್ಮೆ ಆಕೆಯ ಕೂದಲನ್ನು ಜೋಡಿಸಿದ ಬ್ರಷ್ ಅನ್ನು ಖರೀದಿಸಲು ಬೇಡಿಕೆಯಿಟ್ಟಿದ್ದರಂತೆ. ಅಷ್ಟೇ ಅಲ್ಲದೆ, ಖಾಸಗಿ ಅಂಗದ ಕೂದಲಿಗೂ ಬೇಡಿಕೆ ಇದೆ ಎಂದು ಕ್ಯಾಮಿಲ್ಲೆ ಅಲೆಕ್ಸಾಂಡರ್ ಹೇಳಿದ್ದಾಳೆ. ಓರ್ವ ಗ್ರಾಹಕ ಹಿಂದೊಮ್ಮೆ ಕ್ಯಾಮಿಲ್ಲೆ ಅಲೆಕ್ಸಾಂಡರ್ ಅವರಿಂದ 30 ಸಾವಿರ ರೂಪಾಯಿಗೆ ಒಳ ಉಡುಪುಗಳನ್ನು ಖರೀದಿಸಿದ. ಆದರೆ ಕ್ಯಾಮಿಲ್ಲೆ ತನ್ನ ಖಾತೆಯಲ್ಲಿ ಇದುವರೆಗೆ ನಗ್ನ ಫೋಟೋಗಳು ಅಥವಾ ವೀಡಿಯೊಗಳನ್ನು ಪೋಸ್ಟ್ ಮಾಡುವುದಿಲ್ಲವಂತೆ. ಕೂದಲ ಬಿಸಿನೆಸ್ ನಲ್ಲಿ ಆಕೆಗೆ ತೃಪ್ತಿ ಉಂಟ0ತೆ.
ಈಗ ಕ್ಯಾಮಿಲ್ಲೆ ಅಲೆಕ್ಸಾಂಡರ್ ತಿಂಗಳಿಗೆ 2 ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಹಣವನ್ನು ಕೂದಲು ಮಾರಾಟ ಮಾಡುವ ಮೂಲಕ ಗಳಿಸುತ್ತಾಳೆ.