Tumakuru : ಪಾನಿಪುರಿ ತಿಂದು 25 ಮಂದಿ ಆಸ್ಪತ್ರೆಗೆ ದಾಖಲು!!

Tumakuru : ಪಾನಿಪುರಿ ಎಂದರೆ ಇಂದಿನ ಜನತೆಗೆ ಬಲು ಇಷ್ಟ. ಬೀದಿ ಬದಿ ಅಥವಾ ಅಂಗಡಿಗಳಲ್ಲಿ ಎಲ್ಲಿ ಕಂಡರೂ ಪಾನಿಪುರಿ ತಿನ್ನಲು ಜನರು ಮುಗಿ ಬೇಳುತ್ತಾರೆ. ಆದರೆ ಇದೀಗ ತುಮಕೂರು ಜಿಲ್ಲೆಯ ಶಿರಾದಲ್ಲಿ 25 ಮಂದಿ ಪಾನಿಪುರಿ ತಿಂದು ಆಸ್ಪತ್ರೆಗೆ ದಾಖಲಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಬುಕ್ಕಾಪಟ್ಟಣದ ಪಾನಿಪೂರಿ ಅಂಗಡಿಯೊಂದರಲ್ಲಿ ಪಾನಿಪುರಿ ತಿಂದ 25ಕ್ಕೂ ಹೆಚ್ಚು ಮಂದಿಗೆ ಹೊಟ್ಟೆ ನೋವು, ವಾಂತಿ, ಭೇದಿ ಕಾಣಿಸಿಕೊಂಡಿದೆ. ಬಳಿಕ ಅವರೆಲ್ಲರೂ ಅಸ್ವಸ್ಥರಾಗಿದ್ದು ಬುಕ್ಕಾಪಟ್ಟಣ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ.
ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿಗಳು ‘ಶ್ರೀನಾಥ್’ ಪಾನಿಪುರಿ ಅಂಗಡಿ ಮಾಲೀಕನಿಗೆ ಎಚ್ಚರಿಕೆ ನೀಡಿ ಆಹಾರ ಮಾದರಿಗಳನ್ನು ಟೆಸ್ಟ್ ಮಾಡಿಸೋಕೆ ತೆಗೆದುಕೊಂಡು ಹೋಗಿದ್ದಾರೆ. ಬಳಿಕ ಅಂಗಡಿ ಮಾಲೀಕನಿಗೆ ನೋಟಿಸ್ ಕೂಡ ನೀಡಲಾಗಿದೆ.
Comments are closed.