ಪಾಕ್ ನಲ್ಲಿ ಮದುವೆಯಾಗ ಬಯಸಿದ್ಧಳಾ ಮಲ್ಹೋತ್ರಾ ?: ಹೊರಬಿತ್ತು ISI ಏಜೆಂಟ್ ಜೊತೆಗಿನ ಚಾಟ್!

Share the Article

ಐಎಸ್​ಐ ಏಜೆಂಟ್ ಜೊತೆ ಭಾರತದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ನಡೆಸಿದ್ದ ವಾಟ್ಸಾಪ್ ಚಾಟ್​ ಇದೀಗ ಬಯಲಾಗಿದೆ. ಜ್ಯೋತಿ ಮಲ್ಹೋತ್ರಾ ಅವರ ಸೋರಿಕೆಯಾದ ವಾಟ್ಸಾಪ್ ಚಾಟ್‌ಗಳು ಅವರ ಪಾಕಿಸ್ತಾನದ ಹೊಗಳಿಕೆ ಮತ್ತು ಅಲ್ಲಿ ಆಕೆ ಮದುವೆಯಾಗುವ ಬಯಕೆಯನ್ನು ಬಹಿರಂಗಪಡಿಸಿವೆ. ಆಕೆಯೊಂದಿಗೆ ಸಂಪರ್ಕದಲ್ಲಿದ್ದ ಐಎಸ್‌ಐ ಆಪರೇಟಿವ್ ಅಲಿ ಹಸನ್‌ ಜೊತೆ ಚಾಟ್ ಮಾಡಿದ್ದ ಆಕೆ ಪಾಕಿಸ್ತಾನದಲ್ಲಿ ನನ್ನನ್ನು ಮದುವೆಯಾಗಿ ಎಂದು ಕೇಳಿದ್ದರು ಎಂದು ವರದಿಯಾಗಿದೆ.

ನವದೆಹಲಿ: ಪಾಕಿಸ್ತಾನಕ್ಕೆ ಬೇಹುಗಾರಿಕೆ ಮಾಡುತ್ತಿದ್ದರು ಎಂಬ ಆರೋಪದ ಮೇಲೆ ಬಂಧಿತರಾಗಿರುವ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಪಾಕಿಸ್ತಾನ ಹೈಕಮಿಷನ್ ಅಧಿಕಾರಿ ಡ್ಯಾನಿಶ್ ಅವರನ್ನು ಮದುವೆಯಾಗಿದ್ದಾರೆಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಅದರ ನಡುವೆಯೇ ಆಕೆಯ ಕೆಲವು ವಾಟ್ಸಾಪ್ ಚಾಟ್‌ಗಳು ಈಗ ಅವರು ಪಾಕಿಸ್ತಾನದಲ್ಲಿ ಮದುವೆಯಾಗಲು ಬಯಸಿದ್ದರೆಂದು ಬಹಿರಂಗಪಡಿಸುತ್ತಿವೆ. ಐಎಸ್‌ಐ ನಲ್ಲಿ ಕೆಲಸ ಮಾಡುತ್ತಿದ್ದ ಏಜೆಂಟ್ ಅಲಿ ಹಸನ್ ಅವರೊಂದಿಗಿನ ಜ್ಯೋತಿ ಮಲ್ಹೋತ್ರಾ ನಡೆಸಿದ್ದ ವಾಟ್ಸಾಪ್ ಚಾಟ್‌ಗಳು ತನಿಖೆ ವೇಳೆ ಸಿಕ್ಕಿದ್ದು, ಅದರಲ್ಲಿ ಗೂಢಚಾರಿಯಾಗಿದ್ದ ಜ್ಯೋತಿ ​​ಪಾಕಿಸ್ತಾನವನ್ನು ಹೊಗಳಿದ್ದಾರೆ ಮತ್ತು ಅಲ್ಲಿಯೇ ಮದುವೆಯಾಗಲು ಬಯಸಿದ್ದರು ಎಂಬುದು ಬಯಲಾಗಿದೆ.

“ನನ್ನನ್ನು ಪಾಕಿಸ್ತಾನದಲ್ಲಿ ಮದುವೆಯಾಗಿ” ಎಂದು ಜ್ಯೋತಿ ಹಸನ್ ಅವರ ಜೊತೆ ಚಾಟ್ ಮಾಡಿದ್ದರು ಎಂದು ವರಡಿಯಾಗಿದ್ದು, ಆ ವರದಿಗಳ ಪ್ರಕಾರ, ವಾಟ್ಸಾಪ್ ಚಾಟ್‌ಗಳು ಇಬ್ಬರ ನಡುವಿನ ಹಲವಾರು ಗುಪ್ತ ಸಂಭಾಷಣೆಗಳನ್ನು ಬಹಿರಂಗಪಡಿಸಿದ್ದು, ಅವು ಭಾರತದ ರಹಸ್ಯ ಕಾರ್ಯಾಚರಣೆಗಳಿಗೆ ಸಂಬಂಧಿಸಿದವು ಎನ್ನಲಾಗುತ್ತಿದೆ.

ಹರಿಯಾಣದ ಹಿಸಾರ್‌ ನಿವಾಸಿಯಾದ ಮತ್ತು ‘ಟ್ರಾವೆಲ್ ವಿತ್ ಜೋ’ ಎಂಬ ಯೂಟ್ಯೂಬ್ ಚಾನೆಲ್ ಅನ್ನು ನಡೆಸುತ್ತಿದ್ದ ಮಲ್ಹೋತ್ರಾ ಅವರನ್ನು ಕಳೆದ ವಾರ ಬಂಧಿಸಲಾಗಿದ್ದು, ಮೂಲಗಳು ಸೂಚಿಸುವಂತೆ, ‘ಆಪರೇಷನ್ ಸಿಂಧೂರ್’ ಸಂದರ್ಭದಲ್ಲೂ ಈಕೆ ಭಾರತರದ ಕುರಿತಾದ ಹಲವಾರು ವಿಷಯಗಳನ್ನು ಪಾಕಿಸ್ತಾನಕ್ಕೆ ಸೋರಿಕೆ ಮಾಡಿದ್ದಾರೆ ಎಂದು ತಿಳಿದ ಕೆಲವೇ ಗಂಟೆಗಳ ನಂತರ ಈ ವಿಷಯ ಹೊರಬಿದ್ದಿದೆ. ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಯುತ್ತಿರುವಾಗ ಆಕೆ ಡ್ಯಾನಿಶ್ ಜೊತೆ ಸಂಪರ್ಕದಲ್ಲಿದ್ದರು, ಆದರೆ ಈ ವರ್ಷದ ಮಾರ್ಚ್‌ನಲ್ಲಿ ಜ್ಯೋತಿ ಅವರು ಡ್ಯಾನಿಶ್ ಜೊತೆಗಿನ ತಮ್ಮ ಚಾಟ್‌ಗಳನ್ನು ಡಿಲೀಟ್ ಮಾಡಿದ್ದಾರೆ ಎಂದು ತನಿಖೆಗಳು ಬಹಿರಂಗಪಡಿಸಿವೆ. ಈ ಪ್ರಕರಣದ ಹೆಚ್ಚಿನ ತನಿಖೆಗಾಗಿ ಅವರ ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು,ಪಾಕಿಸ್ತಾನದ ಪರವಾಗಿ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಮೇ 17ರಂದು ಜ್ಯೋತಿ ಮಲ್ಹೋತ್ರಾ ಅವರನ್ನು ಬಂಧಿಸಲಾಗಿದೆ.

Comments are closed.