ನಿದ್ರೆಯಲ್ಲಿದ್ದಾಗ ಮೂವರಿಗೆ ಪೆಟ್ರೋಲ್ ಹಾಕಿ ಸುಟ್ಟ ಕಿರಾತಕ: ಗೆಳತಿಯೊಂದಿಗೆ ಅಕ್ರಮ ಸಂಬಂಧ ಶಂಕೆ ಹಿನ್ನೆಲೆ

Bengaluru: ತನ್ನ ಗೆಳತಿಯೊಂದಿಗೆ ಅಕ್ರಮ ಸಂಬಂಧ ಹೊಂದಿರುವುದಾಗಿ ಅನುಮಾನ ಪಟ್ಟು ವ್ಯಕ್ತಿಯೊಬ್ಬ ಪೆಟ್ರೋಲ್ ಸುರಿದು ಸಜೀವ ಸುತ್ತಿರುವ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಇಜುಲ್ ಹಕ್ (25) ಈತ ಮೃತ ಡೈರ್ದೈವಿಯಾಗಿದ್ದು, ಈತ ಹಾಗೂ ಆರೋಪಿ ಮುನಾವರ್ ಅಲಿ(22) ಇಬ್ಬರೂ ಕೂಡ ಅಸ್ಸಾಂ ಮೂಲದವರಾಗಿರುತ್ತಾರೆ.
ಮೃತ ವ್ಯಕ್ತಿಗೆ 6 ತಿಂಗಳ ಹೆಣ್ಣು ಮಗುವಿದ್ದು, ಪತ್ನಿ ಹಾಗೂ ಮಗು ಅಸ್ಸಾಂ ನಲ್ಲೇ ವಾಸವಿರುತ್ತಾರೆ ಹಾಗೂ ಈತ ಬೆಂಗಳೂರಿಗೆ 6 ತಿಂಗಳ ಹಿಂದಷ್ಟೇ ಬಂದಿದ್ದ.
ಇನ್ನು ಆರೋಪಿ ಅಲಿ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದು, ಆಕೆಯೊಂದಿಗೆ ಹಕ್ ಅಕ್ರಮ ಸಂಬಂಧ ಹೊಂದಿದ್ದಾನೆಂದು ಅನುಮಾನಿಸಿದ್ದು, ಕಳೆದ ಬುಧವಾರ ಇಬ್ಬರ ನಡುವೆ ಮಾತಿನ ಚಕಮಕಿಯೂ ನಡೆದಿರುತ್ತದೆ. ಈ ವೇಳೆ ಹಕ್ ಅವರ ಇಬ್ಬರು ಸ್ನೇಹಿತರಾದ ಶಹನೂರ್ ರೆಹಮಾನ್ ಮತ್ತು ಫರೀದುಲ್ ಇಸ್ಲಾಂ ಬೆಂಬಲಕ್ಕೆ ಬಂದಿದ್ದು, ಈ ವೇಳೆ ಆರೋಪಿ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿರುತ್ತಾನೆ.
ಶುಕ್ರವಾರ ಬೆಳಗಿನ ಜಾವ 3.30 ರಿಂದ 4.30 ರ ಸುಮಾರಿಗೆ ಶೆಡ್ ಬಳಿ ಬಂದಿರುವ ಆರೋಪಿ, ನಿದ್ರೆಯಲ್ಲಿದ್ದ ಇಜುಲ್ ಹಕ್, ಶಹನೂರ್ ರೆಹಮಾನ್ ಮತ್ತು ಫರೀದುಲ್ ಇಸ್ಲಾಂ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಇಜುಲ್ ಹಕ್ ಸಾವನ್ನಪ್ಪಿದ್ದು, ಮತ್ತಿಬ್ಬರನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿರುತ್ತದೆ. ಇದಕ್ಕೆ ಸಂಬಂಧಿಸಿದಂತೆ ಮಾರತಹಳ್ಳಿ ಪೊಲೀಸರು ಆರೋಪಿ ವಿರುದ್ಧ ಕೊಲೆ (ಬಿಎನ್ಎಸ್ 103) ಮತ್ತು ಕೊಲೆಗೆ ಯತ್ನ (ಬಿಎನ್ಎಸ್ 109) ಪ್ರಕರಣ ದಾಖಲಿಸಿದ್ದಾರೆ.
Comments are closed.