ಪದವೀಧರರಿಗೆ ಸಿಹಿ ಸುದ್ದಿ- IOB ಬ್ಯಾಂಕಿನಲ್ಲಿ 400 ಹುದ್ದೆಗಳಿಗೆ ನೇಮಕಾತಿ

ಇಂಡಿಯನ್ ಓವರ್ಸೀಸ್ ಬ್ಯಾಂಕ್(IOB) 400 ಸ್ಥಳೀಯ ಬ್ಯಾಂಕ್ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಬ್ಯಾಂಕಿನ ಅಧಿಕೃತ ವೆಬ್‌ಸೈಟ್ iob.in ಗೆ ಭೇಟಿ ನೀಡುವ ಮೂಲಕ ಮೇ 31 ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಒಟ್ಟು 400 ಹುದ್ದೆಗಳಿಗೆ ನೇಮಕಾತಿಗಾಗಿ ಬ್ಯಾಂಕ್ ಅರ್ಜಿಗಳನ್ನು ಆಹ್ವಾನಿಸಿದೆ.
ಈ ಹುದ್ದೆಗಳನ್ನು ರಾಜ್ಯವಾರು ಬಿಡುಗಡೆಗೊಳಿಸಿದ್ದು, ಇದರಲ್ಲಿ ತಮಿಳುನಾಡಿಗೆ 260 ಹುದ್ದೆಗಳು, ಒಡಿಶಾಗೆ 10 ಹುದ್ದೆಗಳು, ಮಹಾರಾಷ್ಟ್ರಕ್ಕೆ 45 ಹುದ್ದೆಗಳು, ಗುಜರಾತ್‌ಗೆ 30 ಹುದ್ದೆಗಳು, ಪಶ್ಚಿಮ ಬಂಗಾಳಕ್ಕೆ 34 ಹುದ್ದೆಗಳು ಮತ್ತು ಪಂಜಾಬ್‌ಗೆ ಒಟ್ಟು 21 ಹುದ್ದೆಗಳು ಸೇರಿವೆ. ಅಭ್ಯರ್ಥಿಗಳು ಈ ಹುದ್ದೆಗಳಿಗೆ ನಿಗದಿಪಡಿಸಿದಂತಹ ಕೊನೆಯ ದಿನಾಂಕದ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಯ ಪ್ರಕ್ರಿಯೆ ಮೇ 12 ರಿಂದ ಆರಂಭವಾಗಲಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಅರ್ಹತೆಗಳನ್ನು ಹೊದಿರಬೇಕಾಗಿದ್ದು, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಪಡೆದಿರಬೇಕು ಹಾಗೂ ಅರ್ಜಿದಾರರ ವಯಸ್ಸು 20 ರಿಂದ 30 ವರ್ಷಗಳ ನಡುವೆ ಇರಬೇಕು.
ಸಾಮಾನ್ಯ/ಇಡಬ್ಲ್ಯೂಎಸ್/ಒಬಿಸಿ ವರ್ಗದವರಿಗೆ ಅರ್ಜಿ ಶುಲ್ಕವನ್ನು 850 ರೂ.ಗೆ ನಿಗದಿಪಡಿಸಲಾಗಿದ್ದು, ಎಸ್‌ಸಿ/ಎಸ್‌ಟಿ/ಪಿಡಬ್ಲ್ಯೂಬಿಡಿ ವರ್ಗಕ್ಕೆ ಸೇರಿದ ಅರ್ಜಿದಾರರು ಅರ್ಜಿ ಶುಲ್ಕವಾಗಿ 175 ರೂ.ಗಳನ್ನು ಪಾವತಿಸಬೇಕಾಗುತ್ತದೆ. ಆಯ್ಕೆ ಪ್ರಕ್ರಿಯೆಯು ಆನ್‌ಲೈನ್ ಪರೀಕ್ಷೆ, ಭಾಷಾ ಪ್ರಾವೀಣ್ಯತೆ ಪರೀಕ್ಷೆ ಮತ್ತು ಸಂದರ್ಶನವನ್ನು ಒಳಗೊಂಡಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಬ್ಯಾಂಕಿನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.
Comments are closed.