ಕೃಷ್ಣಮೃಗ ಹತ್ಯೆ ಪ್ರಕರಣ: ಸಲ್ಮಾನ್ ಖಾನ್ ಜೊತೆಗೆ ಸೈಫ್, ತಬು, ಸೋನಾಲಿಗೂ ಕಂಟಕ

Share the Article

Rajasthan: 1998 ರಲ್ಲಿ ನಡೆದ ಕೃಷ್ಣಮೃಗ ಹತ್ಯೆ ಕೇಸ್ ನಲ್ಲಿ ಸಲ್ಮಾನ್ ಖಾನ್ ಅಪರಾಧಿ ಎಂದು ಸ್ಥಳೀಯ ಕೋರ್ಟ್ ತೀರ್ಪು ನೀಡಿತ್ತು. ನಂತರದಲ್ಲಿ ಆ ತೀರ್ಪನ್ನು ಹೈಕೋರ್ಟ್ ಪ್ರಶ್ನಿಸಿ, ಸದ್ಯ ಆ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಈ ಕೇಸ್ ನಿಂದ ಮುಕ್ತಿ ಪಡೆದು ನಿರಪರಾಧಿಗಳು ಎನಿಸಿಕೊಂಡಂತಹ ಸೈಫ್ ಅಲಿ ಖಾನ್, ಸೋನಾಲಿ ಬೇಂದ್ರೆ, ತಬು ಮತ್ತು ನೀಲಂ ಅವರಿಗೆ ಮತ್ತೆ ತಲೆನೋವು ಶುರುವಾಗಿದ್ದು, ಇವರ ಕುರಿತಾಗಿ ರಾಜಸ್ಥಾನ ಸರ್ಕಾರ ಮತ್ತೊಮ್ಮೆ ಹೈಕೋರ್ಟ್ ಮೊರೆ ಹೋಗಿದೆ.

1998ರ ಅಕ್ಟೋಬರ್​ನಲ್ಲಿ ಸಲ್ಮಾನ್ ಖಾನ್, ಸೈಫ್, ತಬು, ಸೋನಾಲಿ ಬೇಂದ್ರ ಮೊದಲಾದವರು ‘ಹಮ್ ಸಾತ್ ಸಾತ್ ಹೇ’ ಚಿತ್ರೀಕರಣಕ್ಕೆ ಎಂದು ಜೋಧ್​ಪುರ್​ ಗೆ ತೆರಳಿದ್ದಾಗ, ಶೂಟ್ ಮುಗಿದ ಬಳಿಕ ರಾತ್ರಿ ವೇಳೆಗೆ ಸಲ್ಮಾನ್ ಖಾನ್ ಕೃಷ್ಣಮೃಗ ವನ್ನು ಬೇಟೆಯಾಡಿದ್ದಾರೆ ಹಾಗೂ ಇವರೆಲ್ಲರೂ ಜೊತೆಯಲ್ಲಿದ್ದು ಸಾಥ್ ನೀಡಿದ್ದಾರೆ ಎಂಬ ಆರೋಪವಿತ್ತು. 2018 ರಲ್ಲಿ ಸಲ್ಮಾನ್ ಖಾನ್ ನನ್ನು ಆರೋಪಿ ಎಂದು ಘೋಷಿಸಿ, ಇನ್ನುಳಿದವರನ್ನು ನಿರಪರಾಧಿಗಳು ಎಂದು ಅದೇಶಿಸಲಾಗಿತ್ತು.

ಈಗ ರಾಜಸ್ಥಾನ ಸರ್ಕಾರ ಕೋರ್ಟ್ ನಲ್ಲಿ ಈ ತೀರ್ಪಿನ ಕುರಿತಾಗಿ ಪ್ರಶ್ನೆ ಮಾಡಿದ್ದು, ಜುಲೈ 28ಕ್ಕೆ ಪ್ರಕರಣದ ವಿಚಾರಣೆಯನ್ನು ನಿಗದಿ ಮಾಡಲಾಗಿದೆ.ಈ ಹಿಂದೆ ಬಿಷ್ಣೋಯ್ ಕುಟುಂಬವು ಅವರಿಗೆ ಕೃಷ್ಣಮೃಗವು ಆರಾಧ್ಯ ದೇವರಾದುದರಿಂದ ಅವರು ಅದರ ಹತ್ಯೆಯನ್ನು ಖಂಡಿಸಿ ಸಲ್ಮಾನ್ ಖಾನ್ ಮತ್ತು ಸಹಚರರ ಮೇಲೆ ದೂರು ನೀಡಿತ್ತು.

Comments are closed.