Urfi Javed: ‘ಆ ಡೈರೆಕ್ಟರ್ ರೂಮಿಗೆ ಕರೆದೊಯ್ದು ನೇರವಾಗಿ ನನ್ನ…’ ಶಾಕಿಂಗ್ ಸತ್ಯ ಹೊರಹಾಕಿದ ಉರ್ಫಿ ಜಾವೇದ್ !!

Urfi Javed: ಬಾಲಿವುಡ್ ನಟಿ ಉರ್ಫಿ ಜಾವೇದ್ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ತನ್ನ ವಿವಿಧ ರೀತಿಯ, ವಿಚಿತ್ರ ವಿಚಿತ್ರವಾದ ಉಡುಗೆ ತೊಡುಗೆಗಳ ಮೂಲಕ, ಅರೆಬರೆ ಬಟ್ಟೆಯ ಮೂಲಕ ಆಕೆ ನ್ಯಾಷನಲ್ ಫೇಮಸ್ ಆಗಿದ್ದಾಳೆ. ಆದರೆ ಈಗ ಅಚ್ಚರಿಯೆಂಬಂತೆ ಉರ್ಫಿ(Urfi Javed) ತನಗಾದ ಕಾಸ್ಟಿಂಗ್ ಕೌಚ್(Casting Couch) ಬಗ್ಗೆ ಬಹಿರಂಗಪಡಿಸಿದ್ದಾಳೆ.

 

ಇದನ್ನೂ ಓದಿ: Actor Yash: ಬಾಲಿವುಡ್‌ ಸಿನಿಮಾ ʼರಾಮಾಯಣʼ ಚಿತ್ರಕ್ಕೆ ಯಶ್‌ ನಿರ್ಮಾಪಕ

ಹೌದು, ಬಿಗ್ ಬಾಸ್ ಓಟಿಟಿ (Bigg boss OTT) ಮೂಲಕ ಹಿಂದಿ ಕಿರುತೆರೆ ಮತ್ತು ಸಿನಿಮಾ ಲೋಕಕ್ಕೆ ಪರಿಚಯವಾದ ಉರ್ಫಿ ಜಾವೇದ್ ಎಲ್ಲರಿಗೂ ಪರಿಚಿತಳೆ. ಸಾಮಾನ್ಯವಾಗಿ ಸಿನಿ ರಂಗದಲ್ಲಿ ನಟಿಯರಿಗೆ ಆಗೋ ಕಹಿ ಅನುಭವವೊಂದು ಉರ್ಫಿ ಜೀವನದಲ್ಲೂ ಆಗಿದೆಯಂತೆ. ನಟನೆಯ ಬೆನ್ನುಹತ್ತಿ ಹೋದ ಉರ್ಫಿಗೆ ನಿರ್ದೇಶಕನೊಬ್ಬ ಕಿರುಕುಳಕೊಟ್ಟಿದ್ದನಂತೆ !! ಆಗ ತಾನೇ ಮುಂಬೈಗೆ ಬಂದ ದಿನಗಳಲ್ಲಿ ಎದುರಿಸಿರುವ ಘಟನೆಯೊಂದನ್ನು ಉರ್ಫಿ ಮೆಲುಕು ಹಾಕಿದ್ದಾರೆ.

ಇದನ್ನೂ ಓದಿ: Bank Loan: ಯಾವುದೇ ಆಸ್ತಿ ಪತ್ರ ಇಟ್ಟು ಸಾಲ ಪಡೆದವರಿಗೆ RBIಯಿಂದ ಮುಖ್ಯ ಮಾಹಿತಿ!!

ಮುಂಬೈಗೆ ಬಂದ ಮೊದಲ ದಿನಗಳಲ್ಲಿ ಒಮ್ಮೆ ನಿರ್ದೇಶಕರೊಬ್ಬರು ಆಡಿಷನ್(Audition)ಇದೆ ಬಾ ಎಂದು ತಮ್ಮ ಮನೆಗೆ ಉರ್ಫಿಯನ್ನು ಕರೆಸಿಕೊಂಡಿದ್ದರು. ನಾನು ಹೋಗಿದ್ದಾಗ ಅವರ ಪ್ರಿಯತಮೆ ರೀತಿಯಲ್ಲಿ ನಟನೆ ಮಾಡಿ ನನ್ನ ಹತ್ತಿರ ಬಂದು ತಬ್ಬಿಕೊಳ್ಳಬೇಕು ಎಂದು ಹೇಳಿದರು. ಆಗ ನಾನು ಸುತ್ತಾ ಮುತ್ತಾ ನೋಡಿದೆ, ಆದರೆ ಯಾವುದೇ ಕ್ಯಾಮರಾ ಕಾಣಲಿಲ್ಲ. ಆರಂಬದಲ್ಲಿ ಏನು ಮಾತನಾಡಲಾಗದೆ ಸೀದಾ ಹೋಗಿ ತಬ್ಬಿಕೊಂಡೆ. ಮತ್ತೆ ಮುಜುಗರವಾಗಿ ನಿರ್ದೇಶಕರ ಬಳಿ ಕ್ಯಾಮೆರಾ ಎಲ್ಲಿ ಕೇಳಿದೆ. ಅದಕ್ಕೆ ಅವರು ಅವರ ತಲೆ ತೋರಿಸಿ ಇದು ನನ್ನ ಕ್ಯಾಮೆರಾ ಎಂದು ಹೇಳಿದರು. ತಕ್ಷಣ ನಾನು ಸರ್ ನಾನು ಹೊರಡುತ್ತಿದ್ದೇನೆ ಎಂದು ಹೇಳಿ ಹೊರಟು ಬಂದೆ ಎಂದಿದ್ದಾರೆ.

Leave A Reply

Your email address will not be published.