100 rupee note ban: ಚುನಾವಣೆ ಹೊತ್ತಲ್ಲೇ 100ರೂ ನೋಟ್ ಬ್ಯಾನ್ ?! RBI ನಿಂದ ಮಹತ್ವದ ಮಾಹಿತಿ

100 rupee note ban: ದೇಶದಲ್ಲಿ ಸಾಕಷ್ಟು ಸಮಯದಿಂದ 100 ರೂಪಾಯಿ ನೋಟು ಬ್ಯಾನ್ ಆಗುತ್ತೆ ಎಂಬ ಸುದ್ದಿ ಸಾಕಷ್ಟು ಸದ್ದು ಮಾಡುತ್ತಿದೆ. ಈ ನಡುವೆ ಕೊಂಚ ತಣ್ಣಗಾಗಿದ್ದ ಈ ಸುದ್ದಿ ಇದೀಗ ಮತ್ತೆ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು ಚುನಾವಣೆ ಹೊತ್ತಲ್ಲಿ 100ರೂ ನ ಹಳೆಯು ನೋಟುಗಳು ಬ್ಯಾನ್ ಆಗುತ್ತದೆ(100 rupee note ban) ಎಂದು ನ್ಯೂಸ್ ಆಗುತ್ತಿದೆ. ಕೆಲವು ಪೋಸ್ಟ್ ಗಳು ಕೂಡ ವೈರಲ್ ಆಗುತ್ತಿದೆ. ಆದರೀಗ ಈ ಬಗ್ಗೆ ಮತ್ತೆ RBI ಸ್ಪಷ್ಟೀಕರಣ ನೀಡಿದೆ.

Interesting Facts : ಸ್ಟೂಲ್ ಮಧ್ಯೆ ರಂಧ್ರ ಯಾಕೆ ಇದೆ, ಗೊತ್ತೇ? ಇಂಟೆರೆಸ್ಟಿಂಗ್ ಕಾರಣ ಇಲ್ಲಿದೆ!

Interesting Facts: ನಿಮಗೆ ಗೊತ್ತಿದೆಯೇ? ನಾಯಿಗಳು ಯಾಕೆ ಕಾರಿನ ಚಕ್ರದ ಮೇಲೆ ಮೂತ್ರ ಮಾಡುತ್ತದೆ ಎಂದು? ಇಲ್ಲಿದೆ…

ಹೌದು, 100ರೂಪಾಯಿಯ ಹಳೆಯ ನೋಟು ಬ್ಯಾನ್ ಆಗುತ್ತಿದ್ದು ಆರ್‌ಬಿಐ ಮಾರ್ಚ್ 31, 2024 ಅನ್ನು ಇದಕ್ಕೆ ಕೊನೆಯ ದಿನಾಂಕ ಎಂದು ನಿಗದಿಪಡಿಸಿರುವದಾಗಿ ಜನ ಮಾತಾಡುತ್ತಿದ್ದಾರೆ. ಆದರೆ RBIನ ಸೂಚನೆ ಪ್ರಕಾರ ಯಾವುದೇ ವಿಧವಾಗಿ 100 ರೂಪಾಯಿ ಹಳೆ ನೋಟು (Old 100 Rupees Note) ಅಮಾನೀಕರಣ ಮಾಡಲಿಲ್ಲ. ವಾಟ್ಸ್ ಆ್ಯಪ್ ಮತ್ತು ಇತರ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿದೆ. ಈ ಬಗ್ಗೆ RBI ಯಾವುದೆ ಘೋಷಣೆ ಹೊರಡಿಸಿಲ್ಲ ಎಂದು ಸ್ಪಷ್ಟನೆ ನೀಡಿದೆ.

Interesting Facts: ರಸ್ತೆ ಪಕ್ಕದಲ್ಲಿರುವ ಮರಗಳಿಗೆ ಬಿಳಿ ಬಣ್ಣ ಯಾಕೆ ಹಚ್ಚೋದು ಗೊತ್ತಾ? ಇಂಟ್ರೆಸ್ಟಿಂಗ್ ಕಾರಣ…

ಇದನ್ನೂ ಓದಿ: ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟರಿಗೆ ಖಾರದ ಚುರುಮುರಿ ಮಾಡಿ ಕೊಟ್ಟ ಮಾಜಿ ಶಾಸಕ ಸಂಜೀವ ಮಠಂದೂರು

ಅಂದಹಾಗೆ 2000 ಮುಖ ಬೆಲೆಯ ನೋಟು ವಾಪಾಸ್ಸು ನೀಡುವಂತೆ ಕೇಂದ್ರ ಬ್ಯಾಂಕ್ ಘೋಷಣೆ ಮಾಡಿದ್ದ ಬೆನ್ನಲ್ಲೆ ಕೋಟ್ಯಾಂತರ ರೂಪಾಯಿ ವಾಪಾಸ್ಸಾಗಿತ್ತು ಇನ್ನು ಬರಲು ಕೂಡ ಬಾಕಿ ಇದೆ. ಹೀಗಾಗಿ ನೋಟು ಬದಲಾವಣೆ ಕುರಿತು RBI ನಿಂದ ಮಾಹಿತಿ ಬಂದರೆ ಮಾತ್ರ ನಂಬಿ. ಬೇರೆ ಯಾವುದೇ ಸಮಾಜಿಕ ಜಾಲತಾಣಗಳ ಸುದ್ದಿಯನ್ನು ನಂಬಬೇಡಿ.

Leave A Reply

Your email address will not be published.