Interpol Blue Corner Notice: ಪ್ರಜ್ವಲ್ ರೇವಣ್ಣ ವಿರುದ್ಧ ಹೊರಡಿಸಿರುವ ಬ್ಲೂ ಕಾರ್ನರ್ ನೋಟಿಸ್ ಅರ್ಥವೇನು : ನೋಟಿಸ್ ಗಳಲ್ಲಿ ಎಷ್ಟು ವಿಧಗಳಿವೆ ಗೊತ್ತಾ?

Interpol Blue Corner Notice: ಇತ್ತೀಚಿಗೆ ಸಂಸದ ಪ್ರಜ್ವಲ್ ರೇವಣ್ಣ (Prajval Revanna) ಅವರ ಪೆನ್ ಡ್ರೈವ್ (pendrive case)ಕೇಸ್ ರಾಷ್ಟ್ರದಾದ್ಯಂತ ಸಂಚಲನ ಮೂಡಿಸಿದೆ. ರಾಜ್ಯದ ಎಸ್ ಐ ಟಿ ತಂಡ(SIT team )ಈಗಾಗಲೇ ಪ್ರಜ್ವಲ್ ರೇವಣ್ಣ(Prajval Revanna) ವಿರುದ್ಧ ತನಿಖೆ ಮುಂದುವರಿಸಿದ್ದು, ಇದೀಗ ಸಿಬಿಐ (CBI) ಸಹ ಈ ಕೇಸ್ ಸಂಬಂಧ ಇಂಟರ್ ಪೋಲ್ ನಲ್ಲಿ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಿದೆ. ಹಾಗಾದರೆ ಇಂಟರ್ ಪೋಲ್ ಎಂದರೇನು? ( What is Interpol)ಇಂಟರ್ ಪೋಲ್ ಕೆಲಸವೇನು? ಇದು ಹೇಗೆ ಕಾರ್ಯನಿರ್ವಹಿಸುತ್ತೆ? ಬ್ಲೂ ಕಾರ್ನರ್ ನೋಟಿಸ್ ಎಂದರೇನು? (Blue corner Notice) ನೋಟೀಸ್ ಗಳಲ್ಲಿ ಎಷ್ಟು ವಿಧಗಳಿವೆ? ಎಂಬ ಪ್ರಶ್ನೆಗಳು ನಿಮ್ಮಲ್ಲಿದ್ದರೆ ಅದಕ್ಕೆ ಇಲ್ಲಿದೆ ಉತ್ತರ.

ಇದನ್ನೂ ಓದಿ: Sushma Raj Nishan Wedding: ಕರಾವಳಿಯ ಹೆಣ್ಣು ಹುಲಿ ಖ್ಯಾತಿಯ ಮದುವೆ ಸಂಭ್ರಮ! 10 ವರ್ಷ ಪ್ರೀತಿಸಿ ಮದುವೆಯಾದ ಕ್ಯೂಟ್ ಜೋಡಿ!

ಇಂಟರ್ ಪೋಲ್( Interpol) ಎಂಬುದು ಇಂಟರ್ ನ್ಯಾಷನಲ್ ಕ್ರಿಮಿನಲ್ ಪೊಲೀಸ್ ಆರ್ಗನೈಸೇಷನ್. ರಾಷ್ಟ್ರಮಟ್ಟದ ಸುದ್ದಿಗಳ ತಿಳುವಳಿಕೆ ಇರುವವರಿಗೆ ಇದು ಚಿರಪರಿಚಿತ ಹೆಸರಾಗಿದೆ. ಇದು ಭಾರತವನ್ನು ಒಳಗೊಂಡಿರುವ 195 ಸದಸ್ಯ ರಾಷ್ಟ್ರಗಳ ಜಾಲವಾಗಿದೆ. ಇಂಟರ್‌ಫೋಲ್‌ (Interpol) ಜಾಲವು ಜಗತ್ತನ್ನು ಸುರಕ್ಷಿತ ಸ್ಥಳವನ್ನಾಗಿ ಮಾಡಲು ವಿಶ್ವದಾದ್ಯಂತ ಪೊಲೀಸರನ್ನು(Police) ಸಹಕರಿಸಲು ಅನುವು ಮಾಡಿಕೊಡುತ್ತದೆ. ನೋಟಿಸ್‌ಗಳ( Notice) ಮೂಲಕ ಪ್ರಸಾರವಾದ ಮಾಹಿತಿಯು ಗಂಭೀರ ಅಪರಾಧಗಳು(crime), ಕಾಣೆಯಾದ ವ್ಯಕ್ತಿಗಳು( Missing persons), ಅಪರಿಚಿತ ದೇಹಗಳು( unidentified dead bodies), ಸಂಭವನೀಯ ಬೆದರಿಕೆಗಳು (Thertanig Calls), ಜೈಲು ತಪ್ಪಿಸಿಕೊಳ್ಳುವಿಕೆ ಮತ್ತು ಅಪರಾಧಿಗಳ ಕಾರ್ಯವೈಖರಿಗಳಿಗೆ ಸಂಬಂಧಿಸಿದ ವ್ಯಕ್ತಿಗಳನ್ನು ಪತ್ತೆ ಹಚ್ಚುವುದಾಗಿದೆ.

ಇದನ್ನೂ ಓದಿ: Udupi: ಬೀಚ್‌ನಲ್ಲಿ ಮುಳುಗುತ್ತಿದ್ದ ಇಬ್ಬರ ರಕ್ಷಣೆ

ಇಂಟರ್ಪೋಲ್ ಮತ್ತು ಭಾರತ :

1956 ರಿಂದ, ಬಾರತವು(India) ಇದರ ಸದಸ್ಯತ್ವವನ್ನು ಹೊಂದಿದೆ. ಭಾರತವು(india) ಇತರ ಎಲ್ಲ ಸದಸ್ಯ ರಾಷ್ಟ್ರಗಳಂತೆ, ರಾಷ್ಟ್ರೀಯ ಅಪರಾಧ ಕೇಂದ್ರ ಬ್ಯೂರೋ (NCB) ಅನ್ನು ಹೊಂದಿದೆ, ಇದು ದೇಶೀಯ ಕಾನೂನು ಜಾರಿ ಪಡೆಗಳು ಮತ್ತು ಅಂತರರಾಷ್ಟ್ರೀಯ ಪೊಲೀಸ್( international police)ಸಮುದಾಯದ ನಡುವಿನ ಸಹಯೋಗಕ್ಕಾಗಿ ರಾಷ್ಟ್ರೀಯ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.

ಇಂಟರ್‌ಪೋಲ್‌ನ ಅಧಿಕೃತ ಸಂಪರ್ಕ ಬಿಂದು NCB ಆಗಿದೆ. ಇದು ಬೇಟೆ, ವನ್ಯಜೀವಿ( wild animals smagling) ಕಳ್ಳಸಾಗಣೆ, ನಕಲಿ ಔಷಧಗಳು ಮತ್ತು ನಕಲಿ ವೈದ್ಯಕೀಯ ರಾಕೆಟ್‌ಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಸಂಘಟಿತ ಅಪರಾಧಗಳನ್ನು ಎದುರಿಸಲು ಭಾರತವು ಇಂಟರ್‌ಪೋಲ್‌ನೊಂದಿಗೆ ಕೆಲಸ ಮಾಡುತ್ತಿದೆ.

ಇಂಟರ್ಪೋಲ್ ನಿಂದ ಹೊರಡಿಸಲಾಗುವ ಪ್ರಮುಖ 8 ನೋಟಿಸ್ ಗಳು :

1. ಎಲ್ಲೋ ಕಾರ್ನರ್ ನೋಟಿಸ್ : ಕಾಣೆಯಾದ ವ್ಯಕ್ತಿಗಳ ಸ್ಥಳದಲ್ಲಿ ಸಹಾಯ ಮಾಡಲು ಅಥವಾ ತಮ್ಮನ್ನು ಗುರುತಿಸಲು ಸಾಧ್ಯವಾಗದವರನ್ನು ಗುರುತಿಸಲು ಹಳದಿ ನೋಟೀಸ್ ನೀಡಲಾಗುತ್ತದೆ. ಪೋಷಕರ ಅಪಹರಣಗಳು, ಕ್ರಿಮಿನಲ್(criminal)ಅಪಹರಣಗಳು (ಅಪಹರಣಗಳು) ಅಥವಾ ವಿವರಿಸಲಾಗದ ನಾಪತ್ತೆಗಳ ವ್ಯಕ್ತಿಗಳ ಪತ್ತೆಗೆ ಇದನ್ನು ಹೊರಡಿಸಲಾಗುತ್ತದೆ.

 

2. ಬ್ಲೂ  ಕಾರ್ನರ್ ನೋಟಿಸ್ : ಅಪರಾಧಕ್ಕೆ ಸಂಬಂಧಿಸಿದಂತೆ ವ್ಯಕ್ತಿಯ ಗುರುತು, ಇರುವಿಕೆ ಅಥವಾ ಚಟುವಟಿಕೆಗಳ ಕುರಿತು ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲು ಬ್ಲೂ ನೋಟಿಸ್ ನೀಡಲಾಗುತ್ತದೆ. ಇದು ವ್ಯಕ್ತಿಯ ಹಸ್ತಾಂತರ ಅಥವಾ ಬಂಧನವನ್ನು ಖಚಿತಪಡಿಸುವುದಿಲ್ಲ.

3. ಬ್ಲಾಕ್ ಕಾರ್ನರ್ ನೋಟಿಸ್ : ಕಪ್ಪು ನೋಟೀಸ್ ಎನ್ನುವುದು ಸದಸ್ಯ ರಾಷ್ಟ್ರಗಳಲ್ಲಿ ಕಂಡುಬರುವ ಗುರುತಿಸಲಾಗದ ಅವಶೇಷಗಳ ಮಾಹಿತಿಗಾಗಿ ಈ ನೋಟಿಸ್ ಜಾರಿಗೊಳಿಸಲಾಗುತ್ತದೆ.

4. ಗ್ರೀನ್  ಕಾರ್ನರ್ ನೋಟಿಸ್ : ಕ್ರಿಮಿನಲ್‌ ಅಪರಾಧಗಳನ್ನು ಮಾಡಿದ ಮತ್ತು ಇತರ ದೇಶಗಳಲ್ಲಿ ಇದೇ ರೀತಿಯ ಅಪರಾಧಗಳನ್ನು ಮಾಡುವ ಸಾಧ್ಯತೆಯಿರುವ ವ್ಯಕ್ತಿಗಳ ಬಗ್ಗೆ ಎಚ್ಚರಿಕೆಗಳು ಮತ್ತು ಗುಪ್ತಚರವನ್ನು ತಿಳಿಸಲು ಹಸಿರು ಸೂಚನೆಯನ್ನು ನೀಡಲಾಗುತ್ತದೆ.

5. ಆರೆಂಜ್ ಕಾರ್ನರ್ ನೋಟಿಸ್ : ಸಾರ್ವಜನಿಕ ಸುರಕ್ಷತೆಗೆ ಮಹತ್ವದ ಮತ್ತು ತುರ್ತು ಅಪಾಯವನ್ನುಂಟುಮಾಡುವ ಈವೆಂಟ್, ವ್ಯಕ್ತಿ, ಐಟಂ ಅಥವಾ ಪ್ರಕ್ರಿಯೆಯ ಬಗ್ಗೆ ಎಚ್ಚರಿಕೆ ನೀಡಲು ಕಿತ್ತಳೆ ನೋಟೀಸ್ ನೀಡಲಾಗುತ್ತದೆ.

6. ಪರ್ಪಲ್ ಕಾರ್ನರ್ ನೋಟಿಸ್ : ಪರ್ಪಲ್ ನೋಟೀಸ್ ಎನ್ನುವುದು ಅಪರಾಧಿಗಳ ಕಾರ್ಯಾಚರಣೆಯ ವಿಧಾನಗಳು, ವಸ್ತುಗಳು, ಗ್ಯಾಜೆಟ್‌ಗಳು ಮತ್ತು ಮರೆಮಾಚುವ ತಂತ್ರಗಳ ಬಗ್ಗೆ ಮಾಹಿತಿಗಾಗಿ ವಿನಂತಿಯಾಗಿದೆ.

7. ರೆಡ್ ಕಾರ್ನರ್ ನೋಟಿಸ್ : ರೆಡ್ ನೋಟಿಸ್( red notice)ಎಂದರೆ ಹಸ್ತಾಂತರಕ್ಕಾಗಿ ಕಾಯುತ್ತಿರುವ ವ್ಯಕ್ತಿಯನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ಕೋರಿಕೆಯಾಗಿದೆ. ಸದಸ್ಯ ರಾಷ್ಟ್ರ ಅಥವಾ ಅಂತರಾಷ್ಟ್ರೀಯ ನ್ಯಾಯಮಂಡಳಿಯ ಕೋರಿಕೆಯ ಮೇರೆಗೆ ಮಾನ್ಯ ರಾಷ್ಟ್ರೀಯ ಬಂಧನ ವಾರಂಟ್‌ನ ಆಧಾರದ ಮೇಲೆ ಪ್ರಧಾನ ಕಾರ್ಯದರ್ಶಿಯಿಂದ ಇದನ್ನು ನೀಡಲಾಗುತ್ತದೆ.

8. ಯುನೈಟೆಡ್ ನೇಷನ್ಸ್ ಸೆಕ್ಯುರಿಟಿ ಕೌನ್ಸಿಲ್ ಸ್ಪೆಷಲ್ ನೋಟಿಸ್ : ಇಂಟರ್‌ಪೋಲ್-ಯುನೈಟೆಡ್ ನೇಷನ್ಸ್ ( United Nations security council) ಸೆಕ್ಯುರಿಟಿ ಕೌನ್ಸಿಲ್ ವಿಶೇಷ ಸೂಚನೆಯನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಬಂಧಗಳಿಗೆ ಒಳಪಟ್ಟಿರುವ ಜನರು ಮತ್ತು ಕಂಪನಿಗಳಿಗೆ ನೀಡಲಾಗುತ್ತದೆ. ನಿಯೋಜಿತ ವ್ಯಕ್ತಿಗಳು ಮತ್ತು ಘಟಕಗಳು ಆಸ್ತಿ ಫ್ರೀಜ್‌ಗಳು, ಶಸ್ತ್ರಾಸ್ತ್ರಗಳ ನಿರ್ಬಂಧಗಳು ಮತ್ತು ಪ್ರಯಾಣ ನಿಷೇಧಗಳಂತಹ ನಿರ್ಬಂಧಗಳಿಗೆ ಒಳಪಟ್ಟಿರುತ್ತವೆ.

ಭಾರತದ ಈ ಹಿಂದಿನ ಪ್ರಕರಣಗಳಲ್ಲಿ ನೋಟಿಸ್ ಗಳ ಜಾರಿ :

ಬಹುಕೋಟಿ ಡಾಲರ್ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ವಂಚನೆಗೆ ನಂಬಂಧಿಸಿದಂತೆ ಪರಾರಿಯಾದ ವಜ್ರದ ವ್ಯಾಪಾರಿ ನೀರವ್ ಮೋದಿ ಅವರ ಸಹೋದರ ನೆಹಾಲ್ ವಿರುದ್ಧ ಇಂಟರ್‌ಫೋಲ್ 2019 ರಲ್ಲಿ ರೆಡ್ ಕಾರ್ನರ್ ನೋಟಿಸ್ (ಆರ್‌ಸಿಎನ್) ಹೊರಡಿಸಿದೆ. •

ಅಂಟಿಗುವಾ ಮತ್ತು ಬಾರ್ಬುಡಾದಿಂದ ಪರಾರಿಯಾದ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಲಿ ಅವರನ್ನು 2021 ರಲ್ಲಿ ಇಂಟರ್ಪೊಲ್ ಎಲ್ಲೋ ಕಾರ್ನರ್ ನೋಟಿಸ್ ಜಾರಿ ಮಾಡಿದ ಬಳಿಕ ಡೊಮೇನಿಕಾದಲ್ಲಿ ಆತನ ಬಂಧಿಸಲಾಯಿತು.

Leave A Reply

Your email address will not be published.