Interesting Facts : ಸ್ಟೂಲ್ ಮಧ್ಯೆ ರಂಧ್ರ ಯಾಕೆ ಇದೆ, ಗೊತ್ತೇ? ಇಂಟೆರೆಸ್ಟಿಂಗ್ ಕಾರಣ ಇಲ್ಲಿದೆ!

Interesting Facts about stool Do you know why there is a hole in the middle of the stool

Interesting Facts about stool: ಸಾಮಾನ್ಯವಾಗಿ ಎಲ್ಲರ ಮನೆಲೂ ಸ್ಟೂಲ್, ಖುರ್ಚಿ ಇವೆಲ್ಲಾ ಇದ್ದೇ ಇರುತ್ತದೆ. ಈ ಹಿಂದೆ ಸ್ಟೂಲ್ ಹೆಚ್ಚಾಗಿ ಬಳಸುತ್ತಿದ್ದರು. ಇತ್ತೀಚೆಗೆ ಸೋಫಾ, ಖುರ್ಚಿಗಳೆಲ್ಲಾ ಬಂದಿರೋದರಿಂದ ಸ್ಟೂಲ್ ನ ಅಗತ್ಯ ಕಮ್ಮಿಯಾಗಿದೆ. ಸಣ್ಣ ಮಕ್ಕಳಿಗೆಲ್ಲಾ ಅಭ್ಯಾಸವೋ? ಕುತೂಹಲವೋ? ಗೊತ್ತಿಲ್ಲ, ಅವರು ಹೆಚ್ಚಾಗಿ ಪ್ರಶ್ನೆಗಳನ್ನ ಕೇಳುತ್ತಲೇ ಇರುತ್ತಾರೆ. ನಿಮಗೂ ಈ ಪ್ರಶ್ನೆ ಬಂದಿರಬಹುದು ಯಾವುದಂದ್ರೆ, ಸ್ಟೂಲ್ ಮಧ್ಯೆ ರಂಧ್ರ( Interesting Facts about stool) ಯಾಕೆ ಇದೆ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಇದರ ಬಗ್ಗೆ ನಿಮಗೆ ಗೊತ್ತಿಲ್ಲದ ಇಂಟೆರೆಸ್ಟಿಂಗ್ ಕಾರಣ ಇಲ್ಲಿದೆ.

ಈ ಬಣ್ಣ ಬಣ್ಣದ ಪ್ಲಾಸ್ಟಿಕ್ ಸ್ಟೂಲ್ ನಿರ್ಮಾಣ ಮಾಡುವಾಗ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಸ್ಟೂಲ್ ತಯಾರಿಸುವ ಕಂಪನಿ, ಸ್ಟೂಲ್ ಯಾವುದೇ ಆಕಾರದಲ್ಲಿ ಇದ್ದರೂ ಅದರ ಮಧ್ಯೆ ಒಂದು ರಂಧ್ರವನ್ನು ಇಡಬೇಕು.

ಸ್ಟೂಲ್ ಮಧ್ಯೆ ರಂಧ್ರ ಯಾಕೆ ಮಾಡಲಾಗುತ್ತದೆ ಎಂದರೆ, ಒತ್ತಡ ಮತ್ತು ನಿರ್ವಾತವನ್ನು ಕಡಿಮೆ ಮಾಡುವ ಸಲುವಾಗಿ ಸ್ಟೂಲ್ ಮಧ್ಯೆ ರಂಧ್ರವನ್ನು ಮಾಡಲಾಗುತ್ತದೆಯಂತೆ. ಇನ್ನೂ, ನಾವು ಪ್ಲಾಸ್ಟಿಕ್ ಸ್ಟೂಲನ್ನು ಒಂದರ ಮೇಲೆ ಒಂದು ಹೀಗೆ ಇಡುತ್ತೇವೆ. ನಂತರ ಈ ಸ್ಟೂಲನ್ನು ಬಳಸಬೇಕಾದರೆ ಅದನ್ನು ಜೋಡಣೆಯಿಂದ ತೆಗೆಯಬೇಕು, ಒಂದು ವೇಳೆ ಸ್ಟೂಲ್ ಮಧ್ಯೆ ರಂಧ್ರ ಇಲ್ಲ ಅಂದ್ರೆ ಅದು ಒಂದಕ್ಕೊಂದು ಸೇರಿಕೊಂಡಿರುತ್ತದೆ. ಆಗ ಒಂದು ಸ್ಟೂಲನ್ನು ಇನ್ನೊಂದು ಸ್ಟೂಲ್ ನಿಂದ ಬೇರ್ಪಡಿಸಲು ತುಂಬಾನೇ ಕಷ್ಟ ಪಡಬೇಕಾಗುತ್ತದೆ. ಹಾಗಾಗಿ ಈ ರಂಧ್ರ ಎರಡು ಸ್ಟೂಲ್ ಮಧ್ಯೆ ಅಂತರವನ್ನು ಇರಿಸುತ್ತದೆ ಮತ್ತು ಸುಲಭವಾಗಿ, ಬೇಗನೆ ತೆಗೆಯಲು ಸಹಕಾರಿಯಾಗುತ್ತದೆ.

ಇದಲ್ಲದೆ ಸ್ಟೂಲ್ ಮಧ್ಯೆ ರಂಧ್ರವಿರಲು ಇನ್ನೊಂದು ಕಾರಣವಿದೆ. ಅದೇನೆಂದರೆ, ವೈಜ್ಞಾನಿಕವಾಗಿ ಹೇಳೋದಾದ್ರೆ, ಸುರಕ್ಷತೆಯ ಕಾರಣದಿಂದ ಸ್ಟೂಲ್ ನಲ್ಲಿ ರಂಧ್ರಗಳನ್ನು ಮಾಡಲಾಗುತ್ತದೆ. ದೇಹದ ತೂಕ ಹೆಚ್ಚಿರುವ ವ್ಯಕ್ತಿ ಸ್ಟೂಲ್ ಮೇಲೆ ಕುಳಿತಾಗ ರಂಧ್ರಗಳು ಅವನ ದೇಹದ ತೂಕವನ್ನು ಸಮಾನವಾಗಿ ವಿತರಿಸುತ್ತವೆ. ಇದರಿಂದ ಸ್ಟೂಲ್ ಒಡೆಯುವುದಿಲ್ಲ ಹಾಗೂ ವ್ಯಕ್ತಿ ಕೂಡ ಸುರಕ್ಷಿತವಾಗಿರುತ್ತಾನೆ.

ಮದ್ವೆ ಆಗಲು ನಾನೇನು ಗರ್ಭಿಣಿ ಆಗಿದ್ದೀನಾ ? – ನಾಯಕಿ ನಟಿಯ ಹೇಳಿಕೆಗೆ ಫಿಲ್ಮ್ ಇಂಡಸ್ಟ್ರಿ ಶಾಕ್ !

Leave A Reply

Your email address will not be published.