Interesting Facts: ಡ್ರೆಸ್ ಗೆ ಬಟನ್ ಕಂಡು ಹಿಡಿದಿದ್ದು ಯಾರು ಗೊತ್ತಾ?

Interesting facts who invited dress button

Interesting Facts : ನಮ್ಮ ಸುತ್ತಮುತ್ತಲೂ ನಡೆಯುವ ಅದೆಷ್ಟೋ ವಿಚಾರಗಳ ಬಗ್ಗೆ ನಾವು ಹೆಚ್ಚೇನು ಗಮನ ಕೊಡಲು ಮುಂದಾಗುವುದಿಲ್ಲ. ಆದರೆ ನಮ್ಮ ಅರಿವಿಗೆ ಬರದ ಅದೆಷ್ಟೋ ವಿಷಯಗಳು ಅನೇಕ ರೋಚಕ ಇತಿಹಾಸವನ್ನೂ ಒಳಗೊಂಡಿರುತ್ತದೆ. ಅದೇ ರೀತಿ ನಾವೆಲ್ಲ ಬಟ್ಟೆಗಳಲ್ಲಿ, ಶರ್ಟ್ಗಳಲ್ಲಿ ಬಳಕೆ ಮಾಡುವ ಬಟನ್ (Button) ಹುಟ್ಟಿದ್ದು ಹೇಗೆ?? ಇದನ್ನು ಕಂಡು ಹಿಡಿದವರರಾರು ಎಂಬ ಪ್ರಶ್ನೆ ಹಲವರಲ್ಲಿ ಮೂಡಿರಬಹುದು. ಮತ್ತೆ ಕೆಲವರು ಇದಕ್ಕೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಕೂಡ ಮಾಡಿರಬಹುದು. ಹಾಗಿದ್ರೆ, ಈ ಬಟನ್ ನ ಇತಿಹಾಸದ (Button History) ಬಗ್ಗೆ ಒಂದಿಷ್ಟು ಮಾಹಿತಿ ನಿಮಗಾಗಿ.( Interesting Facts)

ಇಂದು ನಾವು ದಿನಂಪ್ರತಿ ನಾನಾ ಬಗೆಯ ಆವಿಷ್ಕಾರಕ್ಕೆ ತೆರೆದುಕೊಂಡಿದ್ದೇವೆ. ವಿಭಿನ್ನ ಪ್ರಯೋಗಗಳ ಫಲವಾಗಿ ಇಂದು ನಮ್ಮ ಅವಶ್ಯಕತೆಯ ಅನುಸಾರ ಅನೇಕ ವಸ್ತುಗಳು ನಮ್ಮ ಕೈ ಸೇರಿದೆ. ಇವುಗಳಲ್ಲಿ ಬಟನ್ ಕೂಡ ಒಂದು ಎಂದು ಕೇಳಿದರೆ ಅಚ್ಚರಿಯಾಗಬಹುದು. ಇಂದು ನಾವು ಬಟನ್ ಅನ್ನು ಕೇವಲ ಶರ್ಟ್ ಗಳಿಗೆ ಮಾತ್ರವಲ್ಲದೇ ಫ್ಯಾಶನ್ (Fashon) ನೆಪದಲ್ಲಿ ನಾನಾ ಬಗೆಯಲ್ಲಿ ಬಳಕೆ ಮಾಡೋದು ಗೊತ್ತೇ ಇದೆ. ಭಾರತ (India) ದಲ್ಲಿ ಬರೀ ಶರ್ಟ್ (Shirt) ಗೆ ಮಾತ್ರವಲ್ಲ ಬ್ಯಾಗ್ ಸೇರಿ ಅನೇಕ ವಸ್ತುಗಳಿಗೆ ಬಟನ್ (Button)ಫ್ಯಾಷನ್ ಬ್ಯಾಗ್ ಗಳಲ್ಲಿ, ಡ್ರೆಸ್ ಗಳಲ್ಲಿ ಫ್ಯಾಷನ್ ಟ್ರೆಂಡ್ಗೋಸ್ಕರ ಬಳಕೆ ಮಾಡಲಾಗುತ್ತದೆ. ಆದರೆ, ಈ ಬಟನ್ ಅನ್ನು ಮೊದಲು ಭಾರತದಲ್ಲೇ ಅನ್ವೇಷಣೆ ಮಾಡಲಾಗಿತ್ತಂತೆ. ಇದಕ್ಕೆ ಪೂರಕವಾಗಿ ಯಾವುದೇ ಆಧಾರವಿಲ್ಲ ಎಂದು ಕೂಡ ಹೇಳಲಾಗುತ್ತದೆ.

ಸುಮಾರು ಕ್ರಿಸ್ತಪೂರ್ವ 2000ನೇ ಇಸವಿಯಲ್ಲಿ ಬಟನ್ ಅನ್ನು ಅನ್ವೇಷಣೆ ಮಾಡಲಾಗಿದೆ ಎಂದು ನಂಬಲಾಗುತ್ತದೆ. ಮೊದಲು ಗುಂಡಿಗಳನ್ನು ಅಲಂಕಾರಿಕ ವಸ್ತುಗಳ ರೂಪದಲ್ಲಿ ಬಳಸುತ್ತಿದ್ದರಂತೆ. ಬಟ್ಟೆಯನ್ನು ಹಿಡಿದಿಡಲು ಬಳಕೆ ಮಾಡುವ ಬದಲಿಗೆ ಬಟ್ಟೆಯ ಮೇಲೆ ಡಿಸೈನ್ ಮಾಡಲು ಉಪಯೋಗಿಸ ಲಾಗುತ್ತಿತ್ತು.ಆಗ ಬಟನ್ ನಲ್ಲಿ ಸಣ್ಣ ಸಣ್ಣ ರಂಧ್ರಗಳಿದ್ದು,ಈ ರಂಧ್ರಗಳೊಳಗೆ ದಾರವನ್ನು ಹಾಕಿ ಅದನ್ನು ಬಟ್ಟೆಗೆ ಹೆಣೆಯುವ ಕ್ರಮ ರೂಢಿಯಲ್ಲಿತ್ತು. ಇದನ್ನು ಹೊಲಿಗೆಯ ವಿಭಿನ್ನ ವಿಧಾನ ಎಂದು ಆಗಿನವರು ಅಂದುಕೊಂಡಿದ್ದರು. ಅದೇ ರೀತಿ ಜ್ಯಾಮಿತಿಯ ಆಕಾರದಲ್ಲಿ ಸೆಲ್ಖಾಡಿ ಎಂಬ ಬಂಡೆಯ ನೆರವಿನೊಂದಿಗೆ ಸಿದ್ದ ಪಡಿಸಲಾಗುತ್ತಿತ್ತು. ಆ ಸಂದಭದಲ್ಲಿ ಮಾರುಕಟ್ಟೆಯಲ್ಲಿ ಗುಂಡಿಗಳು ದೊರೆಯುತ್ತಿರಲಿಲ್ಲವಂತೆ. ಒಂದು ವೇಳೆ ಗುಂಡಿ ಅಥವಾ ಬಟನ್ ಬೇಕು ಎಂದಾದರೆ ಅವರೇ ಗುಂಡಿಗಳನ್ನು ಸಿದ್ದಪಡಿಸಿಕೊಳ್ಳಬೇಕಾಗಿತ್ತು. ಇದರ ನಡುವೆ, ಹರಪ್ಪಾ ಉತ್ಖಲನದ ಸಂದರ್ಭದಲ್ಲಿ ಬಟನ್ ನಂತಹ ವಸ್ತು ಮೊದಲ ಬಾರಿ ಲಭ್ಯವಾಗಿತ್ತು ಎನ್ನಲಾಗಿದೆ. ಇದರಿಂದಾಗಿಯೇ ಭಾರತದಲ್ಲಿ ಬಟನ್ ಆವಿಷ್ಕಾರ ಮಾಡಲಾಯಿತಂತೆ.

ರೋಮನ್ (Roman) ಸಾಮ್ರಾಜ್ಯದ ಮಂದಿ ಕೂಡ ಆ ಕಾಲದಲ್ಲಿ ಬಟನ್ ಗಳನ್ನ ಬಳಕೆ ಮಾಡುತ್ತಿದ್ದರಂತೆ. ಇದನ್ನು ಬಳಕೆ ಮಾಡಲು ಶುರು ಮಾಡಿದ ಸಂದರ್ಭ ಆರಂಭಿಕ ದಿನಗಳಲ್ಲಿ ಗುಂಡಿಗಳನ್ನು ಮರ, ಪ್ರಾಣಿಗಳ ಕೊಂಬು ಮತ್ತು ಲೋಹದಿಂದ ಸಿದ್ದ ಪಡಿಸಲಾಗುತ್ತಿತ್ತು. ರೋಮನ್ ಜನರು ಬಟ್ಟೆಗಳನ್ನು ಜೋಡಿಸಲು ಗುಂಡಿಗಳನ್ನ ಬಳಸುತ್ತಿದ್ದರು. ಮೊದ ಮೊದಲು ಆರಂಭಿಕ ದಿನಗಳಲ್ಲಿ ಅಲಂಕಾರಿಕ ವಸ್ತುವಾಗಿ ಗುಂಡಿಯನ್ನು ಬಳಕೆ ಮಾಡುತ್ತಿದ್ದರು. ಇದನ್ನು ರೋಮನ್ ಜನರು ಪಿನ್ ನೆರವಿನಿಂದ ಬಟನ್ ಗಳನ್ನ ಬಟ್ಟೆಗೆ ಜೋಡಿಸುತ್ತಿದ್ದರಂತೆ. ಅಲಂಕಾರಿಕ ಸಾಧನವಾಗಿ ಬಳಸುತ್ತಿದ್ದ ಬಟನ್ ನಲ್ಲಿ ಆವಿಷ್ಕಾರವಾಗಿ ಒಂದು ಹಂತಕ್ಕೆ ಬರಲು ಸುದೀರ್ಘ ಸಮಯ ಹಿಡಿದಿದೆ ಎನ್ನಲಾಗಿದೆ.

ಜರ್ಮನಿಯಲ್ಲಿ (Germany)13ನೇ ಶತಮಾನದ ವೇಳೆಗೆ ಆಧುನಿಕ ಬಟನ್ ಅನ್ನು ಅನ್ವೇಷಣೆ ಮಾಡಲಾಗಿ, ಜರ್ಮನಿಯಲ್ಲಿ ತಯಾರಿಸಿದ ಈ ಬಟನ್ ಥ್ರೆಡ್ಡಿಂಗ್ ರಂಧ್ರವನ್ನು ಒಳಗೊಂಡ ಹಿನ್ನೆಲೆ ಸಲೀಸಾಗಿ ದಾರವನ್ನು ಅದರೊಳಗೆ ಹಾಕಲು ಅವಕಾಶವಿತ್ತು.ಇದರ ನಡುವೆ ಸುಮಾರು ಹದಿಮೂರನೆ ಶತಮಾನದ ಅಂತ್ಯದ ವೇಳೆಗೆ ಮತ್ತು ಹದಿನಾಲ್ಕನೆ ಶತಮಾನದ ಆರಂಭದ ಸಮಯದಲ್ಲಿ ಬಟನ್ ಗಳಿಗೆ ಭಾರೀ ಡಿಮ್ಯಾಂಡ್ ಬಂತಂತೆ. ಈ ಸಂದರ್ಭ ಬಟನ್ ಅನ್ನೂ ಅಲಂಕಾರಿಕ ಸಾಧನದ ಜೊತೆಗೆ ಬಟನ್ ಜೋಡಣೆಗೆ ಕೂಡ ಬಳಕೆ ಮಾಡಲು ಪ್ರಾರಂಭಿಸಲಾಯಿತು ಎನ್ನಲಾಗಿದೆ.

ವಿಶೇಷವಾಗಿ ಯುರೋಪ್ (Europe) ಅರಸರ ಗಮನ ಸೆಳೆಯುವಲ್ಲಿ ಬಟನ್ ಯಶಸ್ವಿಯಾಗಿತ್ತು. ಬೇಡಿಕೆ ಹೆಚ್ಚುತ್ತಾ ಹೋದಂತೆ ಪ್ರಯೋಗಗಳು ಕೂಡ ಹೆಚ್ಚುತ್ತಾ ಹೋಗೋದು ಕಾಮನ್. ಅದೇ ರೀತಿ, ಬಟನ್ ಮಹಿಳೆಯರ ವಸ್ತ್ರಗಳಲ್ಲಿ ಸ್ಥಾನ ಭದ್ರ ಮಾಡಿಕೊಂಡರೆ, ಪುರುಷರ ಬಟ್ಟೆಗಳ ತೋಳಿನಲ್ಲಿ ಗುಂಡಿ ಬಳಕೆಯಾಯಿತು.ಇದಕ್ಕೆ ಹೊಸ ರೂಪ ದೊರೆತಿದ್ದು ಫ್ರಾನ್ಸ್ ನಲ್ಲಿ(France)ಎನ್ನಲಾಗಿದ್ದು ಆಗಿನ ಕಾಲದಲ್ಲಿ ಬಡವರ ಬಟ್ಟೆಗಳಲ್ಲಿ ಒಂದೆರಡು ಮಾತ್ರ ಸ್ಥಾನ ಪಡೆದಿದ್ದರೆ, ಶ್ರೀಮಂತರು ತೊಡುತ್ತಿದ್ದ ಬಟ್ಟೆಗಳಲ್ಲಿ ಹೆಚ್ಚಿನ ಗುಂಡಿಗಳ ಬಳಕೆ ಮಾಡಲಾಗುತ್ತಿತ್ತಂತೆ.

ಇದನ್ನೂ ಓದಿ: Interesting Facts : ಸ್ಟೂಲ್ ಮಧ್ಯೆ ರಂಧ್ರ ಯಾಕೆ ಇದೆ, ಗೊತ್ತೇ? ಇಂಟೆರೆಸ್ಟಿಂಗ್ ಕಾರಣ ಇಲ್ಲಿದೆ!

Leave A Reply

Your email address will not be published.