Interesting Facts: ನಿಮಗೆ ಗೊತ್ತಿದೆಯೇ? ನಾಯಿಗಳು ಯಾಕೆ ಕಾರಿನ ಚಕ್ರದ ಮೇಲೆ ಮೂತ್ರ ಮಾಡುತ್ತದೆ ಎಂದು? ಇಲ್ಲಿದೆ ಉತ್ತರ

Interesting facts why dogs prefer to pee on car tires

Interesting Facts: ನಾವು ಜೀವಿಸುವ ಪ್ರಕೃತಿಯ ಭೂಗರ್ಭದಲ್ಲಿ ಅದೆಷ್ಟು ರೋಚಕ ವಿಚಾರಗಳು ಅಡಗಿರುತ್ತವೆ. ಕೆಲವೊಂದು ವಿಸ್ಮಯಗಳು ನಮ್ಮನ್ನು ಮೂಕ ವಿಸ್ಮಿತಗೊಳಿಸುತ್ತವೆ. ಮನುಷ್ಯ ಸಂಘ ಜೀವಿ. ಪ್ರಾಣಿ ಪಕ್ಷಿಗಳನ್ನು ಪ್ರೀತಿಸುವ ಅದೆಷ್ಟೋ ಜನರಿಗೆ ಸಾಕು ಪ್ರಾಣಿಗಳು ಅವರ ಬದುಕಿನ ಅವಿಭಾಜ್ಯ ಅಂಗವಾಗಿರುವುದಂತು ಸುಳ್ಳಲ್ಲ. ದಿನನಿತ್ಯದ ಜೀವನದಲ್ಲಿ ಸಾಕು ಪ್ರಾಣಿಗಳು ಒಬ್ಬ ಒಳ್ಳೆಯ ಸ್ನೇಹಿತನ ರೀತಿಯಲ್ಲಿ ಅವರ ಜೀವನದ ಗುಣಮಟ್ಟವನ್ನೇ ಬದಲಿಸುವ ಸಾಮರ್ಥ್ಯ ಹೊಂದಿರುತ್ತವೆ.

ಮಕ್ಕಳಿಲ್ಲದ ಅದೆಷ್ಟೋ ಜನರು ಸಾಕು ಪ್ರಾಣಿಗಳನ್ನು ಮಕ್ಕಳಿಗಿಂತ ಹೆಚ್ಚಾಗಿ ಪ್ರೀತಿಸುತ್ತಾ ತಮಗೆ ಮಕ್ಕಳು ಇಲ್ಲವೆಂಬ ನೋವನ್ನು ಮರೆತು ಬಹಳ ಸಂತೋಷದಿಂದ ಜೀವನ ನಡೆಸುತ್ತಿರುವ ನಿದರ್ಶನಗಳಿವೆ. ಸಾಮಾನ್ಯವಾಗಿ ಪ್ರಾಮಾಣಿಕತೆಗೆ ಮತ್ತೊಂದು ಹೆಸರೇ ಶ್ವಾನ (Dog)ಆದರೆ, ಇನ್ನೊಂದೆಡೆ ಪ್ರಾಣಿಗಳೆಂದರೆ ಸಾಕು ಮೂಕ ಜೀವಿಗಳೆಂದು ಹಿಂಸೆ ನೀಡುವವರು ನಮ್ಮ ನಡುವೆ ಇದ್ದಾರೆ. ಆದರೆ, ನೀವೆಲ್ಲ ನಿಮ್ಮ ಸಾಕು ಪ್ರಾಣಿ ನಾಯಿಯ ಚಲನವಲನಗಳನ್ನ ಗಮನಿಸಿದ್ದರೆ, ನಾಯಿಗಳು ಕಾರಿನ ಚಕ್ರದ ಮೇಲೆ  ಮೂತ್ರ ವಿಸರ್ಜಿಸುವುದನ್ನು ನೋಡಿರುತ್ತೀರಿ!! ಅಷ್ಟೆ ಏಕೆ, ಅದಕ್ಕೆ ಸರಿಯಾಗಿ ಸಹಸ್ರ ನಾಮರ್ಚನೆ ಕೂಡ ಮಾಡಿರುತ್ತೇವೆ. ಆದರೆ, ಅವು ಹೀಗೆ ನಡೆದುಕೊಳ್ಳಲು ಕಾರಣವೇನು ಎಂದು ಎಂದಾದರೂ ಯೋಚಿಸಿದ್ದೇವೆಯೇ? ಇಲ್ಲ ಎಂದಾದರೆ ಈ ಕುರಿತ ಕುತೂಹಲಕಾರಿ(Interesting Facts) ಮಾಹಿತಿ ಇಲ್ಲಿದೆ ನೋಡಿ!!

ದಿನನಿತ್ಯ ಕಾರಿನ ಚಕ್ರ(why dogs prefer to pee on car tyres) , ಸ್ಟ್ರೀಟ್ ಲೈಟ್ , ಟೈರ್ ಮೇಲೆ ಮೂತ್ರ ವಿಸರ್ಜನೆ ಮಾಡೋದು ನಾವು ನೋಡುತ್ತಿರುತ್ತೇವೆ. ಅದಕ್ಕೆ ಕಾರಣ ಏನು ಎಂದು ತಿಳಿದರೆ ನೀವು ಶಾಕ್ ಆಗೋದು ಗ್ಯಾರಂಟಿ!! ಒಂದು ದಿನ ನಮಗೆ ಮತ್ತೊಬ್ಬರ ಜೊತೆಗೆ ಮಾತಾಡದೆ ಮೌನ ತಾಳುವುದು ಕಷ್ಟದ ಮಾತೇ ಸರಿ. ಆದರೆ, ಪ್ರಾಣಿಗಳು ಕೂಡ ಸಂವಹನ ನಡೆಸುತ್ತವೆ. ಆದರೆ, ಅದರ ಶೈಲಿ ಮಾತ್ರ ಭಿನ್ನ ಎಂದರೆ ನಿಮಗೆ ಅಚ್ಚರಿಯಾಗಬಹುದು.

ನಾಯಿಗಳು (Dogs)ನೆಲದ ಮೇಲೆ ಮೂತ್ರ ವಿಸರ್ಜನೆ ಮಾಡಿದರೆ ಸ್ವಲ್ಪ ಸಮಯದ ನಂತರ ವಾಸನೆ ಮಾಯವಾಗುತ್ತದೆ. ಆಗ ಒಬ್ಬರಿಗೊಬ್ಬರು ಸಂಪರ್ಕ ಪಡೆದುಕೊಳ್ಳಲು ಸಾಧ್ಯವಾಗದು. ಇದರ ಜೊತೆಗೆ ನಾಯಿಗಳು ಫ್ಲಾಟ್ಗಿಂತ ಎತ್ತರದ ಸ್ಥಳದಲ್ಲಿ ಮೂತ್ರ ವಿಸರ್ಜಿಸಲು ಇಚ್ಚಿಸುತ್ತವೆ. ಕಾರಿನ ಲೈಟ್ ಕಂಡರೆ ನಾಯಿ ಅದರ ಮೇಲೆ ಮೂತ್ರ ವಿಸರ್ಜಿಸುತ್ತದೆ.

ಇದಕ್ಕೆ ಕಾರಣ ಏನು ಎಂದು ತಿಳಿಯ ಹೊರಟರೆ, ನಾಯಿಗಳು ವಿದ್ಯುತ್ ಕಂಬಗಳು ಅಥವಾ ಕಾರಿನ ಚಕ್ರಗಳ ಮೇಲೆ ಮೂತ್ರ ವಿಸರ್ಜಿಸುವ ಮುಖಾಂತರ ತಮ್ಮ ಪ್ರದೇಶವನ್ನು ಪತ್ತೆ ಹಚ್ಚುತ್ತದೆ. ಮೂತ್ರದ ವಾಸನೆಯಿಂದ, ನಾಯಿಯ ಉಳಿದ ಸಹಚರರು ನಾಯಿ ಇದೆ ಪ್ರದೇಶದಲ್ಲಿದೆ ಎಂಬುದು ತಿಳಿಯುವ ಜೊತೆಗೆ ನಾಯಿ ಬೇರ್ಪಟ್ಟಿಲ್ಲ ಎಂಬುದು ತಿಳಿಯುತ್ತಂತೆ. ಈ ರೀತಿ ನಾಯಿಗಳು ತಮ್ಮ ಸಹಚರರೊಂದಿಗೆ ಸಂವಹನ (communication) ಮಾಡುತ್ತದೆ. ಅಷ್ಟೆ ಅಲ್ಲದೇ, ನಾಯಿಗಳು ಟೈರ್ ವಾಸನೆಯನ್ನು ಹೆಚ್ಚು ಮೆಚ್ಚಿಕೊಳ್ಳುತ್ತವೆ. ಅದಕ್ಕೆ ಪದೇ ಪದೇ ಕಾರಿನ ಟೈರ್ ಮೇಲೆ ಮೂತ್ರ ವಿಸರ್ಜಿಸುತ್ತವಂತೆ. ಮೂತ್ರದ ವಾಸನೆಯು ಟೈರ್ಗಳ ಮೇಲೆ ಇರುವುದರಿಂದ ಇತರ ಸಹಚರರಿಗೆ ಯಾರು ಎಲ್ಲಿದ್ದಾರೆ ಎಂಬುದನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: Interesting Facts: ವಾಷ್ ಬೇಸಿನ್ ಅಥವಾ ಟಾಯ್ಲೆಟ್ಟಿನ ನೀರನ್ನು ಡ್ರೈನ್ ಮಾಡಿದಾಗ ನೀರು ಯಾವ ದಿಕ್ಕಿಗೆ ತಿರುಗುತ್ತೆ ? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಮಾಹಿತಿ!

Leave A Reply

Your email address will not be published.