Udupi: ತನ್ನ ಸ್ವಂತ ಬಸ್‌ ಅಡಿ ಬಿದ್ದು ಮಾಲೀಕ ದಾರುಣ ಸಾವು

Share the Article

Udupi: ತನ್ನದೇ ಬಸ್‌ನ ಅಡಿಗೆ ಬಿದ್ದು ಮಾಲೀಕರೋರ್ವರು ಮೃತಪಟ್ಟ ಘಟನೆ ನಡೆದಿದೆ. ಈ ಘಟನೆ ಉಡುಪಿ ಜಿಲ್ಲೆಯ ಮಣಿಪಾಲ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇದನ್ನೂ ಓದಿ: Revenue Minister Krishna Byregowda: ಸರ್ಕಾರದ ಪ್ರಯೋಜನಗಳನ್ನು ಒದಗಿಸಲು ಭೂ ದಾಖಲೆಗಳೊಂದಿಗೆ ಆಧಾರ್ ಜೋಡಿಸಲಾಗುವುದು : ಕಂದಾಯ ಸಚಿವ ಕೃಷ್ಣ ಬೈರೇಗೌಡ

ದಯಾನಂದ ಶೆಟ್ಟಿ ಮೃತಪಟ್ಟ ವ್ಯಕ್ತಿ. ವರದಿ ಪ್ರಕಾರ, ದಯಾನಂದ ಶೆಟ್ಟಿ ಅವರ ಬಸ್‌ನ್ನು ರಿಪೇರಿಗಾಗಿ ಅತ್ರಾಡಿಯ ಗ್ಯಾರೇಜ್‌ಗೆ ಕೊಂಡೊಯ್ಯಲಾಗಿತ್ತು. ಹಾಗಾಗಿ ತಮ್ಮ ಬಸ್‌ನ ದುರಸ್ತಿ ಕೆಲಸ ನೋಡಲು ಸ್ವತಃ ದಯಾನಂದ ಅವರೇ ಗ್ಯಾರೇಜ್‌ಗೆ ಹೋಗಿದ್ದರು. ಅದರಂತೆ ಬಸ್‌ನ ಮುಂಭಾಗದಲ್ಲಿ ನಿಂತಿದ್ದ ವೇಳೆ ಗ್ಯಾರೇಜ್‌ನ ಮೆಕ್ಯಾನಿಕ್‌ ಅಜಾಗರೂಕತೆಯಿಂದ ಎಂಜಿನ್‌ ಸ್ಟಾರ್ಟ್‌ ಮಾಡಿದಾಗ ಬಸ್‌ ಮುಂದಕ್ಕೆ ಚಲಿಸಿದೆ.

ಇದನ್ನೂ ಓದಿ: JDS: ರಾಜ್ಯದ ಈ 3 ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧೆ ಫಿಕ್ಸ್

ಬಸ್‌ ಮುಂದಕ್ಕೆ ಚಲಿಸುತ್ತಿದ್ದಂತೆ ದಯಾನಂದ ಅವರು ಬಸ್‌ ಅಡಿಗೆ ಬಿದ್ದು ಚಕ್ರಕ್ಕೆ ಸಿಲುಕಿಕೊಂಡಿದ್ದಾರೆ. ಗಂಭೀರ ಗಾಯಗೊಂಡ ದಯಾನಂದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಈ ಘಟನೆ ಕುರಿತು ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply