JDS: ರಾಜ್ಯದ ಈ 3 ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧೆ ಫಿಕ್ಸ್

JDS: ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡು ಸ್ಪರ್ಧೆ ನಡೆಸಲಿವೆ. ಈಗಾಗಲೇ ಬಿಜೆಪಿಯು ರಾಜ್ಯದ 20 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಇದೀಗ JDS ಟಿಕೆಟ್ ಹಂಚಿಕೆ ವಿಚಾರವೂ ಫೈನಲ್ ಆಗಿದ್ದು ರಾಜ್ಯದ ಈ 3 ಕ್ಷೇತ್ರಗಳಿಂದ ಧಳಪತಿಗಳು ಸ್ಪರ್ಧಿಸುವುದು ಫಿಕ್ಸ್ ಆಗಿದೆ.

ಇದನ್ನೂ ಓದಿ: Bengaluru: ದೊಡ್ಡಬಳ್ಳಾಪುರದ ವಸತಿ ನಿಲಯದಲ್ಲಿ ಬಿ-ಟೆಕ್ ವಿದ್ಯಾರ್ಥಿ ಶವ ಪತ್ತೆ

ಹೌದು, ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ(H D Kumarswamy)ಅವರು ಲೋಕಸಭಾ ಚುನಾವಣೆಯಲ್ಲಿ(Parliament election)ಜೆಡಿಎಸ್ ಯಾವ ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದೆ ಎಂಬುದರ ಬಗ್ಗೆ ದೊಡ್ಡ ಅಪ್ಡೇಟ್ ನೀಡಿದ್ದು ಲೋಕಸಭಾ ಚುನಾವಣೆಗಾಗಿ (Lok Sabha Polls) ಬಿಜೆಪಿ ತಮ್ಮ ಪಕ್ಷಕ್ಕೆ ಯಾವ್ಯಾವ ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದೆ ಅನ್ನೋದನ್ನು ಬಹಿರಂಗಗೊಳಿಸಿದ್ದಾರೆ. ಅವರು ಹೇಳುವ ಪ್ರಕಾರ ಮಂಡ್ಯ (Mandya), ಕೋಲಾರ (Kolar) ಮತ್ತು ಹಾಸನ (Hassan) ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಬೆಂಬಲಿತ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ.

ಇದನ್ನೂ ಓದಿ: Parliament Election: ದೇಶದ ಮಹಿಳೆಯರಿಗೆ 5 ಹೊಸ ‘ಗ್ಯಾರಂಟಿ’ ಘೋಷಿಸಿದ ಕಾಂಗ್ರೆಸ್ !!

ಇಷ್ಟೇ ಅಲ್ಲದೆ ಜೆಡಿಎಸ್‌ಗೆ ಇನ್ನೂ ಎರಡು ಕ್ಷೇತ್ರ ಸಿಗುವ ಅವಕಾಶವಿತ್ತು ಎಂದು ಹೇಳಿದರು. ಆದರೆ, ಚುನಾವಣೆ ನಡೆಯುವ ರೀತಿ ನೋಡಿದರೆ ನಮ್ಮಿಂದ ಸೇವೆ ಪಡೆದವರು ಈಗ ಕೈ ಕೊಟ್ಟಿದ್ದಾರೆ ಎನ್ನುವ ಮೂಲಕ ಜೆಡಿಎಸ್ ನಲ್ಲಿ ಅಭ್ಯರ್ಥಿಗಳ ಕೊರತೆಯ ಸುಳಿವು ನೀಡಿದರು.

Leave A Reply

Your email address will not be published.