Parliament Election: ದೇಶದ ಮಹಿಳೆಯರಿಗೆ 5 ಹೊಸ ‘ಗ್ಯಾರಂಟಿ’ ಘೋಷಿಸಿದ ಕಾಂಗ್ರೆಸ್ !!

ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಲು ಕಾಂಗ್ರೆಸ್ ಪಕ್ಷ ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ‘ನಾರಿ ನ್ಯಾಯ’ ಗ್ಯಾರಂಟಿ (Nari Nyay) ಘೋಷಣೆ ಮಾಡಿದೆ.

ಇದನ್ನು ಓದಿ: Delhi: ಅಂಗಡಿಗಳಿಗೆ ಕಾರು ಡಿಕ್ಕಿ : ಓರ್ವ ಮಹಿಳೆ ಸಾವು, 6 ಜನರಿಗೆ ಗಂಭೀರ ಗಾಯ : ಚಾಲಕನ ಮೇಲೆ ಸ್ಥಳೀಯರ ಹಲ್ಲೆ

ಹೌದು, ಲೋಕಸಭೆ ಚುನಾವಣೆ ಹಿನ್ನೆಲೆ ಮಹಿಳೆಯರಿಗಾಗಿ ಕಾಂಗ್ರೆಸ್ ರಾಷ್ಟ್ರಮಟ್ಟದಲ್ಲಿ 5 ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ. ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಬುಧವಾರ ಪ್ರಣಾಳಿಕೆ ಬಿಡುಗಡೆಗೊಳಿಸಿ ನಾರಿ ನ್ಯಾಯ ಗ್ಯಾರಂಟಿಯನ್ನು ಘೋಷಿಸಿದರು.

ಇದನ್ನೂ ಓದಿ: Paytm: ಪೇಟಿಎಂ ಉದ್ಯೋಗಿಗಳಿಗೆ ಸಂಕಷ್ಟ : ಬಿಕ್ಕಟ್ಟಿನ ಮಧ್ಯೆ ಹಲವಾರು ಉದ್ಯೋಗಿಗಳ ಕಡಿತಕ್ಕೆ ಮುಂದಾದ ಪೇಟಿಎಂ

https://x.com/ANI/status/1767817499842576748?t=PjPQgezxRaBhz5M-I3vNzw&s=08

ಕಾಂಗ್ರೆಸ್ ಘೋಷಿಸಿದ 5 ಹೊಸ ಗ್ಯಾರೆಂಟಿಗಳು

1) ಮಹಾಲಕ್ಷ್ಮಿ ಯೋಜನೆ

2) ಆದಿ ಅಬಾದಿ ಪೂರಾ ಹಕ್

3) ಶಕ್ತಿ ಕಾ ಸಮ್ಮಾನ್

4) ಅಧಿಕಾರ ಮೈತ್ರಿ

5) ಸಾವಿತ್ರಿ ಬಾಯಿ ಪುಲೆ ಹಾಸ್ಟೆಲ್

1. ಮಹಾಲಕ್ಷ್ಮಿ ಗ್ಯಾರಂಟಿ: ದೇಶಾದ್ಯಂತ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳ ಮಹಿಳೆಯರಿಗೆ ಪ್ರತಿ ವರ್ಷ 1 ಲಕ್ಷ ರೂ. ಹಣಕಾಸಿನ ನೆರವು. ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಜಮೆ

2. ಅರ್ಧ ಜನಸಂಖ್ಯೆ, ಪೂರ್ಣ ಹಕ್ಕು: ಈ ಯೋಜನೆಯಡಿ ದೇಶಾದ್ಯಂತ ಎಲ್ಲಾ ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಮೀಸಲಾತಿ

3. ಶಕ್ತಿ ಕಾ ಸಮ್ಮಾನ್ – ಇದರ ಅಡಿಯಲ್ಲಿ ಅಂಗನವಾಡಿ, ಆಶಾ ಮತ್ತು ಮಧ್ಯಾಹ್ನದ ಬಿಸಿಯೂಟ ಕಾರ್ಮಿಕರ ಮಾಸಿಕ ಆದಾಯಕ್ಕೆ ಕೇಂದ್ರ ಸರ್ಕಾರದ ಕೊಡುಗೆಯನ್ನು ದ್ವಿಗುಣಗೊಳಿಸಲಾಗುವುದು.

4. ಅಧಿಕಾರ್ ಮೈತ್ರಿ – ಇದರ ಅಡಿಯಲ್ಲಿ ಮಹಿಳೆಯರಲ್ಲಿ ಅವರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅವರಿಗೆ ಸಹಾಯ ಮಾಡಲು ಪ್ರತಿ ಪಂಚಾಯತ್ ನಲ್ಲಿ ಪ್ಯಾರಾಲೀಗಲ್ ಅನ್ನು ನೇಮಿಸಲಾಗುವುದು.

5. ಸಾವಿತ್ರಿಬಾಯಿ ಫುಲೆ ಹಾಸ್ಟೆಲ್: ಭಾರತ ದೇಶದ ಪ್ರತಿಯೊಂದು ಜಿಲ್ಲಾ ಕೇಂದ್ರಗಳಲ್ಲೂ ಕನಿಷ್ಟ ಪಕ್ಷ ಒಂದಾದರು ಮಹಿಳಾ ಹಾಸ್ಟೆಲ್ ನಿರ್ಮಿಸುತ್ತೇವೆ ಎಂದು ಕಾಂಗ್ರೆಸ್ ಭರವಸೆ ನೀಡಿದೆ. ನಂತರದ ದಿನಗಳಲ್ಲಿ ಈ ಹಾಸ್ಟೆಲ್‌ಗಳ ಸಂಖ್ಯೆಯನ್ನು ದ್ವಿಗುಣ ಮಾಡುವ ಭರವಸೆಯನ್ನೂ ನೀಡಿದೆ.

ಲೋಕಸಭೆಯಲ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ 5 ಗ್ಯಾರಂಟಿಗಳನ್ನು ಈಡೇರಿಸುವುದಾಗಿ ಕಾಂಗ್ರೆಸ್ ಘೋಷಣೆ ಮಾಡಿದೆ. ಇದರೊಂದಿಗೆ ಕಾಂಗ್ರೆಸ್ ಸರ್ಕಾರ ರಚನೆಯಾದರೆ ಕೇಂದ್ರ ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇ 50 ರಷ್ಟು ಉದ್ಯೋಗಗಳನ್ನು ನೀಡಲಾಗುವುದು ಎಂದು ಹೇಳಿದರು. ಇವು ಸೇರಿ ಒಟ್ಟು 5 ಘೋಷಣೆ ಮಾಡಲಾಗಿದೆ.

Leave A Reply

Your email address will not be published.