Delhi: ಅಂಗಡಿಗಳಿಗೆ ಕಾರು ಡಿಕ್ಕಿ : ಓರ್ವ ಮಹಿಳೆ ಸಾವು, 6 ಜನರಿಗೆ ಗಂಭೀರ ಗಾಯ : ಚಾಲಕನ ಮೇಲೆ ಸ್ಥಳೀಯರ ಹಲ್ಲೆ

ದೆಹಲಿಯ ಗಾಜಿಪುರ ಪ್ರದೇಶದಲ್ಲಿ ಬುಧವಾರ ಕಾರು ಡಿಕ್ಕಿ ಹೊಡೆದ ಪರಿಣಾಮ 22 ವರ್ಷದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ ಆರು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಗಾಜಿಯಾಬಾದ್ ನ ಸೀತಾ ದೇವಿ ಎಂದು ಗುರುತಿಸಲಾಗಿದೆ. ಮಾರುಕಟ್ಟೆ ಪ್ರದೇಶದಲ್ಲಿ ರಾತ್ರಿ 9 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದೆ.

ಇದನ್ನೂ ಓದಿ: Paytm: ಪೇಟಿಎಂ ಉದ್ಯೋಗಿಗಳಿಗೆ ಸಂಕಷ್ಟ : ಬಿಕ್ಕಟ್ಟಿನ ಮಧ್ಯೆ ಹಲವಾರು ಉದ್ಯೋಗಿಗಳ ಕಡಿತಕ್ಕೆ ಮುಂದಾದ ಪೇಟಿಎಂ

ಅಪಘಾತ ಸಂಭವಿಸಿದ ಬಳಿಕ ಕೋಪಗೊಂಡ ಸ್ಥಳೀಯರು ಅಪಘಾತ ಮಾಡಿದ ಕಾರನ್ನು ಧ್ವಂಸಗೊಳಿಸಿ, ಚಾಲಕನನ್ನು ಮನಸೋ ಇಚ್ಚೆ ಥಳಿಸಿದ್ದಾರೆ. ಆತನಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ .

ಇದನ್ನೂ ಓದಿ: Tukali Santhosh Car Accident: ತುಕಾಲಿ ಸಂತೋಷ್‌ ಕಾರು ಅಪಘಾತ ಪ್ರಕರಣ, ಆಟೋ ಚಾಲಕ ಸಾವು

ಬುಧ್ ಬಜಾರ್ ಪ್ರದೇಶದಲ್ಲಿ ರಾತ್ರಿ 9.30ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಹಲವರು ಗಾಯಗೊಂಡಿದ್ದು , ಅವರನ್ನು ಲಾಲ್ ಬಹದ್ದೂರ್ ಶಾಸ್ತ್ರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಆರೋಪಿ ಕೂಡ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಡಿಸಿಪಿ ( ಪೂರ್ವ ) ಅಪೂರ್ವ ಗುಪ್ತಾ ತಿಳಿಸಿದ್ದಾರೆ .

ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ಘಟನೆಯ ದೃಶ್ಯಾವಳಿಗಳು, ವಾಹನವು ಅಂಗಡಿಗಳಿಗೆ ಡಿಕ್ಕಿ ಹೊಡೆಯುವುದನ್ನು ತೋರಿಸಿದೆ. ನಂತರ ಚಾಲಕ ಅದೇ ವೇಗದಲ್ಲಿ ಅಲ್ಲಿಂದ ತಪ್ಪಿಸಿಕೊಳ್ಳಲು ಹೋಗಿದ್ದಾನೆ ಅಷ್ಟರಲ್ಲಿ ಸ್ಥಳೀಯರು ಕಾರನ್ನು ಅಡ್ಡಗಟ್ಟಿ ಆತನನ್ನು ತಳಿಸಿದ್ದಾರೆ.

1 Comment
  1. […] ಇದನ್ನು ಓದಿ: Delhi: ಅಂಗಡಿಗಳಿಗೆ ಕಾರು ಡಿಕ್ಕಿ : ಓರ್ವ ಮಹಿಳೆ… […]

Leave A Reply

Your email address will not be published.