Kidney Problems: ಬಿಸಿ ಬಿಸಿ ನೀರು ಕುಡಿತೀರಾ? ಕಿಡ್ನಿ ಸ್ಟೋನ್ ಆಗುವ ಸಂಭವ ಹೆಚ್ಚು!
ನಿಮಗೆ ಗೊತ್ತೆ ಹೆಚ್ಚಾಗಿ ಬಿಸಿ ನೀರು ಕುಡಿಯುವುದು ಅಪಾಯಕಾರಿ. ನೀವು ಹೆಚ್ಚು ಬಿಸಿ ನೀರು ಕುಡಿದರೆ ಮೂತ್ರಪಿಂಡಗಳಲ್ಲಿ ದಪ್ಪ ಕಲ್ಲುಗಳು ರೂಪುಗೊಳ್ಳುತ್ತವೆ ಎಂಬುದು ಸಂಶೋಧನೆಯಿಂದ ಹೊರಬಂದ ಮಾಹಿತಿಯಿದೆ.
ಇದನ್ನೂ ಓದಿ: Mangaluru: ಒಕ್ಕಲಿಗರ ಪ್ರೀಮಿಯರ್ ಲೀಗ್ 2024; ಮಂಗಳೂರಿನಲ್ಲಿ ನಡೆಯಲಿದೆ ಭರ್ಜರಿ ಕ್ರಿಕೆಟ್ ಕೂಟ ಆಯೋಜನೆ
ಸಾಮಾನ್ಯವಾಗಿ ಚಳಿಗಾಲದಲ್ಲಿ ನಮಗೆ ಬಾಯಾರಿಕೆ ಆಗೋಲ್ಲ. ಈ ಕಾರಣಕ್ಕಾಗಿ ನೀರಿನ್ನು ಕುಡಿಯೋದನ್ನೆ ಕಡಿಮೆ ಮಾಡುತ್ತೇವೆ. ಇದರಿಂದಾಗಿ ಹಲವಾರು ಸಮಸ್ಯೆ ಎದುರಾಗುತ್ತದೆ. ನೀರಿನ ಕೊರತೆಯಿಂದಾಗಿ ನಮ್ಮ ದೇಹವು ಕ್ರಮೇಣ ನಿರ್ಜಲೀಕರಣಗೊಳ್ಳಲು ಪ್ರಾರಂಭಿಸುತ್ತದೆ, ಇದು ಮೂತ್ರಪಿಂಡದ ಕಾಯಿಲೆಯಿಂದ ಮೆದುಳಿನವರೆಗೂ ಪರಿಣಾಮ ಬೀರುತ್ತದೆ.
ನೀರು ಪ್ರತಿಯೊಂದು ಜೀವಿಗೂ ಅತ್ಯಗತ್ಯವಾದ ಅಂಶ. ಮುಖ್ಯವಾಗಿ ನೀರು ನಮ್ಮ ಆರೋಗ್ಯವನ್ನು ಸುಧಾರಿಸಲು ಕೆಲಸ ಮಾಡುತ್ತದೆ. ನಮ್ಮ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದರೆ, ಮೂತ್ರವು ಕಡಿಮೆ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ, ಈ ಕಾರಣದಿಂದ ಮೂತ್ರಪಿಂಡಗಳು ದೇಹದಿಂದ ತ್ಯಾಜ್ಯ ವಸ್ತುಗಳನ್ನು ಸರಿಯಾಗಿ ತೆಗೆದುಹಾಕಲು ಆಗೋದಿಲ್ಲ.
ನೀರು ಕುಡಿಯದಿರುವುದರಿಂದ ಕಿಡ್ನಿ ಸ್ಟೋನ್:
ನೀವು ಹೆಚ್ಚಾಗಿ ಕಡಿಮೆ ನೀರು ಕುಡಿಯುತ್ತಿದ್ದರೆ, ನಿಮ್ಮ ಮೂತ್ರಪಿಂಡಗಳು ಹೆಚ್ಚು ಕೆಲಸಮಾಡಬೇಕು. ಇದು ಕಿಡ್ನಿ ಮೇಲೆ ಸಾಕಷ್ಟು ಒತ್ತಡವನ್ನು ಉಂಟು ಮಾಡುತ್ತದೆ. ಇದರಿಂದ ನೀವು ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಿದೆ. ನೀರು ಕುಡಿಯೋದನ್ನ ಕಡಿಮೆ ಮಾಡಿದರೆ, ಮೂತ್ರಪಿಂಡಗಳಲ್ಲಿ ಕ್ಯಾಲ್ಸಿಯಂ ಸಂಗ್ರಹವಾಗಲು ಪ್ರಾರಂಭಿಸುತ್ತದೆ, ಇದರಿಂದ ಮೂತ್ರಪಿಂಡಗಳಲ್ಲಿ ಕಲ್ಲುಗಳು ರೂಪುಗೊಳ್ಳುತ್ತೆ.
ಕಲ್ಲುಗಳನ್ನು ತೆಗೆದುಹಾಕಲು ಪರಿಹಾರ:
ಮೂತ್ರಪಿಂಡದಲ್ಲಿ ಸಣ್ಣ ಕಲ್ಲುಗಳನ್ನು ಹೊಂದಿರುವವರು ಹೆಚ್ಚು ನೀರು ಕುಡಿಯಬೇಕು. ಈಗೆ ಮಾಡುವುದರಿಂದ ಕಲ್ಲುಗಳ ಬೆಳವಣಿಗೆಯನ್ನು ನಿಯಂತ್ರಿಸಿ, ಮೂತ್ರದ ಹರಿವಿನೊಂದಿಗೆ ಕಲ್ಲುಗಳು ಹೊರಬರುತ್ತವೆ. ಆದರೆ, ಕೆಲ ವೇಳೆ ಮೂತ್ರಪಿಂಡದ ಕಾಯಿಲೆ ಬಂದಾಗ ಕಡಿಮೆ ನೀರು ಕುಡಿಯಲು ಸಲಹೆ ನೀಡುತ್ತಾರೆ. ದೇಹದಲ್ಲಿ ನೀರಿನ ಕೊರತೆಯಿಂದಾಗಿ, ನಿಮ್ಮ ರಕ್ತದೊತ್ತಡವೂ ಕಡಿಮೆಯಾಗುತ್ತದೆ.
ನೀರು ಕುಡಿಯದೇ ಇರೋದು:
ದಿನಕ್ಕೆ ಏನಿಲ್ಲ ಅಂದರು ಕನಿಷ್ಠ 2-3 ಲೀಟರ್ ನೀರು ಕುಡಿಯಬೇಕು. ಮೂತ್ರಪಿಂಡ ತನ್ನ ಕಾರ್ಯವನ್ನು ಸರಿಯಾಗಿ ನಿರ್ವಹಿಸಲು ಹಾಲು, ಎಳನೀರು, ಜ್ಯೂಸ್ ಮತ್ತು ಹಣ್ಣುಗಳನ್ನು ಸಹ ಸೇವನೆ ಮಾಡಬಹುದು.
ಬಿಸಿನೀರು ಕುಡಿಯುವುದನ್ನು ತಪ್ಪಿಸಿ:
ನಮ್ಮ ದೇಹವು 55-65 ರಷ್ಟು ನೀರಿನಿಂದ ಆಗಿದೆ. ನೀರು ಕುಡಿಯುವುದು ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನವಾಗಿದೆ., ಏಕೆಂದರೆ ಇದು ದೇಹವನ್ನು ಹೈಡ್ರೇಟ್ ಮಾಡುವ ಜೊತೆಗೆ ದೇಹದಿಂದ ವಿಷವನ್ನು ಹೊರಗಿಡುತ್ತದ, ಆದರೆ ಬಿಸಿ ನೀರು ಕುಡಿದರೆ ಇದಕ್ಕೆ ವಿರುದ್ಧ ಪರಿಣಾಮ ಬೀರುತ್ತದೆ. ಅತಿ ಹೆಚ್ಚು ಬಿಸಿ ನೀರನ್ನು ಕುಡಿಯುವುದರಿಂದ ನಿರ್ಜಲೀಕರಣ ಉಂಟಾಗುತ್ತದೆ.
ಮೂತ್ರಪಿಂಡಗಳ ಮೇಲೆ ಒತ್ತಡ ಬೀರುತ್ತೆ;
ನಮ್ಮ ದೇಹದ ತ್ಯಾಜ್ಯವನ್ನು ಹೊರಹಾಕಲು ಮೂತ್ರಪಿಂಡವು ಕಾರ್ಯ ನಿರ್ವಹಿಸುತ್ತವೆ. ಬಿಸಿ ನೀರಿನಿಂದ ನಿರ್ಜಲೀಕರಣ ಸಂಭವಿಸಿದಾಗ, ಮೂತ್ರಪಿಂಡಗಳ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಇದು ಮೂತ್ರಪಿಂಡಗಳ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ . ದೇಹದ ವಿವಿಧ ಭಾಗಗಳ ಮೇಲೂ ಅದರ ಪರಿಣಾಮ ಬೀರುತ್ತದೆ. ಹಾಗಾಗಿ ಹೆಚ್ಚು ಬಿಸಿ ನೀರು ಕುಡಿಯುವ ಹವ್ಯಾಸವಿದ್ದರೆ ಬಿಟ್ಟು ಬಿಡಿ.
cjlhun