Uttarkhand: ಉತ್ತರಖಾಂಡ ಮದರಸಾ ತೆರವು ಪ್ರಕರಣಕ್ಕೆ ಸ್ಪೋಟಕ ತಿರುವು – ಪೋಲೀಸರನ್ನು ಜೀವಂತ ಸುಡಲು ಪ್ಲಾನ್ ಮಾಡಿದ್ದ ಮುಸ್ಲಿಮರು !!
Uttarkhand: ಉತ್ತರಾಖಂಡದ ಹಲದ್ವಾನಿ ಪಟ್ಟಣದಲ್ಲಿ ಅಕ್ರಮವಾಗಿ ಕಟ್ಟಲಾಗಿದ್ದ ಮದರಸಾ ತೆರವು ಮಾಡುವ ಸಂದರ್ಭ ಹಿಂಸಾಚಾರ ಭುಗಿಲೆದ್ದಿದ್ದು ಇದೀಗ ಈ ಪ್ರಕರಣಕ್ಕೆ ಸ್ಪೋಟಕ ತಿರುವು ಸಿಕ್ಕಿದೆ. ಜಿಲ್ಲಾಧಿಕಾರಿಗಳಿಂದ ಭಯಾನಕ ಸತ್ಯ ಬಯಲಾಗಿದೆ.
https://x.com/ANI/status/1755607362298396740?t=p6yLeynwbWnY2ZtY2sA2ow&s=08
ಹೌದು, ಉತ್ತರಖಾಂಡದ(Uttarkhand) ಹಲ್ದ್ವಾನಿಯಲ್ಲಿನ ಅಕ್ರಮ ಮದರಸಾ ತೆರವಿನ ಬಳಿಕ ನಡೆದ ಹಿಂಸಾಚಾರದ ಕುರಿತು ಸುದ್ದಿಗೋಷ್ಠಿ ನಡೆಸಿದ ನೈನಿತಾಲ್ ಜಿಲ್ಲಾಧಿಕಾರಿ ಸ್ಫೋಟಕ ಮಾಹಿತಿ ನೀಡಿದ್ದರೆ. ಇದು ಮುಸ್ಲಿಮರು ನಡೆಸಿದ ಪೂರ್ವನಿಯೋಜಿತ ದಾಳಿಯಾಗಿದೆ. ಪೊಲೀಸರನ್ನು ಜೀವಂತ ಸುಡಲು ಎಲ್ಲಾ ತಯಾರಿ ನಡೆಸಲಾಗಿತ್ತು ಎಂದು ಅವರು ಹೇಳಿದ್ದಾರೆ.
ಜಿಲ್ಲಾಧಿಕಾರಿ ಹೇಳಿದ್ದೇನು?
ಹೈಕೋರ್ಟ್ ನಿರ್ದೇಶನದಂತೆ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ. ಅಂತೆಯೇ ಮದರಸಾ ತೆರವೂ ಮಾಡಲಾಗಿದೆ. ಅವರಿಗೆಲ್ಲಾ ಹಲವು ದಿನಗಳ ಮೊದಲೇ ಅಕ್ರಮ ಕಟ್ಟಡಳಿಗೆ ನೋಟಿಸ್ ನೀಡಲಾಗಿದೆ. ಏಕಾಏಕಿ ಕಾರ್ಯಾಚರಣೆ ನಡೆಸಿಲ್ಲ. ನೋಟಿಸ್ ಪಡೆದ ಮದರಸಾ ಹಾಗೂ ಮುಸ್ಲಿಮರು ಕಾರ್ಯಾಚರಣೆ ವಿರುದ್ಧ ದಾಳಿ ನಡೆಸಲು ಸಜ್ಜಾಗಿದ್ದರು. ಪೊಲೀಸರನ್ನು ಜೀವಂತ ಸುಡಲು ಪ್ಲಾನ್ ಮಾಡಲಾಗಿತ್ತು. ಮುಸ್ಲಿಮರು ತಮ್ಮ ಮನೆಯ ಮೇಲೆ, ಕಟ್ಟಡದ ಮೇಲೆ ಕಲ್ಲು, ಪೆಟ್ರೋಲ್ ಬಾಂಬ್ ಶೇಖರಿಸಿಟ್ಟಿದ್ದರು ಎಂದು ವಂದನಾ ಸಿಂಗ್ ಹೇಳಿದ್ದಾರೆ.
ಅಲ್ಲದೆ ಅಧಿಕಾರಿಗಳು ಫೆಬ್ರವರಿ 8 ರಂದು ಜೆಸಿಬಿ ಹಾಗೂ 50 ಪೊಲೀಸರ ಮೂಲಕ ಸ್ಥಳಕ್ಕೆ ತೆರಳಿ ಅಕ್ರಮ ಮದರಸಾ ತೆರವು ಮಾಡಲಾಗಿತ್ತು. ತೆರವು ಕಾರ್ಯಾಚರಣೆ ನಡೆದ ಅರ್ಧ ಗಂಟೆಗಳ ಕಾಲ ಎಲ್ಲವೂ ಶಾಂತವಾಗಿತ್ತು. ಆಧರೆ ಅರ್ಧಗಂಟೆಗಳ ಬಳಿ 250 ರಿಂದ 300 ಮಂದಿ ದಿಢೀರ್ ಆಗಮಿಸಿ ದಾಳಿ ನಡೆಸಿದ್ದರು. ಇದು ಪೂರ್ವನಿಯೋಜಿತ ದಾಳಿಯಾಗಿತ್ತು ಎಂದು ಅವರು ಹೇಳಿದ್ದಾರೆ.