Love Jihad: ಬಾಲಕಿಯ ಜೊತೆ ಸುತ್ತಾಡುತ್ತಿದ್ದ ಉಜಿರೆಯ ಖಾಸಗಿ ಕಾಲೇಜಿನ ಡ್ಯಾನ್ಸ್‌ ಮಾಸ್ಟರ್‌ ಯುವಕ; ಬಜರಂಗದಳ ಕಾರ್ಯಕರ್ತರ ಹಲ್ಲೆ, 7 ಮಂದಿ ಅರೆಸ್ಟ್‌

Love Jihad: ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಲವ್‌ಜಿಹಾದ್‌ ಸದ್ದು ಮಾಡಿದೆ. ಅಪ್ರಾಪ್ತ ಬಾಲಕಿಯ ಜೊತೆ ಸುತ್ತಾಡುತ್ತಿದ್ದ ಮುಸ್ಲಿಂ ಯುವಕನ ಮೇಲೆ ಬಜರಂಗದಳ ಕಾರ್ಯಕರ್ತರು ಹಲ್ಲೆ ಮಾಡಿರುವ ಕುರಿತು ವರದಿಯಾಗಿದೆ.

ಇದನ್ನೂ ಓದಿ: Karnataka politics: ಬಿಜೆಪಿಯ ಮತ್ತೊಬ್ಬ ಪ್ರಬಲ ನಾಯಕ ಕಾಂಗ್ರೆಸ್ ಸೇರ್ಪಡೆ !! ಕಾಂಗ್ರೆಸ್ ನಿಂದಲೇ ಬಂತು ಬಿಗ್ ಅಪ್ಡೇಟ್

ಉಜಿರೆ ಖಾಸಗಿ ಕಾಲೇಜಿನಲ್ಲಿ ಡ್ಯಾನ್ಸ್‌ ಮಾಸ್ಟರ್‌ ಆಗಿರುವ ರೂಮನ್‌ ಆಲ್ದೂರು ಸಮೀಪದ ಗಾಳಿಗಂಡಿ ನಿವಾಸಿ. ಈತ ಅಪ್ರಾಪ್ತ ಬಾಲಕಿಯ ಜೊತೆ ಸುತ್ತಾಟ ನಡೆಸಿದ್ದ ಫೋಟೋಸ್‌, ವೀಡಿಯೋಸ್‌ ವೈರಲ್‌ ಆಗಿದ್ದವು. ಕೂಡಲೇ ಬಜರಂಗದಳ ಕಾರ್ಯಕರ್ತರು ನಿನ್ನೆ ರಾತ್ರಿ ಆಲ್ದೂರಿಗೆ ಕರೆಸಿ ಕಿಡ್ನಾಪ್‌ ಮಾಡಿ ಹಲ್ಲೆ ನಡೆಸಿರುವ ಕುರಿತು ವರದಿಯಾಗಿದೆ. ಈ ಘಟನೆ ಸಂಬಂಧ ರೂಮನ್‌ ದೂರು ದಾಖಲಿಸಿದ್ದಾನೆ.

ಇನ್ನೊಂದು ಕಡೆ ಡ್ಯಾನ್ಸ್‌ ಮಾಸ್ಟರ್‌ ರೂಮನ್‌ ವಿರುದ್ಧ ಅಪ್ರಾಪ್ತ ಬಾಲಕಿಯ ಪೋಷಕರು ಕೂಡಾ ದೂರು ದಾಖಲು ಮಾಡಿದ್ದಾರೆ. ಸದ್ಯ ಆಲ್ದೂರು ಪೊಲೀಸ್‌ ಠಾಣೆಯಲ್ಲಿ ರೂಮನ್‌ ಮತ್ತು ಬಜರಂಗದಳ ಕಾರ್ಯರ್ತರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಡ್ಯಾನ್ಸ್ ಮಾಸ್ಟರ್ ರೂಮನ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದ್ದು, 7 ಭಜರಂಗದಳ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ ಮುಂಜಾಗ್ರತಾ ಕ್ರಮವಾಗಿ ಆಲ್ದೂರು ಪಟ್ಟಣದಲ್ಲಿ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

Leave A Reply

Your email address will not be published.