Dakshina Kannada: ಕುಸಿದು ಬಿದ್ದು ಮೃತಪಟ್ಟ ದೈವ ನರ್ತಕ; ಮಕ್ಕಳಿಗೆ ದೀಕ್ಷೆ ಬೂಳ್ಯ!!
Daivaradhane: ಕಾಂತಾರ ಸಿನಿಮಾ ಮಾದರಿಯಲ್ಲೇ ಒಂದ ಸನ್ನಿವೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಂಡು ಬಂದಿತ್ತು. ತಿಂಗಳ ಹಿಂದೆ ನೇಮೋತ್ಸವದ ಸಂದರ್ಭ ದೈವ ನರ್ತಕರೊಬ್ಬರು ಕುಸಿದು ಬಿದ್ದು ಸಾವು ಕಂಡಿದ್ದರು. ಇದೀಗ ಅವರ ಮಕ್ಕಳನ್ನೇ ದೈವವು ನೇಮಿಸಿಕೊಂಡ ಘಟನೆ ನಡೆದಿತ್ತು, ನಿಜಕ್ಕೂ ಇದೊಂದು ರೀತಿಯ ಭಾವುಕ ಸನ್ನಿವೇಶಕ್ಕೆ ಕಾರಣವಾಯಿತು. ಈ ಸನ್ನಿವೇಶ ಕಾಂತಾರ ಸಿನಿಮಾವನ್ನು ನೆನಪಿಸುತ್ತದೆ.
ಇದನ್ನೂ ಓದಿ: Dakshina Kannada: ಸುಡುಮದ್ದು ಪ್ರಕರಣ; ಘಟನಾ ಸ್ಥಳಕ್ಕೆ ಡಿಐಜಿ ರವಿ ಡಿ ಚೆನ್ನಣ್ಣನವರ್ ಭೇಟಿ!
ಕಡಬ ತಾಲೂಕಿನ ಎಡಮಂಗಲದ ಶಿರಾಡಿ ದೈವಸ್ಥಾನಕ್ಕೆ ಸಂಬಂಧಪಟ್ಟ ದೈವ ನರ್ತಕ ಕಾಂತು ಅಜಿಲ ಅವರು ನೇಮೋತ್ಸವ ಸಂದರ್ಭ ಕುಸಿದು ಬಿದ್ದು ಮೃತ ಹೊಂದಿದ್ದರು. ಇದೀಗ ದೈವಜ್ಞರ ಪ್ರಶ್ನೆ ಪ್ರಕಾರ ಕಾಂತು ಅಜಿಲ ಮಕ್ಕಳಾದ ಮೋನಪ್ಪ ಮತ್ತು ದಿನೇಶ್ ಅವರು ಮುಂದಿನ ದೈವ ನರ್ತಕರನ್ನಾಗಿ ನೇಮಿಸಲಾಗಿತ್ತು.
ಬೂಳ್ಯ ಪಡೆಯುವ ಕ್ರಮವು ಶುದ್ಧವಾಗಿ ಮಡಿ ಬಟ್ಟೆಯನ್ನು ಸುತ್ತಿ ಮನೆ ಮಂದಿಯ ಹಾಗೂ ಗ್ರಾಮದ ಹಿರಿಯ ಆಶೀರ್ವಾದ ಪಡೆದ ನಂತರ ನಾಲ್ಜೂರು, ಒಂಬತ್ತು ದಿಕ್ಕಿಗೆ ಸೇರಿದ ಜನರ ಸಮ್ಮುಖದಲ್ಲಿ ದೀಕ್ಷೆ ಬೂಳ್ಯವನ್ನು ನೀಡಲಾಗುತ್ತದೆ. ಈ ದೀಕ್ಷೆ ದೈವಾರಾಧನೆಯಲ್ಲಿ ಅತ್ಯಂತ ಮಹತ್ವದ ವಿಚಾರ. ದೈವ ತನ್ನ ಅವಾಹನೆಯನ್ನು ಹೊಸದಾಗಿ ನೇಮಕವಾದ ದೈವ ನರ್ತಕರ ಮೂಲಕ ತೋರ್ಪಡಿಸಲಿದೆ ಎನ್ನುವುದು ದೀಕ್ಷೆ ಬೂಳ್ಯದ ಹಿಂದಿರುವ ತತ್ವ. ದೀಕ್ಷೆ ಪಡೆದ ನಂತರ ದೈವ ನರ್ತಕ ನಾಲ್ಕು ಗ್ರಾಮಕ್ಕೆ ಸಂಬಂಧಪಟ್ಟ ದೈವಗಳ ಜವಾಬ್ದಾರಿ ವಹಿಸಬೇಕಾಗುತ್ತದೆ.