Pink WhatsApp ಬಳಕೆದಾರರೇ ಗಮನಿಸಿ, ಪೊಲೀಸ್ ಇಲಾಖೆಯಿಂದ ಬಂತು ಬಿಗ್ ಅಪ್ಡೇಟ್!!
Pink Whatsapp: ಗುಲಾಬಿ ಬಣ್ಣದ ವಾಟ್ಸಪ್ ಬಳಕೆದಾರರಿಗೆ (Pink Color Whatsapp) ಕರ್ನಾಟಕ ಪೊಲೀಸರು (Karnataka Police) ಎಚ್ಚರಿಕೆಯ ಸಂದೇಶವನ್ನು ಕಳುಹಿಸಿದ್ದಾರೆ.
ಇದನ್ನೂ ಓದಿ: Dakshina kannada: ನೇತ್ರಾವತಿ ಸೇತುವೆಯಲ್ಲಿ ಭೀಕರ ರಸ್ತೆ ಅಪಘಾತ; ಬೈಕ್ ಡಿಕ್ಕಿ, ಸವಾರ ಸ್ಥಳದಲ್ಲೇ ಸಾವು!!
ಗುಲಾಬಿ ಬಣ್ಣದ ವಾಟ್ಸಪ್ ಬಳಕೆದಾರರು ಎಚ್ಚರಿಕೆಯಿಂದಿರಬೇಕು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆಕರ್ಷಣೆಯ ಗುಲಾಬಿ ಬಣ್ಣದ ವಾಟ್ಸ್ಅಪ್ (Apk) ಬಳಸುವವರನ್ನು ಗುರಿಯಾಗಿಸಿಕೊಂಡು ಡೇಟಾ ಹ್ಯಾಕರ್ಸ್ ಡೇಟಾ ಕದಿಯಲು (Data Thfet) ಇಲ್ಲವೇ Android ಮೊಬೈಲ್ ಹ್ಯಾಕ್ ಮಾಡಲು ಬಳಕೆ ಮಾಡುತ್ತಾರೆ. ಹೀಗಾಗಿ, ಈ ಪಿಂಕ್ ವಾಟ್ಸಪ್ ಬಳಕೆ ಮಾಡುವವರು ಜಾಗೃತೆಯಿಂದಿರಿ ಎಂದು ಸೋಶಿಯಲ್ ಮೀಡಿಯಾ ಮೂಲಕ ಪೊಲೀಸರು(Karnataka Police)ಅಲರ್ಟ್ ಮೆಸೇಜ್ ರವಾನಿಸಿದ್ದಾರೆ.
ಗುಲಾಬಿ ಬಣ್ಣದ ವಾಟ್ಸಪ್ ಬಳಕೆ ಮಾಡಿದರೆ ಮೊಬೈಲ್ ಸಂಪೂರ್ಣ ಡೇಟಾ ಹ್ಯಾಕರ್ಸ್ ಕೈ ಸೇರಲಿದೆ. ನಿಮ್ಮ ಮೊಬೈಲ್ ನಲ್ಲಿನ ಫೋಟೋ, ಬ್ಯಾಂಕ್ ಖಾತೆಗಳ ವಿವರ, ಪಾಸ್ ವರ್ಡ್, ಕಾಂಟ್ಯಾಕ್ಟ್ ಮಾಹಿತಿ ಹಾಗೂ ಮೆಸೇಜ್ ಹ್ಯಾಕರ್(Cyber Crime)ಪಡೆದುಕೊಳ್ಳಬಹುದು. ಹೀಗಾಗಿ ಸಾರ್ವಜನಿಕರುಯಾರೂ ಕೂಡ ಈ ಪಿಂಕ್ ವಾಟ್ಸಪ್ ನ ಬಳಕೆ ಮಾಡದಂತೆ ಕರ್ನಾಟಕ ಪೊಲೀಸರು ಮಾಹಿತಿ ನೀಡಿದ್ದಾರೆ. ಒಂದು ವೇಳೆ ಯಾವುದೇ ರೀತಿಯ ಸೈಬರ್ ವಂಚನೆ ಆದರೆ 1930 ಸಂಖ್ಯೆಗೆ ಕರೆ ಮಾಡಲು ಸೂಚನೆ ನೀಡಲಾಗಿದೆ.