Sania Mirza: ಶೋಯೆಬ್‌ ಮಲಿಕ್‌ಗೆ ʼಖುಲಾʼ ನೀಡಿದ ಸಾನಿಯಾ!!! ಏನಿದು ಖುಲಾ? ತಲಾಕ್‌ಗಿಂತ ಇದು ಎಷ್ಟು ಭಿನ್ನ?

Sania Mirza Khula From Shoaib Malik: ಸಾನಿಯಾ ಮಿರ್ಜಾ, ಶೋಯೆಬ್ ಮಲಿಕ್ ಅವರು ಇದೀಗ ಬೇರ್ಪಟ್ಟಿದ್ದಾರೆ. ಶೋಯೆಬ್‌ ಮಲಿಕ್‌ ತಮ್ಮ ಮೂರನೇ ಮದುವೆಯ ಸುದ್ದಿ ಇದೀಗ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ. ಶೋಯೆಬ್ ಮಲಿಕ್ ತನ್ನ ಹೊಸ ಪತ್ನಿ ಸನಾ ಜಾವೇದ್ ಜೊತೆಗಿನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

 

ಇದನ್ನೂ ಓದಿ: Shimogga: ರಾಮಮಂದಿರ ಉದ್ಘಾಟನೆ, ಸಿಹಿ ವಿತರಣೆ ವೇಳೆ ಅಲ್ಲಾಹೋ ಅಕ್ಬರ್‌ ಘೋಷಣೆ ಕೂಗಿದ ಮಹಿಳೆ!!!

ಸಾನಿಯಾ ಮಿರ್ಜಾ ಮತ್ತು ಶೋಯೆಬ್‌ ಮಲಿಕ್‌ ನಡುವೆ ಎಲ್ಲವೂ ಸರಿಯಾಗಿಲ್ಲ, ಇವರಿಬ್ಬರು ಡಿವೋರ್ಸ್‌ ಪಡೆಯುತ್ತಿದ್ದಾರೆ ಎಂಬುವುದರ ಕುರಿತು ಕೆಲವು ತಿಂಗಳಿನಿಂದ ವದಂತಿ ಹಬ್ಬಿತ್ತು. ಇದರ ಕುರಿತು ಇವರಿಬ್ಬರೂ ಮೌನ ವಹಿಸಿದ್ದರು. ಇದೀಗ ಶೋಯೆಬ್‌ ಮಲಿಕ್‌ ಮದುವೆಯ ನಂತರ ಸಾನಿಯ ಅವರ ತಂದೆ ತಮ್ಮ ಮಗಳು ಶೋಯೆಬ್‌ ಮಲಿಕ್‌ಗ “ಖುಲಾ” ನೀಡಿರುವುದಾಗಿ ಬಹಿರಂಗ ಪಡಿಸಿದರು. ಈ “ಖುಲಾ” ಎಂದರೇನು? ತಲಾಖ್‌ನಿಂದ ಇದು ಎಷ್ಟು ಭಿನ್ನ? ಇದರ ಕುರಿತು ಸಣ್ಣ ಮಾಹಿತಿ ಇಲ್ಲಿದೆ.

ಸಾನಿಯಾ ‘ಖುಲಾ’ ಅಡಿಯಲ್ಲಿ ಶೋಯೆಬ್ ಮಲಿಕ್‌ನಿಂದ ಪ್ರತ್ಯೇಕತೆಯ ಹೆಜ್ಜೆಯನ್ನು ತೆಗೆದುಕೊಂಡಿದ್ದಾರೆ. ಇಸ್ಲಾಂ ಧರ್ಮವು ಮಹಿಳೆಗೆ ವಿಚ್ಛೇದನ ಪಡೆಯುವ ಹಕ್ಕನ್ನು ನೀಡುತ್ತದೆ. ಖುಲಾ ಇಸ್ಲಾಂನಲ್ಲಿ ವಿಚ್ಛೇದನದ ಪ್ರಕ್ರಿಯೆಯಾಗಿದ್ದು, ಯಾವುದೇ ಮಹಿಳೆ ತನ್ನ ಪತಿಯಿಂದ ಬೇರ್ಪಡಬಹುದು. ತಲಾಖ್ ಅನ್ನು ಪತಿ ನೀಡುತ್ತಾನೆ, ಆದರೆ ಖುಲಾವನ್ನು ಹೆಂಡತಿಯಿಂದ ಪ್ರತ್ಯೇಕಿಸಲು ನೀಡಲಾಗುತ್ತದೆ.

Leave A Reply

Your email address will not be published.