Home Interesting Intresting Video: ಏನ್ ಚಳಿ ಗುರು; ಪೊಲೀಸ್ ಠಾಣೆಗೆ ಎಂಟ್ರಿ ಕೊಟ್ಟ ಸ್ಪೆಷಲ್ ಗೆಸ್ಟ್: ಚಳಿ...

Intresting Video: ಏನ್ ಚಳಿ ಗುರು; ಪೊಲೀಸ್ ಠಾಣೆಗೆ ಎಂಟ್ರಿ ಕೊಟ್ಟ ಸ್ಪೆಷಲ್ ಗೆಸ್ಟ್: ಚಳಿ ತಾಳಲಾರದೆ ಹೀಟರ್ ಮುಂದೆ ಕೂತ ಮರ್ಕಟ!! ವೈರಲ್ ಆಯ್ತು ವೀಡಿಯೋ!!

Intresting Video

Hindu neighbor gifts plot of land

Hindu neighbour gifts land to Muslim journalist

Intresting Video: ಇತ್ತೀಚಿಗೆ ಚಳಿಯಲ್ಲಿ ಹಾಸಿಗೆಯಿಂದ ಕೆಳಗಿಯಲು ಪರದಾಡುವವರು ಅದೆಷ್ಟೋ ಮಂದಿಯಿದ್ದಾರೆ ಎಂದರೆ ತಪ್ಪಾಗದು. ಈ ಚಳಿಗೆ ಪ್ರಾಣಿ ಪಕ್ಷಿಗಳು ಕೂಡ ಹೊರತಾಗಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಚಳಿಯಿಂದ(Winter)ತಪ್ಪಿಸಿಕೊಳ್ಳಲು ಉತ್ತರ ಪ್ರದೇಶದ(Uttar Pradesh)ಕಾಲ್ಪುರದಲ್ಲಿ ಕೋತಿಯೊಂದು ಪೊಲೀಸ್‌ ಠಾಣೆಗೆ ಬಂದ ಅಪರೂಪದ ಘಟನೆ ವರದಿಯಾಗಿದೆ.

https://x.com/editorji/status/1748163152800317461?s=20

ಇದನ್ನೂ ಓದಿ: Rakshith shetty: ರಿಶಬ್ ಬೆನ್ನಲ್ಲೇ ದೈವ ಕೋಲದಲ್ಲಿ ಭಾಗಿಯಾದ ರಕ್ಷಿತ್ ಶೆಟ್ಟಿ- ಅಷ್ಟಕ್ಕೂ ದೈವದ ಬಳಿ ರಕ್ಷಿತ್ ಕೇಳಿದ್ದೇನು ಗೊತ್ತಾ? ವಿಡಿಯೋ ವೈರಲ್

ಉತ್ತರ ಪ್ರದೇಶದ ಕಾಲ್ಪುರದಲ್ಲಿ ಚಳಿಯನ್ನು ತಾಳಲಾರದೆ ಹೆಡ್‌ಕಾನ್ಸ್‌ಟೇಬಲ್‌ ಅಶೋಕ್‌ ಕಚೇರಿಯಲ್ಲಿ ಎಲೆಕ್ಟಿಕ್ ಹೀಟರ್‌ನಿಂದ ಬಿಸಿ ಮಾಡಿಕೊಳ್ಳುತ್ತಿದ್ದರಂತೆ. ಈ ಸಂದರ್ಭ ಕಚೇರಿಗೆ ಸ್ಪೆಷಲ್ ಗೆಸ್ಟ್ ಒಬ್ಬರು ಎಂಟ್ರಿ ಕೊಟ್ಟಿದ್ದಾರೆ. ಪೊಲೀಸ್ ಠಾಣೆಗೆ ಬಂದ ಕೋತಿ ಹೀಟರ್ ಮುಂದಿನ ಕುರ್ಚಿ ಮೇಲೆ ಕುಳಿತು ಚಳಿಯಿಂದ ಕೊಂಚ ರಕ್ಷಣೆ ಪಡೆದಿದೆ.

ಆಗ ಅಲ್ಲೇ ಇದ್ದ ಅಶೋಕ್‌ ಹೆಡ್‌ಕಾನ್ಸ್‌ಟೇಬಲ್ ಚಳಿಯಿಂದ ನಡುಗುತ್ತಿದ್ದ ಕೋತಿಗೆ ಆರೈಕೆ ಮಾಡಿದ್ದು, ಕಾನ್ಸುರ ಪೊಲೀಸ್ ಕಮಿಷನರೇಟ್‌ನ ಕ್ಯಾಂಪ್‌ನಲ್ಲಿರವ ಕಚೇರಿಯಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಹೀಟರ್ ಮುಂದೆ ಕುಳಿತ ಕೋತಿಗೆ ಪೊಲೀಸ್‌ ಮುಖ್ಯಪೇದೆ ಆರೈಕೆ ಮಾಡುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೋತಿಗೆ ಆರೈಕೆ ಮಾಡಿ ಮಾನವೀಯತೆ ಮೆರೆದ ಹೆಡ್‌ಕಾನ್ಸ್‌ಟೇಬಲ್‌ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.