Ex MP son died: ಸಕಾಲಕ್ಕೆ ಸೂಕ್ತ ಚಿಕಿತ್ಸೆ ಸಿಗದೆ ಬಿಜೆಪಿಯ ಮಾಜಿ ಸಂಸದರ ಮಗ ಮೃತ !

ಉತ್ತರ ಪ್ರದೇಶದ ಆಸ್ಪತ್ರೆಯೊಂದರಲ್ಲಿ ಹಾಸಿಗೆಗಳ ಕೊರತೆಯಿಂದಾಗಿ ಸಕಾಲಕ್ಕೆ ಸೂಕ್ತ ಚಿಕಿತ್ಸೆ ಸಿಗದೆ ಬಿಜೆಪಿಯ ಮಾಜಿ ಸಂಸದರೊಬ್ಬರ ಮಗ ಮೃತಪಟ್ಟ ಘಟನೆ ನಡೆದಿದೆ. (UP ex MP son died due to delayed treatment)ಮಗನ ಸಾವಿನಿಂದ ದುಃಖಿತರಾದ ತಂದೆ, ಮಗನ ಮೃತದೇಹದೊಟ್ಟಿಗೆ ವಾರ್ಡ್‌ನಲ್ಲಿಯೇ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ಈಗ ತಪ್ಪಿತಸ್ಥ ವೈದ್ಯನನ್ನು ಅಮಾನತು ಮಾಡಿದ ಸರ್ಕಾರ, ಮತ್ತಷ್ಟು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ.

ಮೃತನನ್ನು ಪ್ರಕಾಶ್ ಮಿಶ್ರಾ (41) ಎಂದು ಗುರುತಿಸಲಾಗಿದ್ದು, ಈತ ಆಡಳಿತಾರೂಢ ಬಿಜೆಪಿಯ ಮಾಜಿ ಸಂಸದ ಭೈರೋನ್ ಪ್ರಸಾದ್ ಮಿಶ್ರಾ ಪುತ್ರ. ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದ ಮಿಶ್ರಾ ಅವರನ್ನು ಸೋಮವಾರ ರಾತ್ರಿ 11 ಗಂಟೆಗೆ ಲಖನೌದಲ್ಲಿನ ಎಸ್‌ಜಿಪಿಜಿಐ ಆಸ್ಪತ್ರೆಯ ತುರ್ತು ವಿಭಾಗಕ್ಕೆ ಕರೆದೊಯ್ಯಲಾಗಿತ್ತು. ಆದರೆ ಅಲ್ಲಿ ಬೆಡ್ ಕೊರತೆಯಿಂದಾಗಿ ಅಲ್ಲಿ ತುರ್ತು ಚಿಕಿತ್ಸೆ ಸಿಕ್ಕಿರಲಿಲ್ಲ. ಹೀಗಾಗಿ ಆಸ್ಪತ್ರೆಗೆ ಹೋದ ಸ್ವಲ್ಪ ಸಮಯದ ಬಳಿಕ ಮಗ ಮೃತಪಟ್ಟಿರುವುದಾಗಿ ಪ್ರಸಾದ್ ಮಿಶ್ರಾ ದೂರಿದ್ದಾರೆ. ಆಗ ಮಗನ ಶವದೊಂದಿಗೆ ತುರ್ತು ವಾರ್ಡ್‍ನ ಹೊರಗೆ ಮಾಜಿ ಸಂಸದ ಪ್ರತಿಭಟನೆ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಂಸದರು, ನಾನು ನನ್ನ ಮಗನನ್ನು ಕಳೆದುಕೊಂಡಿದ್ದೇನೆ ಗೋಳಾಡಿದ್ದಾರೆ. ನಾನು ಬಂದ ನಂತರ ಸುಮಾರು 20-25 ಜನರು ಚಿಕಿತ್ಸೆ ಪಡೆದಿದ್ದಾರೆ. ಎಲ್ಲರೂ ವೈದ್ಯನ ಬಗ್ಗೆ ದೂರು ನೀಡುತ್ತಿದ್ದಾರೆ. ಆ ವೈದ್ಯನಿಗೆ ಶಿಕ್ಷೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಆಸ್ಪತ್ರೆ ಮುಖ್ಯಸ್ಥ ಡಾ.ಆರ್.ಕೆ.ಮಾನ್ ಮಾತನಾಡಿ, ‘ಆಸ್ಪತ್ರೆಗೆ ದಾಖಲಿಸಿದಾಗ ರೋಗಿಯನ್ನು ಐಸಿಯುಗೆ ಕರೆದೊಯ್ಯಲು ವೈದ್ಯರು ಹೇಳಿದ್ದು, . ಆದರೆ ಅಲ್ಲಿ ಬೆಡ್ ಗಳು ಲಭ್ಯವಿಲ್ಲ ಎಂದು ರೋಗಿ ಕಡೆಯವರಿಗೆ ತಿಳಿಸಿದ್ದಾರೆ. ಯಾಕೆ ಬೆಡ್ ಇಲ್ಲ ಎಂದುವಾರು ಏನು ಹೇಳಿದ್ದಾರೆ ಎಂದು ಈಗ ತಿಳಿದಿಲ್ಲ. ಈಗ ನಾವು ಸಮಿತಿಯೊಂದನ್ನು ರಚಿಸಿದ್ದೇವೆ. ನಾವು ಕಠಿಣ ಕ್ರಮ ತೆಗೆದುಕೊಳ್ಳಲಿದ್ದೇವೆ, ಸದ್ಯಕ್ಕೆ ವೈದ್ಯರನ್ನು ಅಮಾನತುಗೊಳಿಸಲಾಗಿದೆ ಎಂದವರು ತಿಳಿಸಿದ್ದಾರೆ.

ಸದ್ಯ ಘಟನೆಯ ಕುರಿತು ಸಮಾಜವಾದಿ ನಾಯಕ ಅಖಿಲೇಶ್ ಯಾದವ್ ಮಾತನಾಡಿ, ‘ಇದು ಆಸ್ಪತ್ರೆಯ ತಪ್ಪಲ್ಲ. ಆದರೆ ಇದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರ ತಪ್ಪು. ಆಸ್ಪತ್ರೆಗೆ ಬಜೆಟ್ ಯಾಕೆ ನೀಡುತ್ತಿಲ್ಲ’ ಎಂದು ಅವರು ಪ್ರಶ್ನಿಸಿದ್ದಾರೆ.

Leave A Reply

Your email address will not be published.