Love Secret: ಲವ್ ನಲ್ಲಿ ಬಿದ್ದಿದ್ದೀರಾ? ಹಾಗಿದ್ದರೆ ಈ ಚೇಂಜಸ್ ಖಂಡಿತಾ ನಿಮ್ಮಲ್ಲಿರುತ್ತೆ !

Love Secret: ಪ್ರೀತಿ ಅಂದ್ರೇನೆ ಮಾಯಲೋಕ ಅದರಲ್ಲೂ ಪ್ರೀತಿಗೆ ಸಾವಿರಾರು ಹೆಸರು, ಸಾವಿರಾರು ರೂಪ. ಒಟ್ಟಿನಲ್ಲಿ ಪ್ರೀತಿಯ ವ್ಯಾಖ್ಯಾನ ಕಷ್ಟ. ಇನ್ನು ನೀವು ಲವ್ ನಲ್ಲಿ ಬಿದ್ದಿದ್ದರೆ ಈ ಚೇಂಜಸ್ ಖಂಡಿತಾ ನಿಮ್ಮಲ್ಲಿರುತ್ತೆಯಂತೆ ಇದೊಂದು ಸೀಕ್ರೆಟ್ ವಿಷಯ ಅನ್ನಬಹುದು (Love Secret). ಹೌದು, ಆಶ್ಚರ್ಯವಾದರೂ ಸತ್ಯ. ಪ್ರೀತಿಸುವುದರಿಂದ ತೂಕದಲ್ಲಿ ಏರಿಕೆಯಾಗುತ್ತದೆ (Weight gain) ಎಂಬುದು ಸಂಶೋಧನಾ ವರದಿಗಳು ಕಂಡುಕೊಂಡಿದೆ.

ಮುಖ್ಯವಾಗಿ ಜೀವನದಲ್ಲಿ ಪ್ರೀತಿಯೆಂಬ ಭಾವವಿಲ್ಲದೆ ಬದುಕುವುದು ಕಷ್ಟ. ಇನ್ನು ಪ್ರೀತಿಯಲ್ಲಿ ದೇಹದ ತೂಕ ಏರಿಳಿತ ಕೂಡಾ ಸಹಜ. ಹೌದು, ಪ್ರೀತಿಸುವುದರಿಂದ ತೂಕದಲ್ಲಿ ಏರಿಕೆಯಾಗುತ್ತದೆ.

ವರದಿಯ ಪ್ರಕಾರ, ಪ್ರೀತಿಯಲ್ಲಿ ಬಿದ್ದ ಮತ್ತು ಮದುವೆಯಾದ ಸುಮಾರು 8000 ಮಂದಿಯ ತೂಕವನ್ನು ಅಧ್ಯಯನ ಮಾಡಿ ಈ ವರದಿ ಸಿದ್ಧಪಡಿಸಲಾಗಿದೆ. ಮದುವೆಯಾದ ಮಹಿಳೆಯರಲ್ಲಿ ಸಾಮಾನ್ಯವಾಗಿ, ಮದುವೆಯಾಗಿ ಐದೇ ವರ್ಷಗಳಲ್ಲಿ ಅವರು ಸುಮಾರು 11 ಕೆಜಿಗಳಷ್ಟು ತೂಕ ಏರಿಕೆಯಾಗುತ್ತದೆ (Weight gain) ಎನ್ನಲಾಗಿದೆ. ಆದರೆ ಮದುವೆಯಾಗದೆ ಜೊತೆಗಿರುವ ಜೋಡಿಗಳು ಸುಮಾರು ಎಂಟು ಕೆಜಿ ಏರಿಸಿಕೊಂಡರೆ, ಜೊತೆಯಾಗಿರದ ಅದರೆ ಪ್ರೀತಿಸುತ್ತಿರುವ ಜೋಡಿಗಳ ಪೈಕಿ ಮಹಿಳೆಯರು ಏಳು ಕೆಜಿಗಳಷ್ಟು ತೂಕ ಏರಿಸಿಕೊಳ್ಳುತ್ತಾರಂತೆ.

ಇದನ್ನೂ ಓದಿ: Akshaya Tritiya 2024: 23 ವರ್ಷದ ಬಳಿಕ ಈ ಅಕ್ಷಯ ತೃತೀಯದಂದು ಒಂದು ಶುಭಕಾರ್ಯಕ್ಕೆ ಫಲವಿಲ್ಲವಂತೆ !

ಹಾಗಾದರೆ ಪ್ರೀತಿಸುವುದರಿಂದ ಮಹಿಳೆಯರ ತೂಕದಲ್ಲಿ ಏರಿಕೆಯಾಗುತ್ತದಾ ಎಂಬ ಸಂಶಯ ನಿಮ್ಮಲ್ಲಿ ಬರಬಹುದು. ಹೀಗೆ ತೂಕ ಹೆಚ್ಚಾಗಲು ಸಾಮಾನ್ಯವಾಗಿ ಕೆಲವು ಕಾರಣಗಳಿವೆ.

2007ರಲ್ಲಿ ನಡೆದ ಸಂಶೋಧನಾ ವರದಿ ಪ್ರಕಾರ, ಜೋಡಿಯಲ್ಲಿ ಒಬ್ಬರ ತೂಕ ಹೆಚ್ಚಿದ್ದರೆ, ಇನ್ನೊಬ್ಬರ ತೂಕವೂ ಹೆಚ್ಚಾಗುವ ಸಾಧ್ಯತೆ ಶೇ.37ರಷ್ಟು ಹೆಚ್ಚಿರುತ್ತದೆ. ಕಾರಣ ಇಬ್ಬರಲ್ಲಿ ಒಬ್ಬರ ನಡತೆ, ಆಹಾರ ಕ್ರಮ ಮತ್ತೊಬ್ಬರ ಆಹಾರಕ್ರಮದ ಮೇಲೆ ಪರಿಣಾಮ ಬೀರುತ್ತದೆ. ಸಂಗಾತಿಯೊಬ್ಬರು ಹೆಚ್ಚು ಕ್ಯಾಲರಿಯ ಆಹಾರಗಳನ್ನು ಸೇವಿಸುವವರಾಗಿದ್ದರೆ, ಆಯಿಲ್ ಫುಡ್,ಸ್ನ್ಯಾಕ್ಸ್‌, ನಾನ್ವೆಜ್, ಸಹಜವಾಗಿಯೇ ಅದನ್ನು ಇನ್ನೊಬ್ಬ ಸಂಗಾತಿಯೂ ಅನುಸರಿಸತೊಡಗುತ್ತಾರೆ. ಅಂದರೆ ಜೊತೆಗೆ ಸೇರುವ, ಸಮಯ ಕಳೆವ, ಸಿನೆಮಾ ಥಿಯೇಟರ್‌ ಭೇಟಿ ಇತ್ಯಾದಿಗಳ ನೆಪದಲ್ಲಿ ಸಹಜವಾಗಿಯೇ ಹೆಚ್ಚು ಕ್ಯಾಲರಿ ಹೊಟ್ಟೆಗೆ ಹೋಗುತ್ತದೆ. ಅನಾರೋಗ್ಯಕರ ಆಹಾರ ಪದ್ಧತಿ ಹೆಚ್ಚಾಗುತ್ತದೆ, ಪರಿಣಾಮ ತೂಕವೂ ಹೆಚ್ಚುತ್ತದೆ. ಅದಲ್ಲದೆ ಅವರ ಜೊತೆಗೆ ಎರಡು ತುತ್ತು ತಿಂದರು ಕೂಡಾ, ನಿಧಾನವಾಗಿ ಇಬ್ಬರೂ ಒಂದೇ ಅಭ್ಯಾಸವುಳ್ಳವರಾಗಿ ಬದಲಾಗುತ್ತಾರೆ.

ಇನ್ನು ಪ್ರೀತಿಯಲ್ಲಿ ಬಿದ್ದಾಗ ಜೊತೆಯಲ್ಲಿ ಸಮಯ ಕಳೆಯುವ ನೆಪದಲ್ಲಿ ಗುಂಡು ಪಾರ್ಟಿಗಳೂ ಹೆಚ್ಚಾಗುತ್ತವೆ. ಆಗಾಗ ಸೇರಿಕೊಂಡು ಆಲ್ಕೋಹಾಲ್‌ ಸೇವಿಸುವುದು ಇತ್ಯಾದಿ ಚಟುವಟಿಕೆಗಳಿಂದ ಸಹಜವಾಗಿಯೇ ತೂಕ ಏರುತ್ತದೆ.

ಇನ್ನು ಜೊತೆಯಾಗಿ ಕಾಲ ಕಳೆಯುವ ಸಲುವಾಗಿ ಹೊರಗಿನಿಂದ ಬಗೆ ಬಗೆಯ ಫುಡ್ ಆರ್ಡರ್ ಮಾಡಿ ಹರಟೆ ಹೊಡೆಯುವುದು ಇದರಿಂದ ನಿಮ್ಮ ದೇಹ ಹೆಚ್ಚು ಜಡತ್ವಕ್ಕೆ ಜಾರುತ್ತವೆ ಇದರಿಂದ ದೇಹದಲ್ಲಿ ಫ್ಯಾಟ್ ಸಹಜವಾಗಿ ಹೆಚ್ಚುತ್ತದೆ.

ಇದನ್ನೂ ಓದಿ: Neetu Vanajakshi: ನನ್ನ ಖಾಸಗಿ ಅಂಗ ನೋಡಲು ಮುಜುಗರ ಆಗ್ತಿತ್ತು! ನಾನು ಅವನಲ್ಲ ಅವಳು ಆಗೋದು ಅಷ್ಟೊಂದು ಸುಲಭವಾಗಿರಲಿಲ್ಲ !

Leave A Reply

Your email address will not be published.