Karnataka Government: ಸಿದ್ದು ಸರ್ಕಾರಕ್ಕೆ ಒಂದು ವರ್ಷ ಆಯ್ತು, ಲೋಕಸಭಾ ಚುನಾವಣೆಯೂ ಮುಗಿಯಿತು – ರದ್ದಾಗುತ್ತಾ 5 ಗ್ಯಾರಂಟಿ ?!

Karnataka Government: ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ(Karnataka Government) ಅಧಿಕಾರಕ್ಕೆ ಬಂದು ಇಂದಿಗೆ ಒಂದು ವರ್ಷ ಕಂಪ್ಲೀಟ್ ಆಗಿದೆ. ಈ ನಡುವೆ ರಾಜ್ಯದಲ್ಲಿ ಲೋಕಸಭಾ ಚುನಾವಣೆ(Parliament Election) ಕೂಡ ಮುಕ್ತಾಯವಾಗಿದೆ. ಹೀಗಾಗಿ ಹಿಂದೆ ಸದ್ದು ಮಾಡಿದ್ದ ಗ್ಯಾರಂಟಿ ರದ್ದು ವಿಚಾರ ಮತ್ತೆ ಮುನ್ನಲೆಗೆ ಬಂದಿದೆ.

ಇದನ್ನೂ ಓದಿ: Driving License: ವಾಹನ ಸವಾರರಿಗೆ ಮಹತ್ವದ ಮಾಹಿತಿ; ‘ಡ್ರೈವಿಂಗ್ ಲೈಸೆನ್ಸ್‌’ ನಿಯಮದಲ್ಲಿ ಆಗಲಿದೆ ಈ ಮಹತ್ತರ ಬದಲಾವಣೆ!

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬರುತ್ತಿದ್ದಂತೆ ತಾನು ಮಾತು ಕೊಟ್ಟಂತೆ ಐದು ಗ್ಯಾರಂಟಿಗಳಾದ(Congress Guarantees ) ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ ಯೋಜನೆ, ಯುವ ನಿಧಿ ಹಾಗೂ ಅನ್ನ ಭಾಗ್ಯ ಯೋಜನೆಗಳನ್ನು ಜಾರಿಗೊಳಿಸಿದೆ. ಆರಂಭದಲ್ಲಿ ಇವುಗಳ ಕುರಿತು ಅಪಸ್ವರ, ಟೀಕೆ-ಟಿಪ್ಪಣಿಗಳು ಎದುರಾದರು ನಂತರ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಆದರೆ ಸರ್ಕಾರ ಮಾತ್ರ ಇವುಗಳಿಗೆ ಹಣ ಹೊಂದಿಸುವ ಸಲುವಾಗಿ ಹೆಣಗಾಡುತ್ತಿದೆ. ದಿನನಿತ್ಯದ ವಸ್ತುಗಳ, ಮದ್ಯದ ದರವನ್ನು ಏರಿಸಿ ಹೇಗೋ ಒಂದು ವರ್ಷ ಯಶಸ್ವಿಯಾಗಿ ಗ್ಯಾರಂಟಿಗಳನ್ನು ತಲುಪಿಸಿದೆ. ಆದರೆ ಇನ್ನು ಮುಂದೆ ಏನು ಅನ್ನುವುದೇ ಯಕ್ಷ ಪ್ರಶ್ನೆ!!

ಇದನ್ನೂ ಓದಿ: Pension Scheme: ತಿಂಗಳಿಗೆ 1 ಲಕ್ಷ ರೂಪಾಯಿ ಪಿಂಚಣಿ ಪಡೆಯಿರಿ! ಇಲ್ಲಿದೆ ಸಂಪೂರ್ಣ ವಿವರ!

ಹೌದು, ಕಾಂಗ್ರೆಸ್ ಜಾರಿಗೊಳಿಸಿದ ಪಂಚ ಗ್ಯಾರಂಟಿಗಳು ಜಾರಿಯಲ್ಲಿರುವುದು ಏನಿದ್ದರೂ ಕೇವಲ ಒಂದು ವರ್ಷ, ಅದೂ ಕೂಡ ಲೋಕಸಭಾ ಚುನಾವಣೆ ಮುಗಿಯುವವರೆಗೂ ಮಾತ್ರ ಎಂಬ ವಿಚಾರವೊಂದು ಭಾರೀ ಸದ್ದು ಮಾಡಿತ್ತು. ವಿಧಾನಸಭಾ ಚುನಾವಣೆಯಲ್ಲಿ 135 ಸೀಟ್ ಗಳ ಭರ್ಜರಿ ಜಯ ಗಳಿಸಿದ ಕಾಂಗ್ರೆಸ್ ಗೆ ಲೋಕಸಭಾ ಚುನಾವಣೆಯಲ್ಲಿ ಅದೇ ರೀತಿಯ ಗೆಲುವು ಪಡೆಯುವುದು ತುಂಬಾ ಮುಖ್ಯ, ಪ್ರತಿಷ್ಠೆಯಾಗಿತ್ತು. ಹೀಗಾಗಿ ಗ್ಯಾರಂಟಿ ಅದಕ್ಕೆ ಪೂರಕವಾಗಿದೆ. ಬಳಿಕ ಯಾವುದಾದರು ನೆಪ ಒಡ್ಡಿ ಅದನ್ನು ಬಂದ್ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ಜೊತೆಗೆ ಕೆಲವು ಕಾಂಗ್ರೆಸ್ ನಾಯಕರು, ಶಾಸಕರು, ಮಂತ್ರಿ ಮಹಾಶಯರು ಚುನಾವಣಾ ಪ್ರಚಾರದ ವೇಳೆ MP ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸದಿದ್ದರೆ ಗ್ಯಾರಂಟಿಗಳನ್ನು ಬಂದ್ ಮಾಡುತ್ತೇವೆ ಎಂದು ಗಂಟಾಘೋಷವಾಗಿ ನುಡಿದಿದ್ದರು. ಇದೆಲ್ಲದರ ಆಧಾರದ ಮೇಲೆ ಹಾಗೂ ಇದೀಗ ಕಾಂಗ್ರೆಸ್ ಸರ್ಕಾರಕ್ಕೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಈ ಗ್ಯಾರಂಟಿ ಬಂದ್ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ.

ಈ ವಿಚಾರ ಇದೀಗ ಮುನ್ನಲೆಗೆ ಬಂದ ಬಳಿಕ ಸಿಎಂ ಸಿದ್ದರಾಮಯ್ಯನವರು ಲೋಕಸಭಾ ಚುನಾವಣೆ ಬಳಿಕ ಐದು ಗ್ಯಾರೆಂಟಿಗಳು ಕೊನೆಗೊಳ್ಳುತ್ತವೆಯೇ? ಎಂಬುದರ ಬಗ್ಗೆ ಮಾತನಾಡಿದ್ದಾರೆ. ಹಾಗಿದ್ರೆ ಸಿದ್ದರಾಮಯ್ಯ ಹೇಳಿದ್ದೇನು? ಎಂಬುದರ ಬಗ್ಗೆ ನಾವು ಗಮನ ಹರಿಸೋಣ.

ಸಿದ್ದರಾಮಯ್ಯ ಹೇಳಿದ್ದೇನು?

ಚುನಾವಣೆ ಮುಗಿದ ಬಳಿಕ ಉಚಿತ ಯೋಜನೆ ಬಂದ ಎಂಬ ಆರೋಪಗಳಿವೆ. ಇದಕ್ಕೆ ಉತ್ತರಿಸಿರುವ ಸಿಎಂ ಸಿದ್ದರಾಮಯ್ಯ ಅವರು, ಇದೆಲ್ಲ ಬಿಜೆಪಿ ಊಹೆಗಳಾಗಿದ್ದು, ಒಪ್ಪಲು ಅವರು ನಿರಾಕರಿಸಿದರು. ಲೋಸಕಭಾ ಚುನಾವಣೆ ನಂತರವು ಕಾಂಗ್ರೆಸ್‌ ನ 5 ಗ್ಯಾರೆಂಟಿ ಯೋಜನೆಗಳನ್ನು ನಮ್ಮ ಸರ್ಕಾರ ಮುಂದುವರಿಯುತ್ತವೆ. ಸರ್ಕಾರದ ವರ್ಷದ ಸಂಭ್ರಮ, ಸಾಧನೆಯನ್ನು ದೊಡ್ಡ ಕಾರ್ಯಕ್ರಮ ಮಾಡಿ ರಾಜ್ಯದ ಜನರಿಗೆ ತಿಳಿಸಬೇಕಿತ್ತು. ಆದರೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದೆ. ಹೀಗಾಗಿ ಇದು ಸಾಧ್ಯವಾಗಿಲ್ಲ. ಗ್ಯಾರಂಟಿಗಳ ಸ್ಥಗಿತ ಕುರಿತು ಯಾರೂ ಚಿಂತಿಸಬೇಡಿ, ನಮ್ಮ ಸರ್ಕಾರ ಇರುವವರೆಗೂ ಅವು ಮುಂದಿವರಿಯುತ್ತವೆ ಎಂದು ಸಿಎಂ ತಿಳಿಸಿದ್ದಾರೆ.

ಇನ್ನು ಕಾಂಗ್ರೆಸ್ ಸರ್ಕಾರ ಕೂಡ ಕೂಡ ‘ಗ್ಯಾರೆಂಟಿ ಯೋಜನೆಗಳ ಮೂಲಕ ಕೇವಲ ಒಂಬತ್ತೆ ತಿಂಗಳಲ್ಲಿ ಕರ್ನಾಟಕದ 4.6 ಕೋಟಿ ಜನರನ್ನು ಕಾಂಗ್ರೆಸ್ ತಲುಪಿದೆ. ಇದರಿಂದ ಜನರು ಕೊಳ್ಳುವ ಶಕ್ತಿ ಹೆಚ್ಚಾಗಿದೆ. ಆರ್ಥಿಕತೆ ಸುಧಾರಿಸಿದೆ ಎಂದು ಹೇಳಿಕೊಂಡಿದೆ.

Leave A Reply

Your email address will not be published.