Tulasi Plant: ತುಳಸಿಯನ್ನು ದಿನದ ಈ ಸಮಯದಲ್ಲಿ ಯಾವ ಕಾರಣಕ್ಕೂ ಮುಟ್ಟದಿರಿ!

Tulasi Plant: ಹಿಂದೂ ಸಂಪ್ರದಾಯ ಪ್ರಕಾರ ಪ್ರತೀ ಮನೆಗಳಲ್ಲಿ ತುಳಸಿ ಗಿಡವನ್ನು (tulasi plant ) ನೆಡುವುದು ಸಾವಿರಾರು ವರ್ಷಗಳ ಹಿಂದಿನಿಂದ ಬಂದ ಸಂಸ್ಕೃತಿ. ಅದಲ್ಲದೆ ತುಳಸಿ ಗಿಡವನ್ನು ಹಿಂದೂ ಧರ್ಮದಲ್ಲಿ ಮಂಗಳಕರವೆಂದು ಪರಿಗಣಿಸಲಾಗಿದೆ. ಆದರೆ ತುಳಸಿ ಗಿಡದ ವಿಚಾರದಲ್ಲಿ ಕೆಲವೊಂದು ತಪ್ಪುಗಳು ಮಾಡುವುದರಿಂದ ಅದು ಜೀವನದ ಮೇಲೆ ಕೆಲವೊಂದು ಸಮಸ್ಯೆಗಳಿಗೆ ದಾರಿ ಮಾಡಿ ಕೊಡುತ್ತದೆ. ಆದ್ದರಿಂದ ಧಾರ್ಮಿಕ ಗ್ರಂಥಗಳ ಪ್ರಕಾರ, ತುಳಸಿ ಯನ್ನು ಸೂರ್ಯಾಸ್ತದ ನಂತರ ತುಳಸಿಯನ್ನು ಮುಟ್ಟಬಾರದು ಎನ್ನಲಾಗಿದೆ.

ಇದನ್ನೂ ಓದಿ: ಗ್ಯಾಸ್​ ಬರ್ನರ್​ ನಲ್ಲಿ ಜಿಡ್ಡು ​ತುಂಬಿದ್ರೆ ನಿಮಿಷದಲ್ಲೇ ಈ ರೀತಿ ಕ್ಲೀನ್ ಮಾಡಿ ! 

ಹೌದು, ಸೂರ್ಯ ಮುಳುಗಿದ ನಂತರ ತುಳಸಿಯನ್ನು ಕೀಳಬಾರದು. ಇದಕ್ಕೆ ಕಾರಣ ಏನೆಂದರೆ, ರಾತ್ರಿ ವೇಳೆ ತುಳಸಿಯನ್ನು ಕಿತ್ತರೆ ಲಕ್ಷ್ಮೀದೇವಿ ಕೋಪಗೊಂಡು ಮನೆ ಬಿಟ್ಟು ಹೋಗುತ್ತಾಳೆ ಎಂಬ ನಂಬಿಕೆ ಇದೆ.

ಇನ್ನು ತುಳಸಿಯನ್ನು ಸ್ಪರ್ಶಿಸಿದರೆ ಆರ್ಥಿಕ ಸಂಕಷ್ಟ ಉಂಟಾಗುವ ಸಾಧ್ಯತೆ ಇದೆ. ಅಷ್ಟೇ ಅಲ್ಲ, ತುಳಸಿಯನ್ನು ಕೊಳಕು ಕೈಗಳಿಂದ ಮುಟ್ಟುವುದಾಗಲೀ, ಕೊಳಕು ನೀರನ್ನು ಹಾಕುವುದಾಗಲೀ ಅಶುಭವಾಗಿದೆ. ಮತ್ತು ಜೀವನದಲ್ಲಿ ನಿಮ್ಮ ಆತ್ಮೀಯರೊಂದಿಗೆ ವೈಷಮ್ಯ ಹೆಚ್ಚಾಗುತ್ತದೆ, ಜೊತೆಗೆ ಕುಟುಂಬದ ಸದಸ್ಯರ ನಡುವೆ ಜಗಳ ಉಂಟಾಗುತ್ತದೆ ಎನ್ನಲಾಗಿದೆ. ಒಟ್ಟಿನಲ್ಲಿ ಪವಿತ್ರತೆ ಗೆ ಹೆಸರಾದ ತುಳಸಿಯನ್ನು ಸೂರ್ಯ ಮುಳುಗಿದ ನಂತರ ಮುಟ್ಟಿದರೆ ಶ್ರೇಯಸಲ್ಲ ಎನ್ನುವುದು ಪುರಾತನ ಕಾಲದಿಂದಲೂ ಬಲವಾಗಿ ನಂಬಿಕೊಂಡು ಬಂದ ನಂಬಿಕೆ ಆಗಿದೆ.

ಇದನ್ನೂ ಓದಿ: ಇಂತಹ ವಾಹನಗಳಿಗೆ HSRP ಅಳವಡಿಕೆಯಿಂದ ಸಿಗಲಿದೆ ರಿಯಾಯಿತಿ ?

Leave A Reply

Your email address will not be published.