Egg price hike :ಅಂಗನವಾಡಿ ಮಕ್ಕಳು, ಗರ್ಭಿಣಿಯರು, ಬಾಣಂತಿಯರಿಗೆ ಬಿಗ್ ಶಾಕ್ – ಮೊಟ್ಟೆ ಪೂರೈಕೆ ಸ್ಥಗಿತ !

Karnataka news Egg price hike supplies stopped to anganawadi children and pregnants

Egg price hike: ರಾಜ್ಯದಲ್ಲಿರುವ ಅಂಗನವಾಡಿಗಳಿಗೆ ಏಕಾಏಕಿ ಮೊಟ್ಟೆ ಪೂರೈಕೆ ಸ್ಥಗಿತಗೊಂಡಿದೆ. ಹಾಗಾಗಿ ರಾಜ್ಯದ 65, 911 ಅಂಗನವಾಡಿ ಕೇಂದ್ರಗಳ ಸುಮಾರು 41 ಲಕ್ಷಕ್ಕಿಂತಲೂ ಹೆಚ್ಚು ಮಕ್ಕಳು ಮತ್ತು ಮಾತೃಪೂರ್ಣ ಯೋಜನೆ ಅಡಿ ಪೌಷ್ಟಿಕ ಆಹಾರ ಪಡೆಯುತ್ತಿರುವ ಗರ್ಭಿಣಿ ಮಹಿಳೆಯರು ಬಾಣಂತಿಯರಿಗೆ ಮೊಟ್ಟೆ ವಿತರಣೆಯ ತೊಂದರೆ ಉಂಟಾಗಿದೆ. ಇದಕ್ಕೆಲ್ಲ ಕಾರಣ ಆದದ್ದು ಏರಿಕೆಯಾಗಿರುವ ಮೊಟ್ಟೆ ದರ(Egg price hike).

ಮೊಟ್ಟೆಯಾದರೆ ಏರಿಕೆಯಾಗಿರುವ ಕಾರಣದಿಂದ ಕರ್ನಾಟಕ ಸಹಕಾರ ಕೋಳಿ ಒಕ್ಕೂಟ ಹಾಗೂ ಗುತ್ತಿಗೆದಾರರು ಅಂಗನವಾಡಿಗೆ ಮೊಟ್ಟೆ ಮಾಡುವುದನ್ನು ಸ್ಥಗಿತ ಮಾಡಿದ್ದಾರೆ. ಏರಿತಾ ಮೊಟ್ಟೆಯ ದರ ಮತ್ತು ಅದರ ಸಾಗಾಣಿಕ ವೆಚ್ಚ ಕಾರಣದಿಂದ ಮೊಟ್ಟೆ ಪೂರೈಸುವವರು ಸಂಕಷ್ಟಕ್ಕೆ ಸಿಲುಕಿದ್ದು ಹಳೆಯ ನಿಗದಿಯಾದ ದರದಲ್ಲಿ ಮೊಟ್ಟೆ ಪೂರೈಕೆ ಮಾಡಲು ಆಗುತ್ತಿಲ್ಲ ಅದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಕೋಳಿ ಒಕ್ಕೂಟ ಮತ್ತು ಗುತ್ತಿಗೆದಾರರು ಒಲವೇ ಮಾಡಿಕೊಂಡಿದ್ದರು. ಆದರೂ ಅವರಿಂದ ಪೂರಕ ಪ್ರತಿಕ್ರಿಯೆ ಮತ್ತು ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಮೊಟ್ಟೆ ಪೂರೈಕೆ ಸ್ಥಗಿತ ಮಾಡಲಾಗಿದೆ.

ಈ ಹಿಂದೆ ಪ್ರತಿ ಮೊಟ್ಟೆಗೆ 5.75 ರಿಂದ 5.80 ರೂ.ಗಳಲ್ಲಿ ನೀಡಲಾಗುತ್ತಿತ್ತು. ಆದರೆ ಇತ್ತೀಚೆಗೆ ಮೊಟ್ಟೆಯ ಬೆಲೆ 6:30 ಇಂದ 7:30 ರೂಪಾಯಿವರೆಗೆ ಏರಿಕೆಯಾಗಿ ಪೂರೈಕೆ ಮಾಡುವಲ್ಲಿ ಪ್ರತಿ ಮೊಟ್ಟೆಗೆ 1 ರಿಂದ 1.25 ರೂಪಾಯಿ ನಷ್ಟ ಉಂಟಾಗುತ್ತಿದೆ. ಬಹುಕಾಲ ಈ ನಷ್ಟವನ್ನು ಧರಿಸಲು ಆಗುತ್ತಿಲ್ಲ ಎಂದು ಕೋಳಿ ಒಕ್ಕೂಟ ಮತ್ತು ಗುತ್ತಿಗೆದಾರರು ಮನವಿ ಮಾಡಿದ್ದರು. ಆದರೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಹಾಗಾಗಿ ಇದೀಗ ಗುತ್ತಿಗೆದಾರರು ಮೊಟ್ಟೆ ಸರಬರಾಜು ನಿಲ್ಲಿಸಿದ್ದಾರೆ. ಈಗ ಎಚ್ಚೆತ್ತುಕೊಂಡ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಸ್ಥಳೀಯವಾಗಿ ಮೊಟ್ಟೆ ಖರೀದಿಸಿ ವಿತರಿಸಲು ಅಂಗನವಾಡಿ ಕಾರ್ಯಕರ್ತರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಇಂದು ಈ ರಾಶಿಯವರಿಗೆ ಹೊಸ ವಾಹನ ಖರೀದಿ ಭಾಗ್ಯ, ಸಮಾಜದಲ್ಲಿ ಕೀರ್ತಿ ಪತಾಕೆ ಎತ್ತರಕ್ಕೆ ಹಾರುತ್ತೆ!!!

Leave A Reply

Your email address will not be published.