Lunar eclipse: ಚಂದ್ರ ಗ್ರಹಣ ಬಳಿಕ, ಇಂದು ತಕ್ಷಣ ಈ 8 ಕೆಲಸಗಳನ್ನು ಮಾಡಿ, ಕೆಟ್ಟ ದೃಷ್ಟಿಯಿಂದ ಬಚಾವ್ ಆಗಿ !

Astrology news Lunar eclipse 2023 After the eclipse do these 8 things immediately today

Lunar eclipse: ಹಿಂದೂ ಧರ್ಮದಲ್ಲಿ ಗ್ರಹಣದ ಬಗ್ಗೆ ತನ್ನದೇ ಆದ ಅನೇಕ ನಂಬಿಕೆಗಳಿವೆ. ಗ್ರಹಣದ ಸಮಯದಲ್ಲಿ ಅನೇಕ ಕಾರ್ಯಗಳನ್ನು ನಿಷೇಧಿಸಲಾಗುತ್ತದೆ. ಮತ್ತು ಗ್ರಹಣ ಮುಗಿದ ಮೇಲೆ ಕೆಲವು ಅಗತ್ಯ ಕಾರ್ಯಗಳನ್ನು ಮಾಡಲು ಶಾಸ್ತ್ರಗಳಲ್ಲಿ ಸೂಚಿಸಲಾಗಿದೆ. ಈಗಾಗಲೇ ಗ್ರಹಣ (Lunar eclipse) ಮುಗಿದಿದೆ. ಹಾಗಾಗಿ ಗ್ರಹಣ ಮುಗಿದ ಬಳಿಕ ಮಾಡಬಹುದಾದ ಅಂತಹ ಪ್ರಮುಖ ಕೆಲಸಗಳು ಯಾವುವು ಎಂದು ನೋಡೋಣ.

ಗ್ರಹಣ ಮುಗಿದಿದೆ. ತಕ್ಷಣ ಈ ಕೆಲಸ ಮಾಡಿ.
1. ಗ್ರಹಣ ಬಿಟ್ಟ ತಕ್ಷಣ ಮೊದಲು ಮನೆಯನ್ನು ಸ್ವಚ್ಛಗೊಳಿಸಬೇಕು. ಗುಡಿಸಿ ಒರೆಸಿದರೆ ಕ್ಷುದ್ರ ಶಕ್ತಿಗಳು ನಾಶವಾಗಿ ಹೋಗುತ್ತವೆ. ಹೀಗೆ ಮಾಡುವುದರಿಂದ ಗ್ರಹಣದ ನಕಾರಾತ್ಮಕ ಶಕ್ತಿ ನಿವಾರಣೆಯಾಗುತ್ತದೆ ಎಂದು ನಂಬಲಾಗಿದೆ.
2. ಚಂದ್ರಗ್ರಹಣ ಮತ್ತು ಸೂರ್ಯಗ್ರಹಣಗಳು ಎಲ್ಲಾ ಜೀವಿಗಳ ಮೇಲೆ ಪರಿಣಾಮ ಬೀರುತ್ತದೆ. ಗ್ರಹಣ ಮುಗಿದ ತಕ್ಷಣ ಸ್ನಾನ ಮಾಡಬೇಕು.
3. ಸ್ನಾನದ ನಂತರ ತೀರ್ಥ ಅಥವಾ ಗಂಗಾಜಲದಿಂದ ಮನೆ, ಪೂಜಾ ಸ್ಥಳವನ್ನು ಶುದ್ಧೀಕರಿಸಿ. ಎಲ್ಲಾ ದೇವ-ದೇವತೆಗಳ ವಿಗ್ರಹಗಳ ಮೇಲೆ ಗಂಗಾಜಲವನ್ನು ಸಿಂಪಡಿಸಿ.
4. ಮನೆಯ ತುಳಸಿ ಗಿಡಕ್ಕೆ ತೀರ್ಥ ಪ್ರೋಕ್ಷಣೆ ಮಾಡಿ.
5. ಗ್ರಹಣ ಸಂದರ್ಭ ಮನೆಯಲ್ಲಿ ತಯಾರಿಸಿದ ಆಹಾರ ಇಲ್ಲದಿದ್ದರೆ ಕ್ಷೇಮ. ಒಂದು ವೇಳೆ ಇದ್ದರೆ, ಅದರ ಮೇಲೆ ತುಳಸಿ ದಳ ಇರಿಸಿ. ಗ್ರಹಣ ಮುಗಿದ ನಂತರ ಆಹಾರ ಪದಾರ್ಥಗಳ ಮೇಲೆ ಇಟ್ಟಿರುವ ತುಳಸಿ ದಳ ತೆಗೆಯಿರಿ. ತುಳಸಿ ದಳವು ಒಂದು ಪ್ರಮುಖ ಔಷಧೀಯ ಸಸ್ಯವಾಗಿದ್ದು ಗ್ರಹಣದ ಪರಿಣಾಮವನ್ನು ಸ್ವತಃ ಹೀರಿ ಪಡೆದುಕೊಳ್ಳುತ್ತದೆ ಎಂದು ನಂಬಲಾಗಿದೆ.
6. ಕೊನೆಗೆ ಆಹಾರ ಪದಾರ್ಥಗಳನ್ನು ಗಂಗಾಜಲದಿಂದ ಚಿಮುಕಿಸಿ ನಂತರವೇ ಆಹಾರವನ್ನು ಸೇವಿಸಿ.
7. ದೇವಸ್ಥಾನಗಳಿಗೆ ಅಥವಾ ಮನೆಯಲ್ಲಿ ಪೂಜೆ ಮಾಡಿ.
8. ಗ್ರಹಣ ಬಳಿಕ ದಾನ ಧರ್ಮಗಳನ್ನು ಮಾಡಿದರೆ ಸತ್ಪಲ.
ಚಂದ್ರ ಗ್ರಹಣವನ್ನು ಖಗೋಳ ಘಟನೆ ಎಂದkರೂ, ಅದರಿಂದ ಭೂಮಿಯ ಮೇಲೆ ಕಿರಣಗಳ ರೂಪದಲ್ಲಿ ಪ್ರಭಾವ ಇದೆ ಎನ್ನಲಾಗಿದೆ. ಸೂರ್ಯ, ಭೂಮಿ ಮತ್ತು ಚಂದ್ರರು ನೇರ ರೇಖೆಯಲ್ಲಿ ಬಂದಾಗ ಚಂದ್ರಗ್ರಹಣ ಸಂಭವಿಸುತ್ತದೆ. ಚಂದ್ರನು ಭೂಮಿಯ ನೆರಳಿನಿಂದ ಸಂಪೂರ್ಣವಾಗಿ ಆವರಿಸಲ್ಪಡುತ್ತಾನೆ. ಸೂರ್ಯನ ಬೆಳಕು ಸ್ವಲ್ಪ ಸಮಯದವರೆಗೆ ಚಂದ್ರನನ್ನು ತಲುಪುವುದಿಲ್ಲ. ಇದನ್ನು ಚಂದ್ರಗ್ರಹಣ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ: ಅಂಗನವಾಡಿ ಮಕ್ಕಳು, ಗರ್ಭಿಣಿಯರು, ಬಾಣಂತಿಯರಿಗೆ ಬಿಗ್ ಶಾಕ್ – ಮೊಟ್ಟೆ ಪೂರೈಕೆ ಸ್ಥಗಿತ !

Leave A Reply

Your email address will not be published.