Pavitra Jayaram: ”ಪವಿತ್ರಾ ಹುಟ್ಟುಹಬ್ಬಕ್ಕೆ ಹೋಗುತ್ತಿದ್ದೇನೆ” ಎಂದು ಪೋಸ್ಟ್ ಮಾಡಿ ನಟಿ Pavithra Jayaram ಗೆಳೆಯ ಚಂದು ಆತ್ಮಹತ್ಯೆ !

Hyderabad: ವಾರಗಳ ಹಿಂದೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ ನಟಿ ಪವಿತ್ರಾ ಜಯರಾಮ್ ಸಾವಿನ ಬೆನ್ನಲ್ಲೇ ಆಕೆಯ ಗೆಳೆಯ ಚಂದು ಕೂಡ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇದನ್ನೂ ಓದಿ: Char Dham Yatra: ಚಾರ್ ಧಾಮ್ ಯಾತ್ರಾರ್ಥಿಗಳಿಗೆ ಸಂತಸದ ಸುದ್ದಿ : ಇನ್ನಷ್ಟು ದಿನ ವಿಐಪಿ ದರ್ಶನ ನಿಷಿದ್ಧ : ಸೂಚನೆ ಹೊರಡಿಸಿದ ಉತ್ತರಖಂಡ ಸರ್ಕಾರ

ಅಂದು ಅಪಘಾತದ ಸಂದರ್ಭ ನಟಿ ಪವಿತ್ರಾ ಜಯರಾಮ್ ಜೊತೆಗಿದ್ದ ಆಕೆಯ ಆತ್ಮೀಯ ಗೆಳೆಯ ಚಂದು Chandu Suicide) ಇಂದು ಹೈದರಾಬಾದ್ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಪವಿತ್ರಾ ಜಯರಾಮ್ ಜೊತೆ ಚಂದುರವರು ಆಪ್ತರಾಗಿದ್ದರು. ಪವಿತ್ರಾ ಜಯರಾಮ್ ನಿಧನದ ಬಳಿಕ ತೀವ್ರ ದುಃಖಕ್ಕೆ ಒಳಗಾಗಿದ್ದ ಚಂದು ಅವರು ಹೈದರಾಬಾದ್ನಲ್ಲಿ ಆತ್ಮಹತ್ಯೆ ಮಾಡಿದ್ದಾರೆ. ಇದೀಗ ತೆಲುಗಿನ ಹಲವು ಧಾರಾವಾಹಿಗಳಲ್ಲಿ ನಟ ಚಂದು ನಟಿಸುತ್ತಿದ್ದು, ಕೆಲ ಧಾರಾವಾಹಿಗಳಲ್ಲಿ ಚಂದು ಜತೆ ಪವಿತ್ರಾ ಕೂಡಾ ನಟಿಸಿದ್ದರು. ನಟಿಯ ಸಾವಿನ ಬಳಿಕ ಹೈದರಾಬಾದ್ ನ ಮಣಿಕೊಂಡದಲ್ಲಿರುವ ಮನೆಯಲ್ಲಿ ಚಂದು ಇದ್ದು, ನಿನ್ನೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ಇದನ್ನೂ ಓದಿ: Minor Girl Assaulted: ಮನೆಗೆ ಹೋಗುತ್ತಿದ್ದ ಬಾಲಕಿಯೊಂದಿಗೆ ವ್ಯಕ್ತಿಯಿಂದ ಅನುಚಿತ ವರ್ತನೆ : ಬಾಲಕಿ ಕಿರುಚಾಟಕ್ಕೆ ಹೆದರಿ ದುಷ್ಕರ್ಮಿ ಪರಾರಿ : ವಿಡಿಯೋ ವೈರಲ್

ಚಂದ್ರು ವಿವಾಹಿತರಾಗಿದ್ದರು. 2015ರಲ್ಲಿ ಶಿಲ್ಪಾರನ್ನು ಪ್ರೀತಿಸಿ ಚಂದು ಮದುವೆಯಾಗಿದ್ದರು ಮತ್ತು ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ನಟಿ ಪವಿತ್ರಾ ಜಯರಾಮ್ ಅವರ ಸಾವಿನಿಂದ ಮನನೊಂದು ಚಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಘಟನೆ ಹೈದರಾಬಾದ್ ನ ನಾರಸಿಂಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಹುಟ್ಟುಹಬ್ಬಕ್ಕೆ ಆಹ್ವಾನಿಸಿದ್ದ ನಟಿ ಪವಿತ್ರ ಜಯರಾಮ್

ಮೂಲಗಳ ಪ್ರಕಾರ ಚಂದು ಆತ್ಮಹತ್ಯೆಗೂ ಮುನ್ನ ಪವಿತ್ರಾ ಹುಟ್ಟುಹಬ್ಬಕ್ಕೆ ಆಹ್ವಾನಿಸಿದ್ದರು. ‘ನಾ ಹೋಗುತ್ತಿದ್ದೇನೆ ‘ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಬಳಿಕ ಆತ್ಮಹತ್ಯೆಗೆ ಶರಣಾಗಿದ್ದರು. ರಸ್ತೆ ಅಪಘಾತದಲ್ಲಿ ಟೇಏರ್ಇಕ್ಒಲ್ಲುವ ಮುನ್ನ ನಟಿ ಪವಿತ್ರ ಜಯರಾಮ್ ತಮ್ಮ ಜನ್ಮದಿನಾಚರಣೆಗೆ ಚಂದುರನ್ನು ಆಹ್ವಾನಿಸಿದ್ದರು.

2 ದಿನ ಕಾಯಿ ಎಂದು ಪೋಸ್ಟ್ ಹಾಕಿದ್ದ ಚಂದು

ಚಂದು ತಮ್ಮ ಮತ್ತೊಂದು ಪೋಸ್ಟ್ ನಲ್ಲಿ, ” ದಯವಿಟ್ಟು 2 ದಿನ ಕಾಯಿ” ಎಂದು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಅವರ ಸ್ನೇಹಿತರು ಮತ್ತು ಫಾಲೋವರ್ ಗಳು ‘ಚಂದು ನಿಮ್ಮ ಯೋಚನೆಗಳು ಬೇರೆ ದಾರಿ ಹಿಡಿಯುತ್ತಿರುವಂತಿದೆ. ಧೈರ್ಯವಾಗಿರಿ’ ಎಂದು ಬುದ್ಧಿ ಹೇಳಿದ್ದಾರೆ. ಆದರೆ ಅಷ್ಟರಲ್ಲಾಗಲೇ ಚಂದು ಕೂಡ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇತ್ತೀಚೆಗೆ ಅವರು ಪವಿತ್ರಾ ಜಯರಾಮ್ ಜೊತೆ ಬೆಂಗಳೂರಿಗೆ ಬಂದಿದ್ದರು. ಸಿನಿಮಾವೊಂದಕ್ಕೆ ಸಹಿ ಮಾಡಿದ ಬಳಿಕ ಅವರು ಪುನಃ ಹೈದರಾಬಾದ್ಗೆ ಹಿಂದಿರುಗುವಾಗ ಕಾರು ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಚಂದುಗೆ ಪೆಟ್ಟಾಗಿತ್ತು. ಚಂದುಗೆ ಪೆಟ್ಟಾದ ಬಗ್ಗೆ ಗಾಬರಿಗೊಂಡ ಪವಿತ್ರಾ ಸಾವನ್ನಪ್ಪಿದ್ದರು. ಆ ದುರಂತದ ನೆನಪು ಮಾಸುವುದಕ್ಕೂ ಮುನ್ನವೇ ಚಂದು ನಿಧನರಾಗಿದ್ದಾರೆ.

Leave A Reply

Your email address will not be published.