Meat: ಮಟನ್‌ ಮಾಂಸದ ಹೆಸರಲ್ಲಿ ಗೋಲ್‌ಮಾಲ್‌! ಭಾರೀ ಮೋಸ, ಗ್ರಾಹಕರು ತಿಂದಿದ್ದು ಯಾವುದರ ಮಾಂಸ ಗೊತ್ತೇ? ಸೋಷಿಯಲ್‌ ಮೀಡಿಯಾದಲ್ಲಿ ಕೋಲಾಹಲ!!!

World news cat meat sold instead of mutton in Chinese slaughter house

Meat: ಟ್ರಕ್‌ನಲ್ಲಿ ಸಾಗಿಸಲಾಗುತ್ತಿದ್ದ ಒಂದು ಸಾವಿರ ಬೆಕ್ಕುಗಳನ್ನು ಪೊಲೀಸರು ರಕ್ಷಿಸಿರುವ ಘಟನೆಯೊಂದು ಚೀನಾದಲ್ಲಿ ನಡೆದಿದೆ. ಅವುಗಳನ್ನು ಕಡಿದು, ಅವುಗಳ ಮಾಂಸವನ್ನು ಹಂದಿ ಅಥವಾ ಕುರಿ ಮಾಂಸವಾಗಿ(mutton Meat)  ಮಾರಲಾಗುತ್ತದೆ ಎಂಬ ಸುದ್ದಿಯ ಆಧಾರದ ಮೇಲೆ ಪ್ರಾಣಿಗಳಿಗಾಗಿ ಕೆಲಸ ಮಾಡುವ ಸಂಸ್ಥೆಗಳ ದೂರಿನ ಮೇರೆಗೆ ಪೊಲೀಸರು ಕ್ರಮ ಕೈಗೊಂಡಿದ್ದು, ಬೆಕ್ಕುಗಳ ಜೀವ ಉಳಿಸಿದ್ದಾರೆ.

Meat

ಜೀವ ಉಳಿಸಿ ಬದುಕಿದ ಬೆಕ್ಕುಗಳನ್ನು ಪೊಲೀಸರು ಅವುಗಳ ಆಶ್ರಯ ಧಾಮಕ್ಕೆ ಕಳುಹಿಸಿದ್ದಾರೆ. ಅಲ್ಲದೆ ಈ ಪ್ರಕರಣದಿಂದ ಚೀನಿಯರಲ್ಲಿ ಆಹಾರ ಸುರಕ್ಷತೆಯ ಕಾಳಜಿ ಹೆಚ್ಚಾಗಿದೆ. ಪ್ರಾಣಿ ದಯಾ ಸಂಘದ ಪ್ರಕಾರ, 600 ಗ್ರಾಂ ಬೆಕ್ಕಿನ ಮಾಂಸದ ಬೆಲೆ 4.5 ಯುವಾನ್‌ ಎಂದು ಹೇಳುತ್ತಾರೆ. ಚೀನಿ ಪೊಲೀಸರಿಂದ ರಕ್ಷಿಸಲ್ಪಟ್‌ ಬೆಕ್ಕುಗಳನ್ನು ದಕ್ಷಿಣ ಪ್ರದೇಶಕ್ಕೆ ಸಾಗಿಸುವ ಉದ್ದೇಶ ಇದ್ದಿದ್ದು, ಅವುಗಳನ್ನು ಹಂದಿ ಮಾಂಸ ಮತ್ತು ಮಟಸ ಸಾಸೇಜ್‌ಗಳಾಗಿ ಗ್ರಾಹಕರಿಗೆ ನೀಡುವ ಉದ್ದೇಶ ಹೊಂದಲಾಗಿತ್ತು ಎನ್ನಲಾಗಿದೆ.

ರಕ್ಷಿಸಲ್ಪಟ್ಟ ಬೆಕ್ಕುಗಳು ದಾರಿ ತಪ್ಪಿ ಸಿಕ್ಕಿದೆ ಎಂದು ಹೇಳಲಾಗಿದೆ, ಆದರೆ ನೂರಾರು ಬೆಕ್ಕುಗಳು ನಿಜವಾಗಿ ಎಲ್ಲಿಂದ ಬಂದವು ಎಂಬುದು ಸ್ಪಷ್ಟವಾಗಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ, ಈ ವಿಷಯ ಬಹಿರಂಗವಾದ ನಂತರ ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ಜನರ ಕಾಮೆಂಟ್‌ಗಳ ಮಹಾಪೂರವೇ ಹರಿದುಬಂದಿದೆ. ಚೀನಾದ ಸಾಮಾಜಿಕ ಮಾಧ್ಯಮ ವೈಬೊದಲ್ಲಿ ಜನರು ತಮ್ಮ ಕೋಪವನ್ನು ತೀವ್ರವಾಗಿ ವ್ಯಕ್ತಪಡಿಸಿದ್ದಾರೆ. ಆಹಾರ ಭದ್ರತೆ ಬಗ್ಗೆ ಜನರು ತೀವ್ರ ಕಳವಳ ವ್ಯಕ್ತಪಡಿಸಿದ್ದು, ಬೆಕ್ಕಿನ ಮಾಂಸವನ್ನು ಹಂದಿ ಅಥವಾ ಮಟನ್ ಎಂದು ಮಾರಾಟ ಮಾಡಲು ಹೊರಟಿದ್ದಾರೆ ಎಂದು ತಿಳಿದು ಜನರು ಆಕ್ರೋಶಗೊಂಡಿದ್ದಾರೆ.

ಚೀನಾದಲ್ಲಿ, ನಾಯಿ ಮತ್ತು ಹಂದಿ ಮಾಂಸವನ್ನು ಸಾಮಾನ್ಯವಾಗಿ ವಿಶೇಷ ಆದ್ಯತೆ ನೀಡಲಾಗುತ್ತದೆ. ಅವುಗಳಿಂದ ಹೊಸ ಬಗೆಯ ತಿನಿಸುಗಳನ್ನು ತಯಾರಿಸುತ್ತಾರೆ.

ಇದನ್ನೂ ಓದಿ: KSP: ಪೊಲೀಸ್‌ ಹುದ್ದೆ ಆಕಾಂಕ್ಷಿಗಳೇ ಇತ್ತ ಗಮನಿಸಿ, 454 ಪೊಲೀಸ್‌ ಕಾನ್ಸ್‌ಟೇಬಲ್‌ ಪರೀಕ್ಷೆಗೆ ಮತ್ತೊಮ್ಮೆ ದಿನಾಂಕ ಬದಲಾವಣೆ!!!

Leave A Reply

Your email address will not be published.