Life Certificate: ಪಿಂಚಣಿದಾರರೇ ಗಮನಿಸಿ- ಮನೆಯಲ್ಲೇ ಕೂತು ‘ಲೈಫ್ ಸರ್ಟಿಫಿಕೇಟ್’ಗೆ ಹೀಗೆ ಅರ್ಜಿ ಸಲ್ಲಿಸಿ

Business news good news for pension holders submit life certificate from home here is detail

Life Certificate: ಕೇಂದ್ರ ಸರ್ಕಾರವು ಪಿಂಚಣಿದಾರರಿಗೆ p/(Pension Holders)ತುಟ್ಟಿಭತ್ಯೆಯನ್ನು(DA)ಶೇಕಡ 4 ರಷ್ಟು ಏರಿಕೆ ಮಾಡಿದೆ. ಇದರ ಜೊತೆಗೆ ಇತರ ಸರ್ಕಾರಿ ನೌಕರರು ಕೂಡ ನಿಗದಿತ ಸಮಯಕ್ಕೆ ಪಿಂಚಣಿ ಪಡೆಯಲು ವರ್ಷಕ್ಕೊಮ್ಮೆ ತಮ್ಮ ‘ಲೈಫ್ ಸರ್ಟಿಫಿಕೇಟ್ (‘Life Certificate)ನೀಡಬೇಕಾಗುತ್ತದೆ.

ಲೈಫ್ ಸರ್ಟಿಫಿಕೇಟ್ ವಾಸ್ತವವಾಗಿ ಬಯೋಮೆಟ್ರಿಕ್ ಡಿಜಿಟಲ್ ಸೇವೆಯಾಗಿದ್ದು, ಇದು ಕೇಂದ್ರ, ರಾಜ್ಯ ಸರ್ಕಾರ ಮತ್ತು ಇತರ ಯಾವುದೇ ಸರ್ಕಾರಿ ಸಂಸ್ಥೆಗಳ ನೌಕರರಿಗೆ ಪಿಂಚಣಿ ಪಡೆಯಲು ಸಹಕರಿಸುತ್ತದೆ. 80 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಪಿಂಚಣಿದಾರರಿಗೆ ಜೀವನ ಪ್ರಮಾಣ ಪತ್ರವನ್ನು (Life Certificate)ಸಲ್ಲಿಸಲು ಅಕ್ಟೋಬರ್ 1, 2023 ರಿಂದ ನವೆಂಬರ್ 30, 2023 ರವರೆಗೆ ಗಡುವು ನೀಡಲಾಗಿದೆ. 60 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು ನವೆಂಬರ್ 1 ರಿಂದ ನವೆಂಬರ್ 30 ರವರೆಗೆ ಅರ್ಜಿ ಸಲ್ಲಿಸಲು ಅನುವು ಮಾಡಿಕೊಡಲಾಗಿದೆ. ಈಗ ನೀವು ಲೈಫ್ ಸರ್ಟಿಫಿಕೇಟ್ ಅನ್ನು ಡಿಜಿಟಲ್ ಮೂಲಕ ಕೂಡ ಸಲ್ಲಿಸಬಹುದು. ಈಗ ಮನೆಯಲ್ಲಿ ಕುಳಿತು ಈ ಕೆಲಸವನ್ನು ಮಾಡಬಹುದಾಗಿದ್ದು, ಮನೆ ಬಾಗಿಲಿಗೆ ಬ್ಯಾಂಕಿಂಗ್ ಪರಿಹಾರಗಳ ಲಾಭವನ್ನು ಪಡೆಯಬಹುದಾಗಿದೆ.

ಮನೆಯಿಂದ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಹೀಗೆ ಸಲ್ಲಿಸಿ:

ಮನೆಯಿಂದ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಸಲ್ಲಿಸಲು, ನೀವು ನಿಮ್ಮ ಬ್ಯಾಂಕಿನ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೌಲಭ್ಯವನ್ನು ಆಯ್ಕೆ ಮಾಡಿಕೊಳ್ಳಿ.

* ದೇಶದ ಅತಿದೊಡ್ಡ ಬ್ಯಾಂಕ್ ಎಸ್ಬಿಐನ ವೆಬ್ ಸೈಟ್ ಮಾಹಿತಿ ಅನುಸಾರ, ನೀವು ನಿಮ್ಮ ಹೋಮ್ ಶಾಖೆಗೆ ಭೇಟಿ ನೀಡಬೇಕು.
* ಇದಾದ ಬಳಿಕ, ಗ್ರಾಹಕರು ಈ ಸೇವೆಯನ್ನು ಡೋರ್ ಸ್ಟೆಪ್ ಬ್ಯಾಂಕಿಂಗ್ ಅಪ್ಲಿಕೇಶನ್, ಆನ್ನೈನ್ ಬ್ಯಾಂಕಿಂಗ್, ಟೋಲ್ ಫ್ರೀ ಸಂಖ್ಯೆಯಿಂದ ಕಾಯ್ದಿರಿಸಬಹುದು.
* ಬ್ಯಾಂಕಿಂಗ್ ಏಜೆಂಟ್ ಮನೆಗೆ ಬಂದು ನಿಮ್ಮಿಂದ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಸ್ವೀಕರಿಸುತ್ತಾರೆ.
*ಪಿಂಚಣಿದಾರರು ಆಧಾರ್ ಸಂಖ್ಯೆಯನ್ನು ಹೊಂದಿಬೇಕು. ಇದರ ಜೊತೆಗೆ ಪಿಂಚಣಿದಾರರ ನೋಂದಾಯಿತ ಮೊಬೈಲ್ ಸಂಖ್ಯೆ ಸಕ್ರಿಯವಾಗಿರಬೇಕು.
* ನಿಮ್ಮ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ನೋಂದಾಯಿಸಬೇಕು.
* ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡುವ ಮೂಲಕ ನೀವು ಮನೆಯಲ್ಲಿ ಕುಳಿತು ಜೀವನ ಪ್ರಮಾಣಪತ್ರವನ್ನು ಸಲ್ಲಿಸಲು 155299 ಮನವಿ ಸಲ್ಲಿಸಬಹುದು.

ಇದನ್ನೂ ಓದಿ: Ration Card: ಎರಡೆರಡು ರೇಷನ್ ಕಾರ್ಡ್ ಹೊಂದಿರೋ ಅತ್ತೆ- ಸೊಸೆಯರಿಗೆ ಬಿಗ್ ಶಾಕ್- ಬಂತು ನೋಡಿ ಹೊಸ ಟಫ್ ರೂಲ್ಸ್

Leave A Reply

Your email address will not be published.