Ration Card: ಎರಡೆರಡು ರೇಷನ್ ಕಾರ್ಡ್ ಹೊಂದಿರೋ ಅತ್ತೆ- ಸೊಸೆಯರಿಗೆ ಬಿಗ್ ಶಾಕ್- ಬಂತು ನೋಡಿ ಹೊಸ ಟಫ್ ರೂಲ್ಸ್

Ration Card new rules Big shock for mothers-in-law and daughter in law

Ration Card new rules: ಕರ್ನಾಟಕ ರಾಜ್ಯದಲ್ಲಿ ಗೃಹಲಕ್ಷ್ಮೀ ಯೋಜನೆಯ (Gurha Lakshmi Yojana)ಮೂಲಕ ಪ್ರತೀ ಮನೆಯ ಯಜಮಾನಿಗೆ ಪ್ರತೀ ತಿಂಗಳು 20000 ರೂಪಾಯಿ ಹಣವನ್ನು ಬ್ಯಾಂಕ್ ಖಾತೆಗೆ‌ ನೇರ ವರ್ಗಾವಣೆ (DBT)ಜಮೆ ಮಾಡಲಾಗುತ್ತಿದೆ. ಈ ನಡುವೆ, ರಾಜ್ಯ ಸರಕಾರದ ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆಯಲು ಈಗ ಒಂದೇ ಮನೆಯಲ್ಲಿ ಇಬ್ಬರು ಯಜಮಾನಿಯರು ಯೋಜನೆಯ ಲಾಭ ಪಡೆಯಲು ಅರ್ಜಿ ಸಲ್ಲಿಸುತ್ತಿದ್ದಾರೆ. ಮಾಸಿಕ 2,000 ರೂ.ಗಳ ಪ್ರಯೋಜನ ಪಡೆಯುವ ಸಲುವಾಗಿ ಅತ್ತೆ, ಸೊಸೆ ಪ್ರತ್ಯೇಕ ರೇಶನ್‌ ಕಾರ್ಡ್‌(Ration Card)ಮಾಡಿಸಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚು ವರದಿಯಾಗುತ್ತಿದೆ.

ಗೃಹ ಲಕ್ಷ್ಮೀ ಯೋಜನೆಯ ಗರಿಷ್ಠ ಲಾಭ ಪಡೆಯುವ ನಿಟ್ಟಿನಲ್ಲಿ ಒಂದೇ ಮನೆಯಲ್ಲಿ ವಾಸವಿರುವ ಅತ್ತೆ (Mother In law)ಮತ್ತು ಸೊಸೆ ಪ್ರತ್ಯೇಕ ರೇಶನ್ ಕಾರ್ಡ್ ಗಳನ್ನು ಮಾಡಿಸಿಕೊಳ್ಳುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿದೆ. ಹೀಗಾಗಿ ಆಹಾರ ಇಲಾಖೆ ನವೆಂಬರ್ 1ರಿಂದ ಪಡಿತರ ಚೀಟಿ ತಿದ್ದುಪಡಿಗೆ(Ration Update)ಅನುವು ಮಾಡಿದ್ದು, ಈ ಬಾರಿ ಅತ್ತೆ-ಸೊಸೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲರ್ಟ್ ಆಗಿದ್ದು, ಇಂತಹವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ(Ration Card new rules).

ಪಡಿತರ ಚೀಟಿಗಳ ತಿದ್ದುಪಡಿಗೆ ಆಹಾರ ಇಲಾಖೆ ಅ.19ರಿಂದ 21ರವರೆಗೆ ಕಾಲಾವಕಾಶ ನೀಡಿದ್ದು, ಈ ನಡುವೆ ಸಮಸ್ಯೆಯಿಂದ ಈ ಅವಧಿಯಲ್ಲಿ ಬಹುತೇಕ ಪಡಿತರ ಕಾರ್ಡ್‌ಗಳು ತಿದ್ದುಪಡಿಯಾಗಿಲ್ಲ. ಆದರೆ ತಿದ್ದುಪಡಿಯಾದ ಸುಮಾರು ಒಂದು ಸಾವಿರ ಕಾರ್ಡ್‌ಗಳ ಪೈಕಿ ಹೆಚ್ಚಿನ ಸಂಖ್ಯೆಯಲ್ಲಿ ನಮೂದಾಗಿರುವ ಕುಟುಂಬದ ಸದಸ್ಯರ ಹೆಸರು ತೆಗೆದುಹಾಕುವ ಸಲುವಾಗಿ ಬಂದಿದೆ ಎನ್ನಲಾಗಿದೆ. ಪ್ರಸ್ತುತ ನವೆಂಬರ್ 1ರಿಂದ ಆಹಾರ ಇಲಾಖೆ ಮತ್ತೊಮ್ಮೆ ಪಡಿತರ ಚೀಟಿಗಳ ತಿದ್ದುಪಡಿಗೆ ಅನುವು ನೀಡಲಿದ್ದು, ಈ ಸಂದರ್ಭದಲ್ಲಿ ಹೆಸರು ತೆಗೆದುಹಾಕುವ ಅರ್ಜಿಗಳ ಬಗ್ಗೆ ಕೂಲಂಕಷ ಪರಿಶೀಲಿಸಲು ಇಲಾಖೆ ತೀರ್ಮಾನ ಕೈಗೊಂಡಿದೆ.

ಇದನ್ನೂ ಓದಿ: SSLC ಗಣಿತ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಈ ಸಲಹೆ ನಿಮಗೆ ಉಪಕಾರಿ!!! ವಿದ್ಯಾರ್ಥಿಗಳೇ ತಪ್ಪದೇ ಓದಿ!!!

Leave A Reply

Your email address will not be published.